ಶಿವಮೊಗ್ಗ: ಲೋಕ್ ಅದಾಲತ್‌ನಿಂದಕಕ್ಷಿದಾರರಿಗೆ ಸಾಕಷ್ಟು ಅನುಕೂಲಗಳಿವೆ.ರಾಜೀ ಸಂಧಾನದ ಮೂಲಕ ವ್ಯಾಜ್ಯಗಳನ್ನುಬಗೆಹರಿಸಿಕೊಳ್ಳುವುದರಿಂದ ಹಣ ಮತ್ತುಸಮಯ ಎರಡೂ ಉಳಿತಾಯವಾಗುತ್ತದೆಎಂದು ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರನ್ಯಾಯಾಧಿಧೀಶ ಮುಸ್ತಾಫ ಹುಸೇನ್ ಹೇಳಿದರು.ಜಿಲ್ಲಾ ನ್ಯಾಯಾಲಯದಲ್ಲಿ ರಾಷ್ಟಿÅàಯಲೋಕ್ ಅದಾಲತ್ ಕಾರ್ಯಕ್ರಮದಲ್ಲಿಫಲಾನುಭವಿಗಳಿಗೆ ಚೆಕ್ ವಿತರಿಸಿ ಅವರುಮಾತನಾಡಿದರು.ಶಿವಮೊಗ್ಗ ಜಿಲ್ಲೆಯಲ್ಲಿ ಲೋಕ್ ಅದಾಲತ್‌ನಲ್ಲಿ ರಾಜೀ ಸಂಧಾನದ ಮೂಲಕ 10,070ಪ್ರಕರಣಗಳು ವಿಲೇವಾರಿ ಮಾಡಲಾಗುತ್ತಿದೆ.
ಇನ್ನೂ ಹೆಚ್ಚು ಪ್ರಕರಣಗಳು ವಿಲೇವಾರಿಯಾಗುವಸಾಧ್ಯತೆ ಇದೆ. ಶಿವಮೊಗ್ಗ- ತೀರ್ಥಹಳ್ಳಿಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದ್ದ ಶರತ್‌ಎಂಬ ಯುವಕನ ಕುಟುಂಬಕ್ಕೆ 28 ಲಕ್ಷ ರೂ.ಪರಿಹಾರದ ