Advertisement

ಜಂಟಿ ನಿರ್ದೇಶಕರ ಗುಳುಂ ಕೃಷಿ!

07:22 PM Nov 25, 2021 | Adarsha |

ಶಿವಮೊಗ್ಗ: ಭ್ರಷ್ಟಾಚಾರ ನಿಗ್ರಹ ದಳರಾಜ್ಯಾದ್ಯಂತ ಬುಧವಾರ ನಡೆಸಿದದಾಳಿಯಲ್ಲಿ ಸರ್ಕಾರಿ ಅಧಿ ಕಾರಿಗಳಅಕ್ರಮ ಗಳಿಕೆ ಬಟಾಬಯಲಾಗಿದ್ದು,ಶಿವಮೊಗ್ಗದಲ್ಲಿ ನಡೆದ ದಾಳಿ ಮಾತ್ರಅಧಿಕಾರಿಗಳು ಹೀಗೂ ದುಡ್ಡುಹೋಡೀತಾರಾ ಎಂದು ಎಲ್ಲರೂ ಹುಬ್ಬೇರಿಸುವಂತಿದೆ.

Advertisement

ಭ್ರಷ್ಟಾಚಾರ ನಿಗ್ರಹ ದಳದಅ ಧಿಕಾರಿಗಳು ವಿವಿಧ ಇಲಾಖೆಗೆಸೇರಿದ 15 ಅ ಧಿಕಾರಿಗಳ ಮನೆಹಾಗೂ ಕಚೇರಿ ಮೇಲೆ ಏಕಕಾಲಕ್ಕೆದಾಳಿ ನಡೆಸಿ, ಭಾರೀ ಪ್ರಮಾಣದಅಕ್ರಮ ಸಂಪತ್ತು ಪತ್ತೆ ಹಚ್ಚಿದ್ದಾರೆ.ಇದರಲ್ಲಿ ಕೃಷಿ ಇಲಾಖೆಯ ಗದಗಜಿಲ್ಲೆ ಜಂಟಿ ನಿರ್ದೇಶಕ ಟಿ.ಎಸ್‌.ರುದ್ರೇಶಪ್ಪ ಅವರ ಮನೆ ಮತ್ತು ಕಚೇರಿಮೇಲೆ ದಾಳಿ ಮಾಡಿದಾಗ ಪತ್ತೆಯಾದಸಂಪತ್ತು ಕಂಡು ಎಸಿಬಿ ಅ ಕಾರಿಗಳೇಹೌಹಾರಿದ್ದಾರೆ.

1998ರಲ್ಲಿ ಸಹಾಯಕ ಕೃಷಿನಿರ್ದೇಶಕರಾಗಿ ಸರ್ಕಾರಿ ಕೆಲಸಆರಂಭಿಸಿದ ರುದ್ರೇಶಪ್ಪ, ಕಳೆದ 23ವರ್ಷದಲ್ಲಿ ನಡೆಸಿರುವ ಭ್ರಷ್ಟಾಚಾರಕೃಷಿ ಎಂತಹವರನ್ನೂ ಬೆಚ್ಚಿಬೀಳುವಂತೆಮಾಡಿದೆ. ದಾವಣಗೆರೆ ಮೂಲದರುದ್ರೇಶಪ್ಪ, ಧಾರವಾಡ ಹಾಗೂಗದಗದಲ್ಲಿ ಸೇವೆ ಸಲ್ಲಿಸಿರುವ ವೇಳೆಗಳಿಸಿರುವ ಸ್ಥಿರ ಮತ್ತು ಚರಾಸ್ತಿ ಕೋಟಿಲೆಕ್ಕದಲ್ಲಿದೆ. ಗದಗದಲ್ಲಿರುವ ಅಧಿಕಾರಿಯ ಮನೆ, ಕಚೇರಿ, ಶಿವಮೊಗ್ಗದಗೋಪಾಲಗೌಡ ಬಡಾವಣೆ,ಚಾಲುಕ್ಯ ನಗರ ಹಾಗೂ ಚನ್ನಗಿರಿಯನಿವಾಸದ ಮೇಲೆ ಏಕಕಾಲಕ್ಕೆ ನಡೆದದಾಳಿಯ ವೇಳೆ ಅಪಾರ ಪ್ರಮಾಣದಚಿನ್ನಾಭರಣ ಮತ್ತು ನಗದುಪತ್ತೆಯಾಗಿದೆ.

ಶಿವಮೊಗ್ಗದ ಚಾಲುಕ್ಯನಗರದಲ್ಲಿ ರುದ್ರೇಶಪ್ಪ, ಇತ್ತೀಚೆಗಷ್ಟೇನಿರ್ಮಿಸಿರುವ ಇನ್ನೂ ಪೂರ್ಣಗೊಳ್ಳದಮನೆಗೆ ದಾವಣಗೆರೆಯ ಎಸ್ಪಿಜಯಪ್ರಕಾಶ್‌ ಮತ್ತು ಶಿವಮೊಗ್ಗಎಸಿಬಿ ಕಚೇರಿಯ ಡಿಎಸ್ಪಿ ಲೋಕೇಶ್‌ನೇತೃತ್ವದ ತಂಡ ಬೆಳಗ್ಗೆ 7.30 ರಸುಮಾರಿಗೆ ಕಾಲಿಟ್ಟಾಗ ಶಾಕ್‌ ಕಾದಿತ್ತು.ತಪಾಸಣೆಯ ವೇಳೆ ಮನೆಯ ವಾರ್ಡ್‌ರೋಬ್‌ ನಲ್ಲಿ ಪತ್ತೆಯಾದ ಕೆಜಿಗಟ್ಟಲೇಬಂಗಾರ, ಪ್ಲಾಟಿನಂ ಒಳಗೊಂಡಚಿನ್ನಾಭರಣ ಹಾಗೂ ಕ್ಯಾಶ್‌ ಅನ್ನುಕಂಡು ಅ ಧಿಕಾರಿಗಳೇ ದಂಗಾಗಿದ್ದಾರೆ.

ಅಂದಾಜು 80×60 ಅಳತೆಯಡೂಫ್ಲೆಕ್ಸ್‌ ಮನೆಯ ಐಶಾರಾಮಿವಸ್ತುಗಳು, ಚಿನ್ನಾಭರಣಗಳು ಅ ಧಿಕಾರಿನಡೆಸಿರುವ ಕೃಷಿಗೆ ಕೈಗನ್ನಡಿಯಂತಿದೆ.ರಾತ್ರಿ 10 ಗಂಟೆ ನಂತರವೂಪಂಚನಾಮೆಯ ಪ್ರಕ್ರಿಯೆಮುಂದುವರಿದಿದೆ. ಈ ನಡುವೆಅಧಿ ಕಾರಿಗಳು ರುದ್ರೇಶಪ್ಪ ಅವರಿಗೆಸೇರಿದ ವಿವಿಧ ಬ್ಯಾಂಕ್‌ ಖಾತೆಯನ್ನುತಡಕಾಡುತ್ತಿದ್ದು, ದಾಳಿ ಪ್ರಕ್ರಿಯೆಪೂರ್ಣಗೊಂಡ ನಂತರವೇ ರುದ್ರೇಶಪ್ಪನಡೆಸಿರುವ ಸ್ವಯಂಕೃ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next