Advertisement

ಪತ್ರಕರ್ತರಿಗೆ ತಾಳ್ಮೆಯೇ ಬಂಡವಾಳ

03:44 PM Dec 25, 2019 | Naveen |

ಶಿವಮೊಗ್ಗ: ಹಣ ಮಾಡುವ ಉದ್ದೇಶದಿಂದ ಛಾಯಾಚಿತ್ರ ಪತ್ರಿಕೋದ್ಯಮವನ್ನು ಆಯ್ಕೆ ಮಾಡುವವರು ಇಲ್ಲಿ ಏನನ್ನೂ ಸಾಧಿ ಸಲಾರರು ಎಂದು ಹಿರಿಯ ಛಾಯಾಚಿತ್ರ ಪತ್ರಕರ್ತ ಗೋಪಿನಾಥನ್‌ ಅಭಿಪ್ರಾಯಪಟ್ಟರು.

Advertisement

ನಗರದ ಕಟೀಲ್‌ ಅಶೋಕ್‌ ಪೈ ಸ್ಮಾರಕ ಕಾಲೇಜಿನ ಬಹುಮುಖೀ ಸಭಾಂಗಣದಲ್ಲಿ ಪತ್ರಿಕೊದ್ಯಮ ವಿಭಾಗವು ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಎರಡು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರಿಗೆ ತಾಳ್ಮೆಯೇ ಮೂಲ ಬಂಡವಾಳ. ಕ್ಷಣಕ್ಷಣಕ್ಕೂ ಹೊಸತನ್ನು ಹುಡುಕುವ ಹುಮ್ಮಸ್ಸು ಇಟ್ಟುಕೊಳ್ಳಬೇ ಎಂದರು.

ಯಶಸ್ಸು ರಾತ್ರಿ ಮಲಗಿ ಬೆಳಗ್ಗೆ ಎದ್ದೇಳುವುದರೊಳಗೆ ಸಿಗುವುದಿಲ್ಲ. ನಿರಂತರ ಪರಿಶ್ರಮ ಅಗಾಧ ತಾಳ್ಮೆ ಉಳ್ಳವರಿಗಷ್ಟೇ ದಕ್ಕುವುದು. ಅಂತಹ ಅನೇಕ ಸನ್ನಿವೇಶಗಳನ್ನು ಹಗಲು ರಾತ್ರಿ ನಿದ್ರೆ, ಊಟಗಳಿಲ್ಲದೆ ನನ್ನ ವೃತ್ತಿ ಬದುಕನ್ನು ಸಂಭ್ರಮಿಸಿದ್ದೇನೆ. ನಮ್ಮ ತ್ಯಾಗ ಸಮಾಜಕ್ಕೊಂದು ಪರಿಹಾರವಾಗುವುದಾದರೇ ನಾವು ಯಾವತ್ತಿಗೂ ಭ್ರಷ್ಟಾಚಾರದಲ್ಲಿ ಸಿಲುಕದೇ ನಮ್ಮ ಕರ್ತವ್ಯಕ್ಕೆ ನ್ಯಾಯ ಒದಗಿಸಬೇಕು ಎಂದರು.

ಮಾನಸ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ರಾಜೇಂದ್ರ ಚೆನ್ನಿ ಮಾತನಾಡಿ, ಛಾಯಾಗ್ರಹಣ ಎಂಬುದು ಜಗತ್ತನ್ನು ಅರ್ಥಮಾಡಿಕೊಳ್ಳುವ ಒಂದು ಪ್ರಯೋಗ. ಇದು ದೃಷ್ಟಿಕೋನಗಳನ್ನು ರೂಪಿಸುವುದಷ್ಟೇ ಅಲ್ಲ, ಪರಿಣಾಮಕಾರಿಯಾಗಿ ವಾಸ್ತವವನ್ನು ಅರಿವಿಗೆ ತರುವಂತಹ ಪ್ರಭಾವಶಾಲಿ ಮಾಧ್ಯಮ ಎಂದರು.

