Advertisement

ಸಿದ್ದರಾಮಯ್ಯ ಜನರ ಕ್ಷಮೆ ಕೇಳಲಿ: ಈಶ್ವರಪ್ಪ

03:05 PM Oct 21, 2021 | Adarsha |

ಶಿವಮೊಗ್ಗ: ವಿಶ್ವದ ಜನಪ್ರಿಯ ನಾಯಕ ನರೇಂದ್ರಮೋದಿ ಅವರನ್ನು ಹೆಬ್ಬೆಟ್ಟು ಗಿರಾಕಿ ಎಂದಸಿದ್ದರಾಮಯ್ಯ ಮೊದಲು ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ಒತ್ತಾಯಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದಅವರು, ಚುನಾವಣಾ ಸಂದರ್ಭಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ಕಟೀಲ್‌ ಅವರು ರಾಹುಲ್‌ ಗಾಂ ಧಿ ಬಗ್ಗೆಡ್ರಗ್‌ ಪೆಡ್ಲರ್‌ ಎಂಬ ಪದ ಬಳಸಿದ್ದಕ್ಕೆಕಾಂಗ್ರೆಸ್‌ನವರು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೆಟ್ಟದಾಗಿ ಟೀಕೆ ಮಾಡುತ್ತಿದ್ದಾರೆ.ಆದರೆ, ಬಿಜೆಪಿ ಕಾಂಗ್ರೆಸ್‌ ಮುಖಂಡರು ಹೇಳಿದ್ದನ್ನೆಲ್ಲಅನ್ನಿಸಿಕೊಳ್ಳುವ ಪಕ್ಷವಲ್ಲ. ಪಕ್ಷ ದೇಶಾದ್ಯಂತಸದೃಢವಾಗಿ ಬೆಳೆದಿದೆ. ಕಾಂಗ್ರೆಸ್‌ನವರು ಇದನ್ನುಅರ್ಥಮಾಡಿಕೊಂಡು ಮಾತನಾಡಲಿ ಎಂದರು.ಹಿಂದೆ ಇಂದಿರಾ ಗಾಂಧಿ ಯವರುಪ್ರಧಾನಿಯಾಗಿದ್ದ ವೇಳೆ ಪಾಕಿಸ್ತಾನದ ಮೇಲೆ ಯುದ್ಧಸಾರಿ ಜಯಗಳಿಸಿದಾಗ, ವಿಪಕ್ಷ ನಾಯಕರಾಗಿದ್ದವಾಜಪೇಯಿಯವರು ಇಂದಿರಾ ಗಾಂ ಧಿ ಅವರನ್ನುದುರ್ಗೆ ಎಂದು ಹೊಗಳಿ ಅವರು ನಮ್ಮ ದೇಶದನಾಯಕಿ. ನಮ್ಮ ಸಂಪೂರ್ಣ ಬೆಂಬಲ ಅವರಿಗಿದೆಎಂದಿದ್ದರು.

ಆದರೆ, ಈಗಿನ ಕಾಂಗ್ರೆಸ್‌ ಪರಿಸ್ಥಿತಿಹೇಗಾಗಿದೆ ಎಂದು ಪ್ರಶ್ನಿಸಿದರು.ದೇಶದ ಸರ್ವೋತ್ಛ ನಾಯಕ ಮೋದಿಯನ್ನು ಹೆಬ್ಬೆಟ್ಟು ಗಿರಾಕಿ ಎಂದರೆನಾವು ಸುಮ್ಮನಿರಬೇಕಾ? ನಮಗೂ ಬೇಕಾದಷ್ಟು ಪದ ಬಳಕೆ ಮಾಡಲುಬರುತ್ತದೆ.

