Advertisement

“ಆರೋಪಮುಕ¤ನಾಗುವ ವಿಶ್ವಾಸವಿತ್ತು’

08:58 PM Jul 22, 2022 | Team Udayavani |

ಶಿವಮೊಗ್ಗ: ಗುತ್ತಿಗೆದಾರ ಸಂತೋಷ್‌ ಆತ್ಮಹತ್ಯೆಪ್ರಕರಣದಲ್ಲಿ ನನ್ನ ಹೆಸರು ಬಂದಾಗ ನನಗೆಮೊದಲು ತುಂಬಾ ನೋವಾಗಿತ್ತು. ಪಕ್ಷಕ್ಕೆ,ಸರ್ಕಾರಕ್ಕೆ ನನ್ನಿಂದ ಮುಜುಗರ ಆಯ್ತು ಎಂದು ನೋವಾಗಿತ್ತು. ಚಿಕ್ಕ ವಯಸ್ಸಿನಲ್ಲಿ ಆತನ ಹೆಂಡತಿ ವಿಧವೆಯಾದಳು ಎಂಬ ನೋವಿತ್ತು. ಆದರೆಅಂದು ಎಲ್ಲರೂ ನನ್ನ ಬೆನ್ನಿಗೆ ನಿಂತಿದ್ದರು ಎಂದುಶಾಸಕ ಕೆ.ಎಸ್‌. ಈಶ್ವರಪ್ಪ ತಿಳಿಸಿದರು.

Advertisement

ನಗರದ ಕೋಟೆ ಆಂಜನೇಯಸ್ವಾಮಿದೇವಸ್ಥಾನದಲ್ಲಿ ಬಿಜೆಪಿ ನಗರ ಘಟಕದಿಂದಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿಭಾಗವಹಿಸಿ ದೇವರಿಗೆ ಭಜನೆ, ಪೂಜೆ ನೆರವೇರಿಸಿನಂತರ ವೇದಿಕೆ ಕಾರ್ಯಕ್ರಮದಲ್ಲಿ ಅವರುಮಾತನಾಡಿದರು.ಗುತ್ತಿಗೆದಾರ ಸಂತೋಷ್‌ ಆತ್ಮಹತ್ಯೆಪ್ರಕರಣದಲ್ಲಿ ದೋಷಮುಕ್ತರಾಗಿ ಹೊರಬರುತ್ತೇನೆ ಎಂಬ ಖಚಿತ ವಿಶ್ವಾಸ ನನಗಿತ್ತು.

ನಾನು ತಪ್ಪು ಮಾಡಿಲ್ಲ. ನಮ್ಮ ಮನೆ ದೇವತೆಚೌಡೇಶ್ವರಿ ನನ್ನನ್ನು ಆರೋಪಮುಕ್ತನನ್ನಾಗಿಮಾಡುತ್ತಾಳೆ ಎಂದು ಹಿಂದೆಯೇ ಹೇಳಿದ್ದೆ.ನಾನು ನಂಬಿರುವ ದೇವಿ ನಿನ್ನೆ ನನ್ನನ್ನು ಆರೋಪಮುಕ್ತಳಾಗಿ ಮಾಡಿದ್ದಾಳೆ. ನನ್ನ ಜೀವನವಿಡೀಪಕ್ಷ, ದೇಶ, ಧರ್ಮಕ್ಕಾಗಿ ಕೆಲಸ ಮಾಡುತ್ತೇನೆಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next