Advertisement

ಬೆಲೆ ಏರಿಕೆ ಖಂಡಿಸಿ ಸರಕಾರದ ವಿರುದ್ಧ ಪ್ರತಿಭಟನೆ 

08:17 PM Feb 24, 2021 | Team Udayavani |

ಶಿವಮೊಗ್ಗ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದಿನ ಬಳಕೆ ವಸ್ತುಗಳಾದ ಪೆಟ್ರೋಲ್‌, ಡೀಸೆಲ್‌ ಹಾಗೂ ಅನಿಲ ಬೆಲೆ ಏರಿಕೆ ಮಾಡಿರುವುದನ್ನು ಇಳಿಸಬೇಕೆಂದು ಆಗ್ರಹಿಸಿ ಸೋಶಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ ಜಿಲ್ಲಾ ಶಾಖೆ ಸದಸ್ಯರು ಮಂಗಳವಾರ ಮಹಾವೀರ ವೃತ್ತದಿಂದ ಕಾರು, ಆಟೋ, ಬೈಕ್‌, ಸೈಕಲ್‌ ತಳ್ಳಿಕೊಂಡು ಜಿಲ್ಲಾ ಧಿಕಾರಿಗಳ ಕಚೇರಿವರೆಗೆ ವಿನೂತನ ಪ್ರತಿಭಟನೆ ನಡೆಸಿದರು.

Advertisement

ಕಳೆದ 15 ವರ್ಷಗಳಿಂದ ದೇಶದಲ್ಲಿ ಆಗಾಗ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಾಗುತ್ತಲೆ ಇದೆ. ಇದರ ಹಿಂದೆ ಕಾರ್ಪೋರೆಟ್‌ ತೈಲ ಕಂಪನಿಗಳ ದೊಡ್ಡಮಟ್ಟದ ಹುನ್ನಾರವಿದೆ. ರಾಷ್ಟ್ರವನ್ನು ಬಂಡವಾಳಶಾಹಿಗಳ ನಿಯಂತ್ರಣದಲ್ಲಿ ಕೊಂಡೊಯ್ಯುವ ಪ್ರಯತ್ನ ಇದಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ದೇಶದ ಬಹುಪಾಲು ತೈಲ ಉತ್ಪನ್ನ ಮುಸ್ಲೀಂ ರಾಷ್ಟ್ರಗಳಿಂದ ಅಮದಾಗುತ್ತಿದೆ. ಇತ್ತಿಚಿನ ವರ್ಷಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಗಣನೀಯವಾಗಿ ಇಳಕೆಯಾಗಿರುವುದು ಸಮಾಧಾನಕರ. ಆದರೆ ಕೇಂದ್ರ ಸರ್ಕಾರ ಇದರ ನೇರ ಲಾಭ ತೈಲ ಬಳಕೆದಾರರಿಗೆ ವರ್ಗಾಯಿಸುವ ಬದಲು ಶ್ರೀಮಂತರ ಬೊಕ್ಕಸ ತುಂಬಿಸುವ ಕೆಲಸಮಾಡುತ್ತಿದೆ ಎಂದು ಆರೋಪಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ಗಣನೀಯ ಪ್ರಮಾಣದಲ್ಲಿ ತೈಲ ಉತ್ಪನ್ನಗಳಿಗೆ ಶೇ.60 ರಷ್ಟು ತೆರಿಗೆ ವಿಧಿಸಿ ಜನ ಸಾಮಾನ್ಯರನ್ನು ಲೂಟಿ ಮಾಡುತ್ತಿವೆ. ತೈಲ ಬೆಲೆ ಏರಿಕೆಯಿಂದ ದಿನನಿತ್ಯದ ವಸ್ತುಗಳ ಬೆಲೆಯೂ ಗಗನಕ್ಕೇರುತ್ತಿದೆ. ರಾಜ್ಯ ಸರ್ಕಾರ ತೈಲೋತ್ಪನ್ನಗಳ ಮೇಲಿನ ತೆರಿಗೆ ಕಡಿಮೆ ಮಾಡಿದರೆ ಬೆಲೆ ಏರಿಕೆಯ ಭಾರ ಕಡಿಮೆಯಾಗುತ್ತದೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ದಿನ ಬಳಕೆ ವಸ್ತುಗಳ ಬೆಲೆ ಕಡಿಮೆ ಮಾಡಿ ಜನ ಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಸಲೀಂಖಾನ್‌, ಅಲ್ಲಾಭಕ್ಷಿ, ಕಲೀಂವುಲ್ಲಾ, ಮುಜೀಬ್‌, ಇಮ್ರಾನ್‌, ಅಸೀಫ್‌, ಸಾದೀಕ್‌, ಫೈರೋಜ್‌ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next