Advertisement

Shivamogga ಗಲಭೆ ಪ್ರಕರಣದ ಆರೋಪಿಗಳನ್ನು ಎನ್ ಕೌಂಟರ್ ಮಾಡಬೇಕು: ರೇಣುಕಾಚಾರ್ಯ

05:49 PM Oct 09, 2023 | Team Udayavani |

ಶಿವಮೊಗ್ಗ: ರಾಗಿಗುಡ್ಡದಲ್ಲಿ ನಡೆದ ಗಲಭೆ ಪ್ರಕರಣದ ತಪ್ಪಿತಸ್ಥರನ್ನು ಮುಲಾಜಿಲ್ಲದೆ ಎನ್ ಕೌಂಟರ್ ಮಾಡಬೇಕು ಎಂದು ಮಾಜಿ ಸಚಿವ ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ.

Advertisement

ರಾಗಿಗುಡ್ಡದ ಗಲಭೆ ವಿಚಾರದಲ್ಲಿ ವೋಟ್ ಬ್ಯಾಂಕ್ ರಾಜಕಾರಣ ಯಾರೂ ಮಾಡಬಾರದು. ಖಡ್ಗ, ಔರಂಗಜೇಬನ ಚಿತ್ರ ಪ್ರದರ್ಶನ ಸಂಘರ್ಷಕ್ಕೆ ಕಾರಣವಾಗುತ್ತದೆ. ಜಿಲ್ಲಾಡಳಿತ ತಡೆಯಬೇಕಿತ್ತು, ಅದನ್ನು ಮಾಡಿಲ್ಲ. ಮತಗಳನ್ನು ವಿಭಜನೆ ಮಾಡುವ ಕಾರ್ಯ ನಡೆದಿದೆ.

ಅಪರಾಧಿಗಳನ್ನು ಕೇವಲ ಬಂಧಿಸಿದರೆ ಸಾಲದು, ಎನ್ ಕೌಂಟರ್ ಮಾಡಬೇಕು. ತನಿಖಾಧಿಕಾರಿ ಅಮಾನತು ಆಗಬಾರದಿತ್ತು. ಎಸ್ಪಿ ಹೇಳಿಕೆ ನೋಡಿದೆ, ಹಾಗಾದರೆ ಗಲಾಟೆ ಮಾಡಿದವರು ಯಾರು? ಭಯೋತ್ಪಾದನೆ ಮಟ್ಟಹಾಕದಿದ್ದರೆ ಕಷ್ಟವಾದೀತು ಎಂದರು.

ಯಡಿಯೂರಪ್ಪ ಅವರಂತಹ ನಾಯಕ ದಕ್ಷಿಣ ಭಾರದತದ ಬಿಜೆಪಿಯಲ್ಲಿ ಸಿಗಲಾರರು. ಮೋದಿ ಭಾವಚಿತ್ರ ಹಿಡಿದು ಹೋದರೆ ಮತ ಸಿಗುತ್ತದಾ? ಯಡಿಯೂರಪ್ಪ ಅವರಿಗೆ ಮಾತ್ರ ಮತ ಗಳಿಸುವ ಶಕ್ತಿ ಇದೆ. ಯಡಿಯೂರಪ್ಪ ಕಡೆಗೆಣಿಸಿ ರಬ್ಬರ್ ಸ್ಟ್ಯಾಂಪ್ ರಾಜ್ಯಾಧ್ಯಕ್ಷ ಬೇಕಾ? ಸೈಕಲ್, ಬೈಕ್, ಕಾರಿನ ಮೂಲಕ ಪಕ್ಷ ಸಂಘಟನೆ ಮಾಡಿದ ಯಡಿಯೂರಪ್ಪ ಅವರ ಕಣ್ಣೀರಿನಿಂದ ಬಿಜೆಪಿ ನೆಲಕಚ್ಚಿದೆ. ಅವರನ್ನು ಬಿಟ್ಟು ಬಿಜೆಪಿ ನಿಯಂತ್ರಣ ಮಾಡಿದರೆ ಆಗುತ್ತದಾ? ಕೋರ್ ಕಮಿಟಿ ಯಾಕೆ ಬೇಕು, ನಿಮ್ಮ ನಿಯಂತ್ರಣದಲ್ಲಿ ಬಿಜೆಪಿ ಬೇಕಾ? ಯಡಿಯೂರಪ್ಪ ಅವರನ್ನು ಮುಗಿಸಿದಲ್ಲವೇ? ಆತ್ಮಾವಲೋಕನ ಮಾಡಿಕೊಳ್ಳಿ. ಸರ್ವಾಧಿಕಾರಿ ಧೋರಣೆ ಮಾಡಬೇಡಿ, ಬಿಜೆಪಿ ರಾಜ್ಯಾಧ್ಯಕ್ಷರ ಮೇಲೆ ಗೌರವವಿದೆ ಎಂದು ಮತ್ತೆ ಬಿಜೆಪಿ ನಾಯಕತ್ವದ ವಿರುದ್ದ ಆಕ್ರೋಶ ಹೊರ ಹಾಕಿದರು.

