Advertisement

ನೆಡುತೋಪಿನಲ್ಲಿ ಆಕಸ್ಮಿಕ ಬೆಂಕಿ

02:24 PM Oct 26, 2021 | Adarsha |

ಸಾಗರ: ತಾಲೂಕಿನ ತಾಳಗುಪ್ಪದರಂಗಪ್ಪನ ಗುಡ್ಡದ ಸಮೀಪದಮೀಸಲು ಅರಣ್ಯ ಪ್ರದೇಶದ ಅರಣ್ಯಇಲಾಖೆಯ ನೆಡುತೋಪಿನಲ್ಲಿಭಾನುವಾರ ರಾತ್ರಿ ವೇಳೆ ಆಕಸ್ಮಿಕ ಬೆಂಕಿ ಕಾಣಿಸಿದೆ.

Advertisement

ಉತ್ಪಾದಿತ ವಿದ್ಯುತ್‌ಅನ್ನು ಮಹಾನಗರಗಳಿಗೆ ಕಳುಹಿಸುವ220 ಕೆವಿ ವಿದ್ಯುತ್‌ ತಂತಿಗಳಿಗೆ ಬೆಂಕಿಬೀಳಲು ಜೋರಾದ ಮಳೆ, ಗಾಳಿಯಸಂದರ್ಭ ನೆಡುತೋಪಿನ ಮರಗಳುಕಾರಣ ಎಂದು ಹೇಳಲಾಗುತ್ತಿದೆ.

ಮಹಾನಗರಗಳಿಗೆ ವಿದ್ಯುತ್‌ರವಾನಿಸುವ ಕಾರ್ಯದಲ್ಲಿ ಇಂತಹಆಕಸ್ಮಿಕ ಸಂಭವಿಸಿದಾಗ ಅಗತ್ಯತಾಂತ್ರಿಕ ಮುನ್ನೆಚ್ಚರಿಕಾ ಕ್ರಮಗಳನ್ನುಅಳವಡಿಸಿಕೊಂಡಿದ್ದರಿಂದ ದೊಡ್ಡಅನಾಹುತ ಸಂಭವಿಸಿಲ್ಲ. ಮಳೆಸುರಿಯುತ್ತಿದ್ದ ಹಿನ್ನೆಲೆಯಲ್ಲಿ ಬೆಂಕಿಸಹ ನಂದಿದೆ.

ಸೋಮವಾರ ಅರಣ್ಯಇಲಾಖೆಯ ಅ ಧಿಕಾರಿಗಳು ಮತ್ತುಕೆಪಿಟಿಸಿಎಲ್‌ ಅಧಿ ಕಾರಿಗಳು ಸ್ಥಳಕ್ಕೆಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.ಘಟನೆ ಕುರಿತು ಮಾಹಿತಿ ನೀಡಿದವಲಯ ಅರಣ್ಯಾ ಧಿಕಾರಿ ಡಿ.ಆರ್‌.ಪ್ರಮೋದ್‌ ಮಾತನಾಡಿ, ಅರಣ್ಯಇಲಾಖೆಯ ನೆಡುತೋಪಿನಲ್ಲಿ ಮರಕಡಿತಲೆ, 220 ಕೆವಿ ವಿದ್ಯುತ್‌ತಂತಿಗಳಿಗೆ ಅಡಚಣೆಯಾದರೆಂಬೆಕೊಂಬೆಗಳನ್ನು ಕತ್ತರಿಸುವಸಂಬಂಧ ಆಗಸ್ಟ್‌ ತಿಂಗಳಿನಲ್ಲಿಇಲಾಖೆಗೆ ಪತ್ರ ಬಂದಿದೆ.

ಸೆಪ್ಟೆಂಬರ್‌ನಲ್ಲಿ ಈ ಕುರಿತುಉನ್ನತ ಮಟ್ಟದ ಅಧಿ ಕಾರಿಗಳನ್ನುಸಂಪರ್ಕಿಸಲಾಗಿದೆ. ಕಾರ್ಮಿಕಸಮಸ್ಯೆ ಇನ್ನಿತರೆ ಕಾರಣಗಳಿಂದಕಾರ್ಯ ವಿಳಂಬವಾಗಿದೆ.ಸೋಮವಾರ ಅರಣ್ಯ ಇಲಾಖೆಮತ್ತು ಕೆಪಿಟಿಸಿಎಲ್‌ ಅ ಧಿಕಾರಿಗಳುಪರಿಶೀಲನೆ ನಡೆಸಿದ್ದಾರೆ. ಶೀಘ್ರಈ ಬಗ್ಗೆ ಗಮನ ಹರಿಸಿ, ಕ್ರಮತೆಗೆದುಕೊಳ್ಳಲಾಗುವುದು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next