Advertisement

ನೆರೆಹಾನಿ ನಿರ್ಲಕ್ಷಿಸಿ ಜನ ಸ್ವರಾಜ್‌ ಯಾತ್ರೆ ಖಂಡನೀಯ

03:50 PM Nov 24, 2021 | Adarsha |

ಶಿವಮೊಗ್ಗ: ಅಕಾಲಿಕ ಮಳೆಯಿಂದ ರಾಜ್ಯದಜನ ತತ್ತರಿಸುತ್ತಿದ್ದರೂ ಅದನ್ನು ಗಮನಿಸದೆಆಡಳಿತಾರೂಢ ಬಿಜೆಪಿ ನಾಯಕರುಜನ ಸ್ವರಾಜ ಯಾತ್ರೆ ಮೂಲಕ ಪಕ್ಷಸಂಘಟನೆಗೆ ಮುಂದಾಗಿರುವುದು ಖಂಡನೀಯ ಎಂದು ಜಿಲ್ಲಾ ಕಾಂಗ್ರೆಸ್‌ಅಧ್ಯಕ್ಷ ಎಚ್‌.ಎಸ್‌. ಸುಂದರೇಶ್‌ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ರಾಜ್ಯದ ಅನೇಕ ಕಡೆಗಳಲ್ಲಿ ಬೆಳೆ ನಷ್ಟವಾಗಿದೆ.ಭತ್ತ, ಅಡಕೆ, ಜೋಳ ಕೊಯ್ಲು ಮಾಡಲುಸಾಧ್ಯವಾಗುತ್ತಿಲ್ಲ. ಮನೆಗಳು ಕುಸಿದು ಜೀವಹಾನಿಯಾಗಿವೆ. ರಸ್ತೆ, ಸೇತುವೆಗಳು ಕೊಚ್ಚಿಹೋಗಿವೆ. ಈ ಬಗ್ಗೆ ಸವಿಸ್ತಾರವಾದ ವರದಿಪಡೆದು ಪರಿಹಾರ ನೀಡಿ ಸಂಕಷ್ಟಕ್ಕೆ ಪರಿಹಾರನೀಡಬೇಕಾದವರು ಈಗ ಚುನಾವಣೆಗಾಗಿರಾಜ್ಯ ಪ್ರವಾಸ ಮಾಡುತ್ತಿರುವುದು ಅವರಬೇಜವಾಬ್ದಾರಿ ತೋರಿಸುತ್ತದೆಎಂದರು.

ಕೇಂದ್ರ ಸ್ಥಾನದಲ್ಲಿದ್ದು,ಪರಿಸ್ಥಿತಿ ನಿಯಂತ್ರಿಸಬೇಕಾದ ಜಿಲ್ಲಾಉಸ್ತುವಾರಿ ಸಚಿವರ್ಯಾರೂಕೇಂದ್ರ ಸ್ಥಾನದಲ್ಲಿಯೇ ಇರುತ್ತಿಲ್ಲ.ಅ ಧಿಕಾರಿಗಳೂ ಚುನಾವಣೆಯಲ್ಲಿಮಗ್ನರಾಗಿರುವುದರಿಂದ ರೈತರು ಹಾಗೂಜನಸಾಮಾನ್ಯರ ಗೋಳು ಕೇಳುವವರಿಲ್ಲ.ತಕ್ಷಣ ಸಮೀಕ್ಷೆ ನಡೆಸಿ ಪರಿಹಾರ ನೀಡುವಂತೆ ಆಗ್ರಹಿಸಿದರು.

ಕಾರ್ಪೊರೇಟ್‌ ಕಂಪನಿಗಳಿಗೆಅನುಕೂಲ ಮಾಡಿಕೊಡುವ ಉದ್ದೇಶದಿಂದಕೇಂದ್ರದ ಬಿಜೆಪಿ ಸರ್ಕಾರ ಮೂರು ಕೃಷಿಕಾಯ್ದೆಗಳಿಗೆ ತಿದ್ದುಪಡಿ ಮಾಡಿ ಜಾರಿಗೆತಂದಿದ್ದರು. ರೈತರ ಪ್ರತಿಭಟನೆಯಿಂದಾಗಿನೂರಾರು ಕೋಟಿ ನಷ್ಟವಾಗಿದೆ. 700ಕ್ಕೂ ಹೆಚ್ಚುಜೀವ ಹಾನಿಯಾಗಿದೆ. ದೆಹಲಿ ಮಾತ್ರವಲ್ಲದೆದೇಶದ ಬೇರೆ ಬೇರೆ ಭಾಗಗಳಲ್ಲಿಯೂ ಪ್ರತಿಭಟನೆ ನಡೆಸಲಾಗಿದೆ.

ಮೃತರ ಕುಟುಂಬದವರಸಂಬಂ ಧಿಗಳಿಗೆ ತಕ್ಷಣ ಪ್ರಧಾನ ಮಂತ್ರಿಪರಿಹಾರ ನಿ ಧಿಯಿಂದ 25 ಲಕ್ಷ ರೂ. ಪರಿಹಾರನೀಡುವಂತೆ ಆಗ್ರಹಿಸಿದರು. ರಾಜ್ಯದಲ್ಲಿಗುತ್ತಿಗೆದಾರರಿಂದ ಶೇ.40 ರಿಂದ 50 ರಷ್ಟು ಹಣಪಡೆಯಲಾಗುತ್ತಿದ್ದು, ಇದರಿಂದ ಗುಣಮಟ್ಟದಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ರಾಜ್ಯಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಪ್ರಧಾನಿಗೆಪತ್ರ ಬರೆದಿರುವುದು ಬಹಿರಂಗವಾಗಿದೆ.ಹೀಗಾಗಿ ಈ ಕಮೀಷನ್‌ ಸರ್ಕಾರವನ್ನು ಪ್ರಧಾನಿವಜಾ ಮಾಡಬೇಕು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next