ಶಿವಮೊಗ್ಗ: ಜೀವನದಲ್ಲಿ ಉತ್ತಮ ಕೆಲಸಮಾಡಿದರೆ ಜನರ ಮನಸ್ಸಿನಲ್ಲಿ ಸದಾಉಳಿಯುತ್ತೇವೆ. ಈ ರೀತಿ ನಾಡಪ್ರಭುಕೆಂಪೇಗೌಡರು ಕೆಲಸ ಮಾಡಿಮಹತ್ತರ ಕೊಡುಗೆ ನೀಡಿದ್ದರಿಂದಲೇ500 ವರ್ಷ ಕಳೆದರೂ ಅವರನ್ನುನೆನಪಿಸಿಕೊಳ್ಳುತ್ತಿದ್ದೇವೆ ಎಂದುಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿಮಂಡಳಿ ಅಧ್ಯಕ್ಷೆ ಪವಿತ್ರಾ ರಾಮಯ್ಯಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ಮಹಾನಗರಪಾಲಿಕೆ, ಕನ್ನಡ ಮತ್ತುಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಒಕ್ಕಲಿಗರ ಸಂಘದ ಆಶ್ರಯದಲ್ಲಿನಗರದ ಕುವೆಂಪು ರಂಗ ಮಂದಿರದಲ್ಲಿಸೋಮವಾರ ಆಯೋಜಿಸಲಾಗಿದ್ದನಾಡಪ್ರಭು ಕೆಂಪೇಗೌಡ 513 ನೇಜಯಂತಿ ಕಾರ್ಯಕ್ರಮ ಉದ್ಘಾಟಿಸಿಅವರು ಮಾತನಾಡಿದರು.
ನಾನು,ನನ್ನದು, ನನ್ನ ಕುಟುಂಬ ಮಾತ್ರಎಂಬುದನ್ನು ಬಿಟ್ಟು ಸಮಾಜದ ಕಟ್ಟೆಕಡೆಯ ವ್ಯಕ್ತಿಗಳು ಮತ್ತು ರೈತರಶ್ರೇಯೋಭಿವೃದ್ಧಿಗಾಗಿ ಪ್ರತಿಯೊಬ್ಬಜನಪ್ರತಿನಿ ಧಿಗಳು ಶ್ರಮಿಸಬೇಕುಎಂದರು.