ತಂತ್ರಜ್ಞಾನ ಬದಲಾದ ಮೇಲೆ ಮನುಷ್ಯನ ಚರಿತ್ರೆಯಲ್ಲಿ ಬದಲಾವಣೆ ಆಯಿತು. ಛಾಯಾಚಿತ್ರ ಮಾಧ್ಯಮ ಯುದ್ಧದ ಸಂದರ್ಭಗಳಲ್ಲಿ ವಿಭಿನ್ನವಾದ ಚಿಂತನಾ ಕ್ರಮ ಹುಟ್ಟುಹಾಕಿತು. ಯುದ್ಧ ವಿರೋಧಿಯಾದ ಅಸ್ತ್ರವಾಯಿತು. ಬಡವರು, ನಿರ್ಗತಿಕರ ಧ್ವನಿಯಾಯಿತು. ಮನುಜತೆಯ ಅಸ್ತ್ರವಾಯಿತು. ಛಾಯಾಚಿತ್ರ ಪತ್ರಿಕೋದ್ಯಮ ಫೋಟೋಗಳನ್ನು ಸಿಗಿಸುವ ಮಾಧ್ಯಮವಷ್ಟೇ ಅಲ್ಲ, ಅದು ಬೆಳೆದು ಬಂದ ಹಾದಿಯನ್ನು ಗಮನದಲ್ಲಿಟ್ಟುಕೊಂಡು ಪತ್ರಿಕೋದ್ಯಮ ವಿದ್ಯಾರ್ಥಿಗಳು ಕಲಿಯಬೇಕು, ಅಳವಡಿಸಿಕೊಳ್ಳಬೇಕು ಎಂದರು.

Advertisement

ಪ್ರಾಂಶುಪಾಲರಾದ ಡಾ.ಸಂಧ್ಯಾ ಕಾವೇರಿ ಮಾತನಾಡಿ, ಸಮುದಾಯದಲ್ಲಿ ಮಾನಸಿಕ ಆರೋಗ್ಯ ಹೆಚ್ಚಿಸಿಕೊಳ್ಳಲು ಎಲ್ಲಾ ಪ್ರಕಾರದ ಮಾಧ್ಯಮಗಳನ್ನು ಬಳಸಿಕೊಳ್ಳಬೇಕಾಗುತ್ತದೆ. ಹಾಗಾಗಿ ಛಾಯಾಚಿತ್ರ ಮಾಧ್ಯಮ ಬಳಸುವ ಕೌಶಲ ಕಲಿತುಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಎರಡು ದಿನ ಕಾರ್ಯಕ್ರಮದಲ್ಲಿ ಕಟೀಲ್‌ ಅಶೋಕ್‌ ಪೈ ಸ್ಮಾರಕ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಕುವೆಂಪು ವಿಶ್ವವಿದ್ಯಾಲಯ ಮತ್ತು ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಎರಡು ದಿನದ ಕಾರ್ಯಾಗಾರದಲ್ಲಿ ಸುದ್ದಿ ಛಾಯಾಚಿತ್ರ ಪತ್ರಿಕೋದ್ಯಮದ ವಿವಿಧ ಪ್ರಯೋಗಗಳನ್ನು ತಿಳಿಸುವುದರ ಜತೆಗೆ ವಿದ್ಯಾರ್ಥಿಗಳಲ್ಲಿರುವ ಸೃಜನಾತ್ಮಕತೆಯನ್ನು ಅನಾವರಣಗೊಳಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಗೋಪಿನಾಥನ್‌, ಮುಖ್ಯ ಅತಿಥಿಗಳಾಗಿ ಡಾ. ರಾಜೇಂದ್ರ ಚೆನ್ನಿ ಮತ್ತು ಮಾನಸ ಟ್ರಸ್ಟಿನ ರಜನಿ ಎ.ಪೈ, ಕಟೀಲ್‌ ಅಶೋಕ್‌ ಪೈ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಧ್ಯಾ ಕಾವೇರಿ, ಪತ್ರಿಕೋದ್ಯಮ ವಿಭಾಗದ ಕವಿತಾ ಕಮ್ಮನಕೋಟೆ ಮತ್ತು ವಿಭಾ ಡೋಂಗ್ರೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next