ಶಿವಮೊಗ್ಗ: ಪೆಗಾಸಸ್ ತಂತ್ರಾಂಶದ ಮೂಲಕ ಇಡೀ ದೇಶದಲ್ಲಿ ಬೇಹುಗಾರಿಕೆ ನಡೆಸಿ ಅ ಧಿಕಾರಕ್ಕೆ ಬಂದ ಕೇಂದ್ರ ಸರ್ಕಾರವನ್ನು ರಾಷ್ಟಪತಿಗಳು ಕೂಡಲೇ ವಜಾ ಮಾಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಆಗ್ರಹಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆಗಾಸಸ್ ಎಂಬುದು ಇಸ್ರೇಲ್ ಕಂಪೆನಿ ರಚಿಸಿದ ತಂತ್ರಾಂಶವಾಗಿದ್ದು, ಇದನ್ನು ದೇಶಗಳು ಭಯೋತ್ಪಾದನೆ ನಿಗ್ರಹ ಮತ್ತು ದೇಶ ರಕ್ಷಣೆಗಾಗಿ ಉಪಯೋಗಿಸುತ್ತವೆ. ಭಾರತ ಕೂಡ ಇದೇ ಉದ್ದೇಶಕ್ಕೆ ಇದನ್ನು ಖರೀದಿಸಿ ದುರ್ಬಳಕೆ ಮಾಡಿಕೊಂಡಿದೆ. ಇದೊಂದು ಹೀನಾಯ ಕೃತ್ಯವಾಗಿದ್ದು, ಇದಕ್ಕೆ ಕಾರಣಕರ್ತರಾದ ಮೋದಿ ಹಾಗೂ ಅಮಿತ್ ಶಾ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.
ಕರ್ನಾಟಕವೂ ಸೇರಿದಂತೆ ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳು ಅಧಿ ಕಾರದಲ್ಲಿರುವ ರಾಜ್ಯಗಳ ಪ್ರಮುಖ ನಾಯಕರು, ಕಾಂಗ್ರೆಸ್ ರಾಷ್ಟಾಧ್ಯಕ್ಷರು, ಸುಪ್ರೀಂ ಕೋರ್ಟ್ ನ್ಯಾಯಾ ಧೀಶರು, ಚುನಾವಣಾ ಆಯುಕ್ತರು, ನಾಡಿನ ಪ್ರಮುಖ ಪತ್ರಕರ್ತರು ಸೇರಿದಂತೆ ತಮಗೆ ಆಗದ ವ್ಯಕ್ತಿಗಳ ಚಲನವಲನಗಳ ಬಗ್ಗೆ ನಿಗಾ ಇರಿಸಲು ಫೋನ್ ಗಳನ್ನು ಕದ್ದಾಲಿಕೆ ಮಾಡಿ, ಬ್ಲಾಕ್‌ವೆುàಲ್ ತಂತ್ರಗಾರಿಕೆ ಅನುಸರಿಸಿ ಅ ಧಿಕಾರಕ್ಕೆ ಬಂದಿದ್ದಾರೆ. ಇದರಿಂದ ಮೋದಿ ಅವರ ಅಸಲಿ ಮುಖವಾಡ ಜಗಜ್ಜಾಹೀರಾಗಿದೆ ಎಂದರು.
ಸುಪ್ರೀಂಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್, ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂ ಧಿ, ಸೋನಿಯಾ ಗಾಂಧಿ , ಪ್ರಿಯಾಂಕಾ ಗಾಂಧಿ , ತೃಣಮೂಲ ಕಾಂಗ್ರೆಸ್ ಅ ಧಿನಾಯಕಿ ಮಮತಾ ಬ್ಯಾನರ್ಜಿ, ಅಭಿಷೇಕ್ ಬ್ಯಾನರ್ಜಿ, ಸುಬೇಂದು ಅ ಧಿಕಾರಿ, ಚುನಾವಣಾ ತಂತ್ರಗಾರಿಕೆ ನಿಪುಣ ಪ್ರಶಾಂತ್ ಕಿಶೋರ್, ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟಿಯ ಮಾಜಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ತೊಗಾಡಿಯಾ, ಸಿದ್ದರಾಮಯ್ಯ (ಆಪ್ತ ಸಹಾಯಕ), ಹಾಲಿ ಸಿಎಂ ಯಡಿಯೂರಪ್ಪ ಸೇರಿದಂತೆ ತಮ್ಮನ್ನು ವಿರೋಧಿ ಸಿದವರನ್ನು ಹಣಿಯಲು ಪೆಗಾಸಸ್ ಬೇಹುಗಾರಿಕೆ ಅಸ್ತ ಪ್ರಯೋಗ ಮಾಡಿದ್ದಾರೆ ಎಂದರು.
ಇದರಿಂದ ಜೆಡಿಎಸ್ -ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಪತನಕ್ಕೂ ಕಾರಣವಾಯಿತು. ಅಲ್ಲದೆ, ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳ ಪ್ರಮುಖ ನಾಯಕರನ್ನು ಈ ತಂತ್ರಾಂಶದ ಮೂಲಕ ಬೇಹುಗಾರಿಕೆ ನಡೆಸಿ ಬ್ಲಾಕ್‌ವೆುಲ್ ತಂತ್ರ ಪ್ರಯೋಗಿಸಿ ಅವರನ್ನು ಸೆಳೆದು ಅ ಧಿಕಾರ ಗ್ರಹಣ ಮಾಡಿದ್ದಾರೆಯೇ ವಿನಹ ಸಮರ್ಪಕ ಜನಾದೇಶದಿಂದ ಅಲ್ಲ ಎಂದ ಅವರು, ಕಳೆದ ಲೋಕಸಭೆ ಚುನಾವಣೆಯಲ್ಲಿ ಇದೇ ತಂತ್ರಗಾರಿಕೆ ಬಳಸಿದ್ದಾರೆ ಎಂದು ಆಪಾದಿಸಿದರು. ಕೇಂದ್ರ ಸರ್ಕಾರದ ಈ ಬೇಹುಗಾರಿಕೆ ಕೃತ್ಯವನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಂದ ಸೂಕ್ತ ತನಿಖೆ ನಡೆಸಬೇಕು. ಪ್ರಪಂಚದೆದುರು ಭಾರತ ತಲೆ ತಗ್ಗಿಸುವಂತೆ ಮಾಡಿದ ಈ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಪಾಲಿಕೆ ವಿಪಕ್ಷ ನಾಯಕಿ ಯಮುನಾ ರಂಗೇಗೌಡ, ಪಾಲಿಕೆ ಸದಸ್ಯ ಎಚ್.ಸಿ. ಯೋಗೀಶ್, ಪ್ರಮುಖರಾದ ವಿಶ್ವನಾಥ್ ಕಾಶಿ, ನಾಗರಾಜ್, ಎನ್.ಡಿ. ಪ್ರವೀಣ್ ಕುಮಾರ್, ಚಂದನ್, ಆಕಾಶ್ ಮತ್ತಿತರರು ಇದ್ದರು.