Advertisement

ಸಂಕ್ರಾಂತಿ ಬಳಿಕ ದೇವೇಗೌಡರ ದತ್ತು ಪುತ್ರ ದತ್ತ ಕಾಂಗ್ರೆಸ್‌ನತ್ತ?

05:30 PM Jan 12, 2022 | Adarsha |

ಕಡೂರು: ಮಾಜಿ ಶಾಸಕ ವೈ.ಎಸ್‌.ವಿ. ದತ್ತ ಕಾಂಗ್ರೆಸ್‌ಸೇರುವ ಊಹಾಪೋಹಕ್ಕೆ ಬಹುತೇಕ ತೆರೆ ಬಿದ್ದಿದ್ದುಸಂಕ್ರಾತಿ ಬಳಿಕ ಕಾಂಗ್ರೆಸ್‌ ಸೇರುವುದು ಬಹುತೇಕ ಖಚಿತವಾಗಿದೆ.ದತ್ತ ಜತೆಗೆ ಜೆಡಿಎಸ್‌ನ ಅನೇಕ ಶಾಸಕರಹೆಸರು ಮುಂಚೂಣಿಯಲ್ಲಿದ್ದು ಇವರೆಲ್ಲರೂಒಟ್ಟಾಗಿ ಕಾಂಗ್ರೆಸ್‌ ಸೇರುವ ಸಂಗತಿ ಬೆಂಗಳೂರುಸೇರಿದಂತೆ ಕ್ಷೇತ್ರದ ರಾಜಕೀಯ ಮೊಗಸಾಲೆಯಲ್ಲಿಗಂಭೀರವಾಗಿ ಚರ್ಚೆಯಾಗುತ್ತಿದೆ.

Advertisement

2018ರವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಬಳಿಕದತ್ತ ಕೆಲವು ಕಾಲ ನೇಪಥ್ಯಕ್ಕೆ ಸರಿದಿದ್ದರು. ಅಭಿವೃದ್ಧಿಕೆಲಸಗಳನ್ನು ಮಾಡಿಸಿಯೂ ಜನರ ಜತೆಗೆ ಉತ್ತಮಒಡನಾಟ ಇಟ್ಟುಕೊಂಡಿದ್ದರು. ಆದರೆ ಕ್ಷೇತ್ರದಜನ ತಮ್ಮನ್ನು ಸೋಲಿಸಿದರು ಎಂಬ ಕಾರಣಕ್ಕೆ ದತ್ತಸಕ್ರಿಯ ರಾಜಕಾರಣದಿಂದ ಅಂದಿನ ದಿನಗಳಲ್ಲಿಸುಮ್ಮನಾಗಿದ್ದರು.

ಇದರ ಜತೆಗೆ ಸಾಮಾಜಿಕಜಾಲತಾಣಗಳಲ್ಲಿ ತಮ್ಮ ಸೋಲಿನ ನೋವನ್ನು ಕೂಡಹಂಚಿಕೊಂಡಿದ್ದರು.ಕೋವಿಡ್‌ ಮೊದಲ ಅಲೆ ಪ್ರಾರಂಭವಾದಾಗಕ್ಷೇತ್ರಕ್ಕೆ ಕಾಲಿಟ್ಟ ಅವರು ಮತ್ತೂಮ್ಮೆಸಕ್ರಿಯ ರಾಜಕಾರಣಕ್ಕೆ ಧುಮುಕಿದರು.ಕ್ಷೇತ್ರದ ಜನರಿಗೆ ಆಹಾರ ಧಾನ್ಯಗಳ ಕಿಟ್‌ನೀಡುವುದು, ಸ್ಯಾನಿಟೈಸರ್‌, ಮಾಸ್ಕ್ವಿತರಣೆ ಮೂಲಕ ಆರಂಭವಾದ ಅವರಕಾಯಕ ನಂತರ ಎರಡನೇ ಅಲೆಯಲ್ಲಿಯೂಔಷದ ಆಮ್ಲಜನಕ ಘಟಕಕ್ಕೆ ದೇಣಿಗೆ ಮುಂತಾದಚಟುವಟಿಕೆಗಳಲ್ಲಿ ಮುಂದುವರಿದು ಕಳೆದೊಂದುವರ್ಷದಿಂದ ಮತ್ತೆ ಕ್ಷೇತ್ರದ ಗ್ರಾಮಾಂತರ ಭಾಗವನ್ನುಸಂಪೂರ್ಣ ತಿರುಗಾಡಿ ಮತದಾರರ ಸಂಪರ್ಕಕ್ಕೆಬಂದಿದ್ದಾರೆ.

