Advertisement

ರೈತರ ಸಾವಿಗೆ ಯಾರು ಕಾರಣ?: ಮಧು

01:16 PM Dec 08, 2021 | Adarsha |

ಶಿಕಾರಿಪುರ: ಪ್ರಧಾನಿಯವರಿಗೆ ದೇಶದಜನತೆ ದೇವರೆಂದು ಪೂಜಿಸುವಂತಹಸಮಯದಲ್ಲಿ ಆ ದೇವರು ರೈತ ವಿರೋಧಿಕಾಯ್ದೆ ಜಾರಿಗೆ ತಂದರು. ಆ ಕಾಯ್ದೆಯನ್ನುಖಂಡಿಸಿ ದೆಹಲಿಯ ಗಡಿಯಲ್ಲಿ ಒಂದುವರ್ಷದಿಂದ ವಿವಿಧ ರಾಜ್ಯದ ಲಕ್ಷಾಂತರರೈತರು ಪ್ರತಿಭಟನೆ ನಡೆಸುತ್ತಿದ್ದಾಗ ಸುಮಾರು750 ರಿಂದ 760 ರೈತರು ಬಲಿಯಾದರು.ಇದಕ್ಕೆ ಯಾರು ಕಾರಣ ಮತ್ತು ಯಾರುಉತ್ತರ ಕೊಡುತ್ತಾರೆ ಎಂದು ಮಾಜಿ ಶಾಸಕಮಧು ಬಂಗಾರಪ್ಪ ಪ್ರಶ್ನಿಸಿದರು.

Advertisement

ಪರಿಷತ್‌ ಚುನಾವಣೆ ಹಿನ್ನೆಲೆಯಲ್ಲಿಕಾಂಗ್ರೆಸ್‌ ಅಭ್ಯರ್ಥಿ ಆರ್‌. ಪ್ರಸನ್ನಕುಮಾರ್‌ ಅವರ ಪರ ಮತಯಾಚಿಸಿಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ಕೊರೊನಾ ಸಂದರ್ಭದಲ್ಲಿ ಗಾಳಿಇಲ್ಲದೆ ಮರಣ ಹೊಂದುತ್ತಿರುವಾಗದೇಶದ ಪ್ರಧಾನಿಯವರು ಗಂಟೆ, ಜಾಗಟೆಬಾರಿಸುತ್ತಾ ದೀಪ ಬೆಳಗಿಸುವುದರ ಮೂಲಕಕೊರೊನಾವನ್ನು ಓಡಿಸುವುದಾಗಿ ತಿಳಿಸಿದ್ದರು.

ಆ ವೇಳೆಯಲ್ಲಾಗಲೇ ಅನೇಕ ಸೋಂಕಿತರುಆಕ್ಸಿಜನ್‌ ಇಲ್ಲದೆ ಮರಣ ಹೊಂದುತ್ತಾರೆ ಎಂದರೆ ದೇಶವನ್ನು ಯಾವ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದಾರೆ ಎಂದು ಬುದ್ಧಿಜೀವಿಗಳು, ಜನ ಸಾಮಾನ್ಯರುಚಿಂತಿಸಬೇಕಿದೆ. ದೇಶದಲ್ಲಿ ರೈತವಿರೋ ಧಿ ಕಾಯ್ದೆ ಜಾರಿಗೆ ತಂದು ಲಕ್ಷಾಂತರ ರೈತರು ದೆಹಲಿಯಗಡಿಯಲ್ಲಿ ಹೋರಾಟದ ಹಾದಿಹಿಡಿದಿದ್ದರು ಈ ಹೋರಾಟದಲ್ಲಿ 750 ರಿಂದ760 ರೈತರು ಸಾವನ್ನಪ್ಪಿದ್ದಾರೆ. ಇದಕ್ಕೆ ಕಾರಣಯಾರು ಮತ್ತು ಯಾರು ಉತ್ತರ ಕೊಡುತ್ತಾರೆ.ಅವರ ಕುಟುಂಬದವರಿಗೆ ಯಾರು ಪರಿಹಾರಕೊಡುತ್ತಾರೆ ಎಂದು ಪ್ರಶ್ನಿಸಿದರು.

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂ ಧಿ ಅವರುರೈತರ ಬಗ್ಗೆ ಕಾಳಜಿಯಿಂದ ರೈತ ವಿರೋಧಿಕಾಯ್ದೆಯನ್ನು ವಾಪಸ್‌ ಪಡೆಯುವಂತೆಮನವಿ ಮಾಡಿದ್ದರೂ, ಅವರ ಬಗ್ಗೆಪಾರ್ಲಿಮೆಂಟ್‌ನಲ್ಲಿ ಹಾಸ್ಯಾಸ್ಪದವಾಗಿಮಾತನಾಡುತ್ತಾರೆ. ಈಗ ಕಾಯ್ದೆಯನ್ನುವಾಪಸ್‌ ಪಡೆಯುವುದಾಗಿ ತಿಳಿಸಿ ದೇಶದಜನತೆಯಲ್ಲಿ ಕ್ಷಮೆ ಕೇಳುವುದು ಹಾಸ್ಯಾಸ್ಪದಸಂಗತಿ ಎಂದರು.

ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗೋಣಿಮಾಲತೇಶ್‌ ಮಾತನಾಡಿ, ಕಾಂಗ್ರೆಸ್‌ಪಕ್ಷಕ್ಕೆ ಮಧು ಬಂಗಾರಪ್ಪನವರ ಆಗಮನದಿಂದ ಆನೆಬಲಬಂದಂತಾಗಿದೆ. ಅವರ ತಂದೆಎಸ್‌. ಬಂಗಾರಪ್ಪ ಅವರು ರಾಜ್ಯದಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಜನತೆಗೆ ಹಲವಾರು ಯೋಜನೆಗಳನ್ನುಜಾರಿಗೆ ತಂದು ರೈತರ ಅಭಿವೃದ್ಧಿಯತ್ತಚಿಂತನೆ ನಡೆಸುತ್ತಿದ್ದರು. ಕಳೆದ ಬಾರಿಯ ಚುನಾವಣೆಯಲ್ಲಿ ಜೆಡಿಎಸ್‌ನಲ್ಲಿದ್ದ ಮಧುಬಂಗಾರಪ್ಪ ಅವರು ತಮ್ಮ ಅಭ್ಯರ್ಥಿಯಪರವಾಗಿ ಮತ ಯಾಚನೆ ಮಾಡುತ್ತ ಒಂದುಸಾವಿರಕ್ಕೂ ಹೆಚ್ಚು ಮತ ಪಡೆದಿದ್ದರು. ಈಬಾರಿ ಕಾಂಗ್ರೆಸ್‌ಗೆ ಆಗಮಿಸಿ ಆರ್‌. ಪ್ರಸನ್ನಕುಮಾರ್‌ ಅವರ ಪರವಾಗಿ ಮತ ಯಾಚನೆಮಾಡುತ್ತಿರುವುದರಿಂದ ಪ್ರಸನ್ನಕುಮಾರ್‌ಅವರು ಕಳೆದ ಬಾರಿಗಿಂತ ಹೆಚ್ಚು ಮತಪಡೆದು ಗೆಲುವು ಸಾ ಧಿಸಲಿದ್ದಾರೆ ಎಂದುಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next