ರಾಜ್ಯಸಭೆ, ವಿಧಾನಪರಿಷತ್ ಗೆ ನೇಮಕ ಆದವರು ಯಾರಿಗೋ ಮಂಡಿಯೂರಿದ್ದಾರೆ. ಹೋರಾಟದ ಹಿನ್ನೆಲೆಯಿಂದ ಬಂದವರು ಯಡಿಯೂರಪ್ಪ. ನಾನು ಕೂಡ ಪಾದಯಾತ್ರೆ ಮಾಡಿ ಬಂದವನು. ರಾಜ್ಯದಲ್ಲಿ ಯಡಿಯೂರಪ್ಪ ನಿರ್ಲಕ್ಷಿಸಿದರೆ ಬಿಜೆಪಿ ಇನ್ನಷ್ಟು ನೆಲೆಕಚ್ಚುತ್ತದೆ. ಯಡಿಯೂರಪ್ಪ ಒಬ್ಬ ಶಿಲ್ಪಿಯಿದ್ದಂತೆ, ನಾನೊಬ್ಬ ಕಾಡುಗೊಲ್ಲನಾಗಿದ್ದೆ. ನನ್ನನ್ನು ಪರಿವರ್ತನೆ ಮಾಡಿದವರು ಯಡಿಯೂರಪ್ಪ. ಅವರು ಇಲ್ಲದಿದ್ದರೆ ನಾನು ಬೀಡಿ ಸೇದುತ್ತ, ಎಣ್ಣೆ ಹೊಡ್ಕೊಂಡು ಇರುತ್ತಿದ್ದೆ ಎಂದರು.

Advertisement

ಗುಜರಾತ್ ಮಾದರಿ ಮಾಡಲು ಹೋಗಿ 70 ಜನ ಹೊಸಬರಿಗೆ ಟಿಕೆಟ್ ನೀಡಿದರು. ಜಗದೀಶ್ ಶೆಟ್ಟರ್ ಅಂಥವರನ್ನು ಕಡೆಗೆಣಿಸಿದರು. ಯಡಿಯೂರಪ್ಪ ಎಲ್ಲ ಸಮುದಾಯದವರಿಗೆ ಮೀಸಲಾತಿ ಕೊಡಲು ಹೋಗಿದ್ದರು, ಅದಕ್ಕೂ ಬ್ರೇಕ್ ಹಾಕಿದರು ಎಂದರು.

ನಾನು ಬಿಜೆಪಿ ಕಟ್ಟಾಳು, ಕೇಸರಿ- ಹಿಂದುತ್ವ ಎಂದಿಗೂ ಇರುತ್ತದೆ. ನಾನು ಸಹ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ, ಆದರೆ ಪಕ್ಷದಲ್ಲಿ ಎಲ್ಲರನ್ನೂ ಒಗ್ಗುಡಿಸಿಕೊಂಡು ಹೊಗುವವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಲಿ. ಎಲ್ಲೋ ಕುತುಕೊಂಡು ಎಲ್ಲರನ್ನೂ ನಿಯಂತ್ರಿಸುವುದು ಸರಿ ಅಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next