ವದಂತಿ ನಿರಾಕರಿಸಿದ್ದ ದತ್ತ: ಈ ಮಧ್ಯೆ ದತ್ತ ಅವರುಕಾಂಗ್ರೆಸ್‌ ಸೇರುತ್ತಾರೆ ಎಂಬ ದಟ್ಟ ವದಂತಿಹಬ್ಬಿದೆ. ಆದರೆ ಅವರು ಈ ವದಂತಿಯನ್ನುಮಾಧ್ಯಮಗಳೆದುರು ನಿರಾಕರಿಸಿ ತಮಗೆಜೆಡಿಎಸ್‌ನಲ್ಲಿಯೇ ತೃಪ್ತಿ ಇದೆ. ಈಪಕ್ಷವನ್ನು ಕಟ್ಟಿ, ಬೆಳೆಸುವಲ್ಲಿ ತಮ್ಮ ಪಾತ್ರವೂಪ್ರಮುಖವಾಗಿದೆ. ತಾವೇಕೆ ಪಕ್ಷ ತೊರೆಯಲಿಎಂಬ ಕಾರಣಗಳನ್ನು ನೀಡುತ್ತಾ ವದಂತಿಗಳಿಗೆತೆರೆ ಎಳೆದಿದ್ದರು. ಆದರೂ ವದಂತಿಗಳು ಮಾತ್ರನಿಂತಿರಲಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಮತ್ತುದತ್ತ ಪರಮಾಪ್ತರಾಗಿದ್ದು ಸ್ವತಃ ಸಿದ್ದರಾಮಯ್ಯಅವರೇ ದತ್ತ ಕಾಂಗ್ರೆಸ್‌ ಸೇರ್ಪಡೆಗೆ ಅಭಯನೀಡಿದ್ದಾರೆ ಎನ್ನಲಾಗಿದೆ.

ಪಕ್ಷ ಸೇರ್ಪಡೆಗೆ ವಿರೋಧ-ಸ್ವಾಗತ: ಇದಕ್ಕೆ ಪೂರಕಎಂಬಂತೆ ಕ್ಷೇತ್ರದಲ್ಲಿರುವ ಕೆಲವು ಕಾಂಗ್ರೆಸ್‌ಮುಖಂಡರು ದತ್ತ ಸೇರ್ಪಡೆ ಸಂಗತಿಯನ್ನುಖಂಡಿಸುತ್ತಲೇ ಬಂದಿದ್ದರು. ಕೆಪಿಸಿಸಿ ಸದಸ್ಯ ಮತ್ತು2018ರ ಪರಾಜಿತ ಕಾಂಗ್ರೆಸ್‌ ಅಭ್ಯರ್ಥಿ ಕೆ.ಎಸ್‌.ಆನಂದ್‌ ಈ ಬಗ್ಗೆ ಹೇಳಿಕೆಗಳನ್ನು ನೀಡಿ ದತ್ತ ಅವರಸೇರ್ಪಡೆ ಸಂಗತಿಯನ್ನು ಅಲ್ಲಗಳೆದು ಇದಕ್ಕೆ ತಮ್ಮವಿರೋಧ ಇದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.ಕಾಂಗ್ರೆಸ್‌ನ ಹಾಲಿ ಪುರಸಭಾ ಸದಸ್ಯ ತೋಟದಮನೆಮೋಹನ್‌ ಕುಮಾರ್‌ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ದತ್ತ ಕಾಂಗ್ರೆಸ್‌ ಸೇರ್ಪಡೆಗೆ ತಮ್ಮಂತಹಸಮಾನ ಮನಸ್ಕರ ವಿರೋಧವಿದೆ ಎಂದುಹೇಳಿದ್ದರು.

