Advertisement

ವರುಣನಾರ್ಭಟ : ಶಿವಮೊಗ್ಗದ ಮೂರು ಜಲಾಶಯಗಳ ಒಳ ಹರಿವು ಹೆಚ್ಚಳ

10:31 AM Jul 23, 2021 | Team Udayavani |

ಶಿವಮೊಗ್ಗ :  ಕಳೆದ ಎರಡು ದಿನದಿಂದ ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿದ್ದು, ಹಳ್ಳ, ಕೊಳ್ಳಗಳು ತುಂಬಿಕೊಳ್ಳುತ್ತಿವೆ. ಜಿಲ್ಲೆಯ ಮೂರು ಪ್ರಮುಖ ಜಲಾಶಯಗಳಿಗೂ ಒಳ ಹರಿವು ಕೂಡ ಹೆಚ್ಚಳವಾಗಿದೆ.

Advertisement

ಮೂರು ಅಡಿ ಏರಿದ ಲಿಂಗನಮಕ್ಕಿ

ಕಳೆದ 24 ಗಂಟೆ ಅವಧಿಯಲ್ಲಿ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಮೂರು ಅಡಿಯಷ್ಟು ಹೆಚ್ಚಳವಾಗಿದೆ.  ನಿನ್ನೆ (ಗುರುವಾರ, ಜುಲೈ 22) ನೀರಿನ ಮಟ್ಟ 1796 ಅಡಿಯಷ್ಟು ಇತ್ತು. ಇಂದು (ಶುಕ್ರವಾರ, ಜುಲೈ 23) 1799.15 ಅಡಿಗೆ ಏರಿಕೆಯಾಗಿದೆ. ಲಿಂಗನಮಕ್ಕಿಗೆ 73,431 ಕ್ಯೂಸೆಕ್ ಒಳಹರಿವು ಇದೆ.

ಇದನ್ನೂ ಓದಿ : ಪುಣೆ-ಬೆಂಗಳೂರು ಹೈವೇಗೆ ನುಗ್ಗಿದ ನದಿ ನೀರಿನಲ್ಲಿ ಸಿಲುಕಿದ ಕಾರು-ಲಾರಿ

ಭದ್ರಾ ಡ್ಯಾಂ ನೀರಿನ ಮಟ್ಟ ಹೆಚ್ಚಳ

Advertisement

ಇತ್ತ ಭದ್ರಾ ಜಲಾಶಯದ ನೀರಿನ ಮಟ್ಟವೂ ಮೂರು ಅಡಿಯಷ್ಟು ಹೆಚ್ಚಳವಾಗಿದೆ. ಗುರುವಾರ 167.11 ಅಡಿ ಇತ್ತು. ಇವತ್ತು 171.1 ಅಡಿಗೆ ತಲುಪಿದೆ. 24 ಗಂಟೆ ಅವಧಿಯಲ್ಲಿ 3.2 ಅಡಿಯಷ್ಟು ನೀರಿನ ಸಂಗ್ರಹ ಹೆಚ್ಚಳವಾಗಿದೆ. 39,286 ಕ್ಯೂಸೆಕ್ ಒಳಹರಿವು ಇದೆ.

ತುಂಗಾ ಜಲಾಶಯದ ಹೊರ ಹರಿವು

ತುಂಗಾ ಜಲಾಶಯದಿಂದ ರಾತ್ರಿ ಭಾರಿ ಪ್ರಮಾಣದ ನೀರನ್ನು ಹೊರಗೆ ಬಿಡಲಾಗಿತ್ತು. ಬೆಳಗ್ಗೆ 48,323 ಕ್ಯೂಸೆಕ್ ಒಳಹರಿವು ದಾಖಲಾಗಿದೆ. ಹಾಗಾಗಿ ಅಷ್ಟೆ ಪ್ರಮಾಣದ ನೀರನ್ನು ಹೊಳಗೆ ಹರಿಸಲಾಗುತ್ತಿದೆ.

ಇದನ್ನೂ ಓದಿ : ಕುಂದ್ರಾರಿಂದ ಪೊಲೀಸರಿಗೆ ಲಂಚ ನೀಡಿಕೆ ಆರೋಪ: 25 ಲಕ್ಷ ರೂ. ಲಂಚ ಆಮಿಷ?

Advertisement

Udayavani is now on Telegram. Click here to join our channel and stay updated with the latest news.

Next