ಸೊರಬ: ತಾಲೂಕಿನ ಬಹು ನಿರೀಕ್ಷಿತವಾಗಿರುವ ಮೂಡಿಏತನೀರಾವರಿ ಯೋಜನೆಯ ಕಾಮಗಾರಿಯನ್ನು ಕ್ಷಿಪ್ರಗತಿಯಲ್ಲಿ ಡಿಸೆಂಬರ್ ಅಂತ್ಯದೊಳಗೆ ಸಂಪೂರ್ಣಗೊಳಿಸಬೇಕು ಎಂದು ಶಾಸಕ ಎಸ್. ಕುಮಾರ್ ಬಂಗಾರಪ್ಪ ಅವರು ದಂಡಾವತಿ ಜಲಾನಯ ಯೋಜನೆಯ ಎಇಇ ಅವರಿಗೆ ಸೂಚಿಸಿದರು.
ಪಟ್ಟಣದ ರಂಗಮಂದಿರದಲ್ಲಿ ಗುರುವಾರ ಕರ್ನಾಟಕನೀರಾವರಿ ನಿಗಮದ ಅಡಿ ಕರೆದಿದ್ದ ಕಾಮಗಾರಿಗಳಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮೂಡಿ ಏತ ನೀರಾವರಿ ಯೋಜನೆಯನ್ನು ಶೀಘ್ರದಲ್ಲಿಪೂರ್ಣಗೊಳಿಸಿ, ಕಚವಿ ಏತ ನೀರಾವರಿ ಯೋಜನೆಯನ್ನುಕೈಗೆತ್ತಿಕೊಳ್ಳಬೇಕು. ಕಚವಿ ಏತ ನೀರಾವರಿ ಯೋಜನೆಮಂಜೂರಾಗಿ ಮೂರು ವರ್ಷಗಳು ಕಳೆದಿದೆ. ಜನತೆಗೆಜನಪ್ರತಿನಿ ಧಿಗಳು ಉತ್ತರ ನೀಡಬೇಕಾಗಿದೆ.
ಮೂಗೂರುಏತನೀರಾವರಿ ಯೋಜನೆಯ ಪ್ರದೇಶದಲ್ಲಿ ಯೋಜನೆಗೆಸಂಬಂ ಧಿಸಿದ ಭೂಮಿಯು ಅತಿಕ್ರಮಣವಾಗುತ್ತಿದೆ. ಪೈಪ್‌ಲೈನ್‌ಗಳು ಹಾದುಹೋದ ಪ್ರದೇಶದಲ್ಲಿ ಅಡಿಕೆ ಸಸಿಗಳನ್ನುನೆಡಲಾಗಿದೆ. ಸಮರ್ಪಕವಾದ ದಾಖಲೆಗಳಿವೆ. ಮುಂದಿನದಿನಗಳಲ್ಲಿ ವಿವಾದಗಳಿಗೆ ಆಸ್ಪದ ಮಾಡಿಕೊಡದಂತೆ ಕೂಡಲೇಸ್ವಾ ಧೀನ ಪಡೆದುಕೊಳ್ಳುವಂತೆ ತಿಳಿಸಿದರು.
ಕಾಸರಗುಪ್ಪೆ ರಸ್ತೆ ಕಾಮಗಾರಿಯನ್ನು ಶೀಘ್ರಪೂರ್ಣಗೊಳಿಸಬೇಕು. ನಿಸರಾಣಿ ವಿದ್ಯಾಭಿವೃದ್ಧಿ ಸಂಘದ ರಸ್ತೆಕಾಮಗಾರಿಯನ್ನು ತಿರಸ್ಕರಿಸಿದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆಸೇರಿಸುವಂತೆ ಸೂಚಿಸಿದ ಶಾಸಕರು, ಬೀಸನಗದ್ದೆ ರಸ್ತೆಕಾಮಗಾರಿಯನ್ನು ಪ್ರಾರಂಭಿಸುವುದು ಹಾಗೂ ಬಾಸೂರು,ಕುಪ್ಪಗಡ್ಡೆ ಮತ್ತು ತಾಳಗುಪ್ಪ ಹೋಬಳಿಯ ಮರತ್ತೂರುಗ್ರಾಮಗಳಲ್ಲಿ ರಸ್ತೆ ಕಾಮಗಾರಿ ಮಾಡಿರುವ ಗುತ್ತಿಗೆದಾರರನ್ನುಸಹ ಕಪ್ಪುಪಟ್ಟಿಗೆ ಸೇರಿಸಲು ಸಭೆಯಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.
60 ಲಕ್ಷ ರೂ., ವೆಚ್ಚದ ತಾಲೂಕಿನ ಛತ್ರದಹಳ್ಳಿಯಚಿನ್ನದಕಟ್ಟೆ ಕರೆ ಡೆಶ್‌ಸ್ಲಾ Âಬ್ ಹಾಗೂ ರಸ್ತೆ ಅಭಿವೃದ್ಧಿಕಾಮಗಾರಿಗಳ ಬದಲಿ ಕಾಮಗಾರಿ ಕೈಗೊಂಡು ಊರ ಒಳಗಿನರಸ್ತೆ ಕಾಮಗಾರಿ ಕಾಮಕಾರಿ ಕೈಗೊಳ್ಳಬೇಕು.
ತಾಲೂಕಿನಗ್ರಾಮೀಣ ಪ್ರದೇಶಗಳಲ್ಲಿನ ಸಮುದಾಯ ಭವನಗಳನ್ನುಪೂರ್ಣಗೊಳಿಸಬೇಕು. ದೇವಸ್ಥಾನದ ಸಮುದಾಯಭವನಗಳಲ್ಲಿ ಸಣ್ಣಪುಟ್ಟ ಸಮಸ್ಯೆಗಳಿದ್ದರೆ ದೇವಸ್ಥಾನದಸಮಿತಿ ಮತ್ತು ಆರಾಧನಾ ಸಮಿತಿಯೊಂದಿಗೆ ಚರ್ಚಿಸಿತೀರ್ಮಾನ ತಗೆದುಕೊಂಡು, ಶೀಘ್ರ ಕಾಮಗಾರಿಗಳನ್ನುಪೂರ್ಣಗೊಳಿಸುವಂತೆ ತಿಳಿಸಿದರು.
ದಂಡಾವತಿ ಜಲಾನಯನ ಯೋಜನೆಯ ಕಾರ್ಯಪಾಲಕ ಅಭಿಯಂತರ ಕೆ. ಪ್ರಶಾಂತ್, ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ರೀಧರ್, ತಾಪಂ ಇಒ ಕೆ.ಜಿ. ಕುಮಾರ್,ಗ್ರೇಡ್-2 ತಹಶೀಲ್ದಾರ್ ಮಂಜುಳಾ ಹೆಗಡಾಳ್, ಪಿಡಬುÉ Âಡಿಎಇಇ ಉಮಾನಾಯ್ಕ, ಸಣ್ಣ ನೀರಾವರಿ ಇಲಾಖೆಯ ಎಇಇರಾಮಪ್ಪ ಸೇರಿದಂತೆ ಇತರರಿದ್ದರು