Advertisement

ಈ ಎಲ್ಲದರ ಮಧ್ಯೆ ಹಿರಿಯ ಕಾಂಗ್ರೆಸ್‌ಮುಖಂಡರು ಮತ್ತು ಕಾರ್ಯಕರ್ತರುಮೌನವಾಗಿದ್ದು ಇದುವರೆಗೆ ಯಾವುದೇ ರೀತಿಯಹೇಳಿಕೆಗಳನ್ನು ನೀಡಿಲ್ಲ. ಆದರೆ ಆಂತರ್ಯದಲ್ಲಿ ದತ್ತಕಾಂಗ್ರೆಸ್‌ ಸೇರ್ಪಡೆಯನ್ನು ತಾವು ಸ್ವಾಗತಿಸುತ್ತೇವೆಎಂಬ ರೀತಿಯಲ್ಲಿಯೇ ಮಾತನಾಡುತ್ತಿದ್ದು,ಬಹಿರಂಗವಾಗಿ ಹೇಳುತ್ತಿಲ್ಲ.

ಪರಿಷತ್‌ ಚುನಾವಣೆಯಲ್ಲೂ ಕೈ ಪರ ಪ್ರಚಾರ:ಇದೀಗ ಮತ್ತೂಂದು ದಟ್ಟ ವದಂತಿ ಗರಿಗೆದರಿದ್ದುಸಂಕ್ರಾಂತಿ ಬಳಿಕ ದತ್ತ ಕಾಂಗ್ರೆಸ್‌ ಸೇರ್ಪಡೆಬಹುತೇಕ ಖಚಿತ ಎನ್ನಲಾಗುತ್ತಿದೆ. ಮುಂಬರುವಜಿಪಂ, ತಾಪಂ ಚುನಾವಣೆ ವೇಳೆಗೆ ದತ್ತ ಕಾಂಗ್ರೆಸ್‌ಪಕ್ಷದಲ್ಲಿದ್ದರೂ ಅಚ್ಚರಿ ಇಲ್ಲ ಎನ್ನುವ ಅಂಶಗಳೇದಟ್ಟವಾಗಿ ಕೇಳಿ ಬರುತ್ತಿದ್ದು ಇದಕ್ಕೆ ಪೂರಕವಾಗಿರಾಜ್ಯ ಮಟ್ಟದ ಕೆಲವು ಕಾಂಗ್ರೆಸ್‌ ಕಾರ್ಯಕ್ರಮದಲ್ಲಿದತ್ತ ಕಾಣಿಸಿಕೊಳ್ಳುತ್ತಿದ್ದಾರೆ. ವಿಧಾನ ಪರಿಷತ್‌ಚುನಾವಣೆಯಲ್ಲಿ ಕಾಂಗ್ರೆಸ್‌ನ ಗಾಯತ್ರಿಶಾಂತೇಗೌಡ ಅವರಿಗೆ ತಮ್ಮ ಹಾಗೂ ತಮ್ಮಪಕ್ಷದ ಬೆಂಬಲವನ್ನು ಘೋಷಿಸಿ ಅವರ ಪರವಾಗಿದುಡಿದಿದ್ದರು. ಈ ಬಾರಿಯ ಚುನಾವಣೆಯಲ್ಲಿಪಕ್ಷದ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿಗೊಂದಲ ಮೂಡಿಸಿದ್ದರೂ ದತ್ತ ಮಾತ್ರ ಕಾಂಗ್ರೆಸ್‌ಅಭ್ಯರ್ಥಿಗೆ ತಮ್ಮ ಬೆಂಬಲ ಅಚಲ ಎಂದು ಘೋಷಿಸಿಪ್ರಚಾರ ಸಹ ಮಾಡಿದ್ದರು. ಒಟ್ಟಿನಲ್ಲಿ ಸಂಕ್ರಾಂತಿಯಬಳಿಕ ಕಡೂರು ಕ್ಷೇತ್ರದ ರಾಜಕಾರಣದಲ್ಲಿ ಹೊಸಸಂಕ್ರಮಣದ ಶಕೆ ಆರಂಭವಾಗಲಿದೆಯೇಎಂಬುದನ್ನು ಕಾದು ನೋಡಬೇಕಿದೆ.

ಎ.ಜೆ. ಪ್ರಕಾಶ್‌ ಮೂರ್ತಿ ಕಡೂರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next