Advertisement

ಲಿಂಗತ್ವ ಅಲ್ಪಸಂಖ್ಯಾತರಿಗೆ ಸೌಲಭ್ಯ ಒದಗಿಸಿ

02:30 PM Jan 14, 2022 | Team Udayavani |

ಶಿವಮೊಗ್ಗ: ಲಿಂಗತ್ವ ಅಲ್ಪಸಂಖ್ಯಾತರಿಗೆ ಅಗತ್ಯವಾಗಿರುವಮೂಲ ಸೌಲಭ್ಯಗಳನ್ನು ಒದಗಿಸಿ, ಸಮಾಜದಮುಖ್ಯವಾಹಿನಿಗೆ ಕರೆ ತರುವ ಅಗತ್ಯವಿದೆ ಎಂದು ನೂತನಜಿಲ್ಲಾ ಧಿಕಾರಿ ಡಾ| ಸೆಲ್ವಮಣಿ ಹೇಳಿದರು.

Advertisement

ಗುರುವಾರ ಜಿಲ್ಲಾಡಳಿತ, ಜಿಲ್ಲಾ ಕೌಶಲ್ಯಾಭಿವೃದ್ಧಿಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ,ರûಾ ಸಮುದಾಯ ಸಂಘದ ಆಶ್ರಯದಲ್ಲಿ ಜಿಲ್ಲಾ ವಾಣಿಜ್ಯಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ “ಲಿಂಗತ್ವಅಲ್ಪಸಂಖ್ಯಾತರು-ಸಮಾಜದ ಮುಖ್ಯವಾಹಿನಿಯೆಡೆಗೆ’ಎಂಬ ವಿಷಯದ ಕುರಿತು ಲಿಂಗತ್ವ ಅಲ್ಪಸಂಖ್ಯಾತರಿಗಾಗಿಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿಅವರು ಮಾತನಾಡಿದರು.ಲಿಂಗತ್ವ ಅಲ್ಪಸಂಖ್ಯಾತರಿಗೆ ಪುನರ್‌ವಸತಿ ಸೇರಿದಂತೆಹಲವು ಕಾರ್ಯಕ್ರಮಗಳ ಅರಿವು ಮೂಡಿಸಬೇಕು.

ಅಲ್ಲದೆ ಇತರರಂತೆ ಬದುಕು ನಡೆಸುವಂತಾಗಲು ಅಗತ್ಯಕ್ರಮ ಕೈಗೊಳ್ಳಬೇಕಾದ ಅವಶ್ಯಕತೆ ಇದೆ. ಇವರು ತಮ್ಮನೆಮ್ಮದಿಯ ಬದುಕಿಗೆ ಉದ್ಯೋಗಾವಕಾಶ, ಸಾಲ-ಸೌಲಭ್ಯ,ಇತರೆ ಆರ್ಥಿಕ ನೆರವು ಸೇರಿದಂತೆ ಸರ್ಕಾರದ ಯಾವುದೇಸೌಲಭ್ಯಗಳಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕುಎಂದರು.

ಲಿಂಗತ್ವ ಅಲ್ಪಸಂಖ್ಯಾತರಿಗೆ ಬ್ಯಾಂಕ್‌ಖಾತೆ, ಆಧಾರ್‌ಕಾರ್ಡ್‌, ಮತದಾರರ ಗುರುತಿನ ಚೀಟಿ ದೊರೆಯುವಂತೆನೋಡಿಕೊಳ್ಳಬೇಕು. ಅಲ್ಲದೆ ಕಾಲ ಕಾಲಕ್ಕೆ ಆರೋಗ್ಯತಪಾಸಣೆಗೆ ಅನುವು ಮಾಡಿಕೊಡುವಂತೆ ಅಧಿ ಕಾರಿಗಳಿಗೆಸೂಚಿಸಿದ ಅವರು, ಲಿಂಗತ್ವ ಅಲ್ಪಸಂಖ್ಯಾತರೂ ಸಹತಮಗೆ ದೊರೆಯುವ ಸರ್ಕಾರದ ಸೌಲಭ್ಯಗಳನ್ನುಪಡೆದುಕೊಳ್ಳುವಂತೆ ಸಲಹೆ ನೀಡಿದರು.

ರಾಜ್ಯದಲ್ಲಿ ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆಕರೆತರುವ ನಿಟ್ಟಿನಲ್ಲಿ ಆಯೋಜಿಸಲಾಗಿರುವ ಈಕಾರ್ಯಕ್ರಮ ಮಹತ್ವದ್ದಾಗಿದೆ ಎಂದ ಅವರು,ಕೌಶಲ್ಯಾಭಿವೃದ್ಧಿ ತರಬೇತಿ ಪಡೆದು ಸ್ವಾವಲಂಬನೆಯಬದುಕಿಗೆ ದಾರಿ ಕಂಡುಕೊಳ್ಳಬೇಕು. ಸಮಾಜದಲ್ಲಿಎಲ್ಲರಂತೆ ಎಲ್ಲಾ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡುಆರ್ಥಿಕವಾಗಿ ಸದೃಢರಾಗಬೇಕೆಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next