Advertisement

ತುಂಗಾ ನದಿಗೆ ಗೃಹ ಸಚಿವರಿಂದ ಬಾಗಿನ ಅರ್ಪಣೆ

09:05 PM Jul 15, 2022 | Adarsha |

ತೀರ್ಥಹಳ್ಳಿ: ಮಲೆನಾಡಿನಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದುತೀರ್ಥಹಳ್ಳಿಯ ತುಂಗಾ ನದಿಯ ನೀರು ಅಪಾಯ ಮಟ್ಟವನ್ನುಮೀರಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಸಂಜೆಗೃಹಸಚಿವ ಆರಗ ಜ್ಞಾನೇಂದ್ರ ಅವರು ತುಂಗಾ ನದಿಗೆ ಬಾಗಿನಅರ್ಪಿಸಿದರು.

Advertisement

ನಂತರ ಸುದ್ದಿಗಾರರೊಂದಿಗೆ ಮಾತನಾಡಿದಅವರು, ಮಳೆ ಎಷ್ಟು ಬೇಕಾದರೂ ಬರಲಿ. ನದಿ ಉಕ್ಕಿ ಹರಿಯಲಿ.ಅದು ಸಮೃದ್ಧಿಯ ಸಂಕೇತ. ಆದರೆ ಎಲ್ಲೂ ಕೂಡ ಹನಿಯಾಗದರೀತಿಯಲ್ಲಿ ಕಾಪಾಡು ಎಂದು ರಾಮೇಶ್ವರನಲ್ಲಿ ಬೇಡಿ ಬಾಗಿನಅರ್ಪಿಸಿದ್ದೇವೆ ಎಂದು ತಿಳಿಸಿದರು.

ಶಿವಮೊಗ್ಗದಲ್ಲಿ ನೆಡೆದ ರೌಡಿಶೀಟರ್‌ ಹತ್ಯೆ ಬಗ್ಗೆ ಮಾತನಾಡಿ, ಸದ್ಯದಲ್ಲೇ ಅವರನ್ನು ಬಂಧಿಸುವ ಕೆಲಸ ಆಗುತ್ತದೆ. ಪೊಲೀಸರಿಗೆ ಅದರ ಬಗ್ಗೆ ಈಗಾಗಲೇಮಾಹಿತಿ ಇದೆ. ಶಿವಮೊಗ್ಗ ರೌಡಿಗಳ ಸೆಂಟರ್‌ ಆಗಿದೆ. ಕೊತ್ವಾಲರಾಮಚಂದ್ರನಿಂದ ಆ ಪರಂಪರೆ ಬೆಳೆದುಕೊಂಡು ಬಂದಿದೆ.ಅದನ್ನು ಹೇಗಾದರೂ ಮಾಡಿ ಇಲ್ಲಿಗೆ ಮಂಗಳ ಹಾಡಬೇಕುಎಂದು ಈಗಾಗಲೇ ಪೊಲೀಸರಿಗೆ ಸೂಚಿಸಿದ್ದೇನೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next