ಇಡೀ ದೇಶದ ಜನರಿಗೆಈ ಹೇಳಿಕೆಯಿಂದ ನೋವಾಗಿದೆ.ರಾಹುಲ್‌ ಗಾಂ ಧಿ ಬಗ್ಗೆ ಹೇಳಿಕೆ ನೀಡಿದನಳಿನ್‌ ಕುಮಾರ್‌ ಕಟೀಲ್‌ ಅವರನ್ನು ನಿಮ್ಹಾನ್‌Õಗೆ ಸೇರಿಸಿ ಎನ್ನುತ್ತಾರಲ್ಲಾ? ಸಿದ್ದರಾಮಯ್ಯನವರುಮೋದಿಯವರನ್ನೇ ಹೆಬ್ಬೆಟ್ಟು ಗಿರಾಕಿ ಎಂದುಹೇಳಿದ ಮೇಲೆ ಯಾವ ಆಸ್ಪತ್ರೆಗೆ ಸೇರಿಸಿದರೂಗುಣವಾಗದ ಕಾಯಿಲೆ ಅವರಿಗಂಟಿದೆ ಎಂಬುದುಎಲ್ಲರಿಗೂ ಅರ್ಥವಾಗಿದೆ.

Advertisement

ಮೋದಿ ಬಗ್ಗೆ ಅವರುಮಾತನಾಡಿದ್ದರಿಂದ ನಮ್ಮ ರಾಜ್ಯಾಧ್ಯಕ್ಷರು ಆ ಮಾತನ್ನುಹೇಳಿದ್ದಾರೆ. ಮೊದಲು ಸಿದ್ದರಾಮಯ್ಯನವರು ಜನರಕ್ಷಮೆ ಕೇಳಲಿ ಎಂದರು.ಆರ್‌ಎಸ್‌ಎಸ್‌ ಬಗ್ಗೆ ಎಚ್‌.ಡಿ.ಕುಮಾರಸ್ವಾಮಿಅವರ ಟೀಕೆಗೆ ಉತ್ತರಿಸಿದ ಈಶ್ವರಪ್ಪ, ಜೆಡಿಎಸ್‌ಪಕ್ಷ ಎಲ್ಲಿದೆ ಎಂದು ಹುಡುಕಬೇಕು.

ಕುಂಟನೊಬ್ಬಪೈಲ್ವಾನನೊಂದಿಗೆ ಹೋರಾಟ ಮಾಡಿದಂತೆ ಜೆಡಿಎಸ್‌ಕತೆಯಾಗಿದೆ. ಆರ್‌ಎಸ್‌ಎಸ್‌ ಅನ್ನು ನಿರಂತರವಾಗಿತೆಗಳಿದರೆ ಜನ ತಮಗೆ ಮತ ನೀಡುತ್ತಾರೆ ಎಂಬ ಭ್ರಮೆಯಲ್ಲಿ ಕುಮಾರಸ್ವಾಮಿ ಇದ್ದಾರೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್‌ ಅವರಿಗೆ ಇನ್ನೂ ಕೂಡರಾಷ್ಟ್ರಾಧ್ಯಕ್ಷರನ್ನುಆಯ್ಕೆ ಮಾಡಲು ಸಾಧ್ಯವಾಗಿಲ್ಲ.ರಾಜ್ಯದಲ್ಲಿ ಕಾಂಗ್ರೆಸ್‌ನ ಹಲವಾರು ಬಣಗಳಾಗಿವೆ.ಅಲ್ಪಸಂಖ್ಯಾತರ ಪರ ಎನ್ನುವ ಕಾಂಗ್ರೆಸ್‌ನವರುಕಾಂಗ್ರೆಸ್‌ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್‌ ವಿರುದ್ಧಮಾತನಾಡಿದ ಸಲೀಂ ಅವರನ್ನು ಪಕ್ಷದಿಂದ ಅಮಾನತು ಮಾಡಿದರು.

ಆದರೆ, ಸಿದ್ದರಾಮಯ್ಯನವರ ಪಟ್ಟಶಿಷ್ಯ ಉಗ್ರಪ್ಪನವರ ಮೇಲೆ ಕ್ರಮ ಕೈಗೊಂಡಿಲ್ಲ ಏಕೆಎಂದು ಕೇಳಿದರು. ರಾಜ್ಯಾಧ್ಯಕ್ಷರ ವಿರುದ್ಧ ಹೇಳಿಕೆನೀಡಿದಾಗಲೂ ಸಿದ್ದರಾಮಯ್ಯ ತುಟಿಕ್‌ ಪಿಟಿಕ್‌ಎನ್ನಲಿಲ್ಲ ಏಕೆ? ಇದು ಅವರ ಪಕ್ಷದ ಒಡಕಿಗೆ ಸಾಕ್ಷಿಎಂದರು.

Advertisement

Udayavani is now on Telegram. Click here to join our channel and stay updated with the latest news.

Next