Advertisement

12ನೇ ಶತಮಾನದ ದಾರ್ಶನಿಕರ ಕೊಡುಗೆ ಅಪಾರ

01:17 PM Feb 03, 2020 | Naveen |

ಶಿವಮೊಗ್ಗ: ಬಸವಣ್ಣ, ಅಕ್ಕಮಹಾದೇವಿ, ಸವಿತಾ ಮಹರ್ಷಿ ಸೇರಿದಂತೆ ಅನೇಕ ಜ್ಞಾನಿಗಳು 12ನೆ ಶತಮಾನದ ಸಮಕಾಲೀನರು. ಸಮಾಜದಲ್ಲಿ ಇರುವ ಅಪನಂಬಿಕೆ ಹಾಗೂ ಅಂಕುಡೊಂಕುಗಳನ್ನು ತಿದ್ದಲು ಪ್ರಯತ್ನಿಸಿದ ಮಹನೀಯರು ಎಂದು ಅಪರ ಜಿಲ್ಲಾಧಿಕಾರಿ ಅನುರಾಧಾ ಹೇಳಿದರು.

Advertisement

ನಗರದ ಕುವೆಂಪು ರಂಗಮಂದಿರದಲ್ಲಿ ಶನಿವಾರ ಸಂಜೆ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸವಿತಾ ಮಹರ್ಷಿಯವರು ಸುಮಾರು 3 ಸಾವಿರ ವಚನಗಳನ್ನು ಬರೆದಿದ್ದಾರೆ. ಇವತ್ತಿನ ಕಾಲದಲ್ಲೂ ಅವರ ಆಧುನಿಕ ವಿಚಾರಗಳು ಪ್ರಸ್ತುತವಾಗಿವೆ. ಇದಕ್ಕೆ ನಾವು ಮಹತ್ವ ಕೊಡಬೇಕು. ಮೂಢನಂಬಿಕೆಗಳನ್ನು ತೊರೆದು ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು.

ಪ್ರತಿಯೊಬ್ಬರೂ ವಿದ್ಯೆ ಪಡೆಯಬೇಕು. ಆಗ ಮಾತ್ರ ಶ್ರೀಮಂತ- ಬಡವ, ಮೇಲು-ಕೀಳು ಎಂಬ ಮನೋಭಾವನೆ ಬರಲು ಸಾಧ್ಯವಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿ ಇರಬೇಕು. ಸಮಾಜದಲ್ಲಿ ಇರುವಂತಹ ಕೆಡುಕುಗಳನ್ನು ತೊರೆದು ನಡೆದರೆ ಮಾತ್ರ ಅಭಿವೃದ್ಧಿ ಸಾಧಿಸುವುದಕ್ಕೆ ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.

ಕುವೆಂಪು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ| ಜಿ. ರಘುನಂದನ್‌ ಮಾತನಾಡಿ, ಸವಿತಾ ಸವಿತಾ ಮಹರ್ಷಿ ಅವರು ವೇದಗಳಲ್ಲಿ ಒಂದಾದ “ಸಾಮವೇದ’ ರಚಿಸಿದವರು. ಸಾಮವೇದ ಎಂದರೆ ಅದುವೇ “ಸಂಗೀತ’. ಮಾಘಮಾಸ ಶುಕ್ಲಪಕ್ಷದ ರಥಸಪ್ತಮಿಯ ದಿನದಂದು ಸವಿತಾ ಮಹರ್ಷಿಯ ದಿನಾಚರಣೆಯನ್ನು ಮಾಡಲಾಗುತ್ತದೆ ಎಂದರು.

Advertisement

ಕಾಶಿಯಲ್ಲಿ ಸಿಕ್ಕಿರುವ ನವಿಕ್‌ ಎಂಬ ಪೌರಾಣಿಕ ಗ್ರಂಥದಲ್ಲಿ ಸವಿತಾ ಮಹರ್ಷಿ ಜನ್ಮ ರಹಸ್ಯ ಅಡಕವಾಗಿದೆ ಎಂದರು. ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರು ಯಜ್ಞ ಮಾಡುವಾಗ ನಿರತರಾಗಿದ್ದ ವೇಳೆ ತಮ್ಮ ಸೇವೆಗೆಂದು ಪರಶಿವ ತನ್ನ ಬಲಗಣ್ಣಿನಿಂದ ಸವಿತಾ ಮಹರ್ಷಿಯನ್ನು ಸೃಷ್ಟಿಸಿದ್ದಾನೆ ಎಂದು ಹೇಳಿದರು.

ಕಲಾವಿದ ಜಿ. ರವಿ ಅವರ ತಂಡದ ವತಿಯಿಂದ ಸ್ಯಾಕ್ಸೋಫೋನ್‌ ವಾದನ ಕಾರ್ಯಕ್ರಮ ನಡೆಯಿತು. ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ| ಜಿ. ರಘುನಂದನ್‌, ಪಾಲಿಕೆಯ ಸದಸ್ಯ ವಿಶ್ವಾಸ್‌, ಜಿಲ್ಲಾ ಸವಿತಾ ಸಮಾಜ ಸನ್ಮಾನ ಅಧ್ಯಕ್ಷ ಕೆ. ಮೋಹನ್‌ ಮತ್ತು ಜಿಲ್ಲಾ ಸವಿತಾ ಸಮಾಜದ ತಾಲೂಕು ಅಧ್ಯಕ್ಷ ಬಿ.ಎನ್‌. ಧರ್ಮರಾಜ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next