Advertisement

ಸ್ವಾಮಿ ವಿವೇಕಾನಂದರು ದೇಶದ ಹೆಮ್ಮೆ: ಈಶ್ವರಪ್ಪ

07:35 PM Jan 13, 2022 | Adarsha |

ಶಿವಮೊಗ್ಗ: ಜಾತಿ, ಧರ್ಮಗಳ ಬೇಧ-ಭಾವವಿಲ್ಲದೆ ಸರ್ವರನ್ನು ಅಪ್ಪಿಕೊಂಡುವಿಶ್ವವನ್ನು ಆಯಸ್ಕಾಂತದಂತೆ ತನ್ನತ್ತಸೆಳೆದು ಇಡೀ ವಿಶ್ವಕ್ಕೆ ಸಹೋದರತೆಯಸಂದೇಶ ಸಾರಿದ, ಭಾರತದ ಶ್ರೀಮಂತಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿ,ದೇಶದ ಗೌರವ ಹೆಚ್ಚಿಸಿದ ಮಹನೀಯರುಸ್ವಾಮಿ ವಿವೇಕಾನಂದರು ಎಂದು ರಾಜ್ಯಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್‌ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

Advertisement

ಬುಧವಾರ ನಗರದ ಕುವೆಂಪುರಂಗಮಂದಿರದಲ್ಲಿ ಸ್ವಾಮಿ ವಿವೇಕಾನಂದರಜನ್ಮ ದಿನಾಚರಣೆ ಅಂಗವಾಗಿಏರ್ಪಡಿಸಲಾಗಿದ್ದ ರಾಷ್ಟ್ರೀಯ ಯುವದಿನಹಾಗೂ ಯುವ ಸಪ್ತಾಹ ಕಾರ್ಯಕ್ರಮಉದ್ಘಾಟಿಸಿ ಅವರು ಮಾತನಾಡಿದರು.ಅಂದಿನ ನರೇಂದ್ರ ಮತ್ತು ಇಂದಿನನರೇಂದ್ರರು ತಮ್ಮ ಮಾತು ಮತ್ತುಕೃತಿಗಳಿಂದಾಗಿ ವಿಶ್ವವೇ ಭಾರತದತ್ತಬೆರಗುಗಣ್ಣಿನಿಂದ ನೋಡುವಂತೆಮಾಡಿರುವುದು ಈ ದೇಶದ ಹೆಮ್ಮೆಯಸಂಗತಿ ಎಂದವರು ನುಡಿದರು.ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಅಲ್ಲಿನಜನತೆ ನೆಮ್ಮದಿಯ ಬದುಕಿಗಾಗಿಪರಿತಪಿಸುತ್ತಿದ್ದಾರೆ.

ಆದರೆ, ಭಾರತದಬಗ್ಗೆ ವಿಶ್ವದೆಲ್ಲೆಡೆ ಗೌರವ ಹೆಚ್ಚಿದೆ. ಇಂದಿನಪ್ರಧಾನಿಯವರು ಕೋವಿಡ್‌ನ‌ಂತಹಸಾಂಕ್ರಾಮಿಕ ಸೋಂಕಿನ ಸಂದರ್ಭದಲ್ಲಿಅನೇಕ ರಾಷ್ಟ್ರಗಳಿಗೆ ಉಚಿತವಾಗಿ ಲಸಿಕೆನೀಡಿದ್ದಲ್ಲದೇ ಆರ್ಥಿಕವಾಗಿ ಹಿಂದುಳಿದಹಾಗೂ ಸಂಕಷ್ಟದಲ್ಲಿದ್ದ ಅನೇಕ ರಾಷ್ಟ್ರಗಳಿಗೆಆರ್ಥಿಕ ನೆರವನ್ನು ನೀಡಿ ಮಾನವೀಯತೆಮೆರೆದಿದ್ದಾರೆ. ಮಾತ್ರವಲ್ಲ ಅವರು ವಿಶ್ವದಜನರ ಕುರಿತು ಆರೋಗ್ಯದ ಕಾಳಜಿಯಿಂದಾಗಿಭಾರತೀಯ ಯೋಗವನ್ನು ಜಗತ್ತಿನ ಜನಅನುಸರಿಸುವಂತೆ ಮಾಡಿ ಮಾದರಿಯಾಗಿಉಳಿದಿದ್ದಾರೆ. ಪ್ರಪಂಚದಲ್ಲಿ ಶಾಂತಿನೆಲೆಸಲು ಶಾಂತಿದೂತರಂತೆ ಹಗಲಿರುಳುಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next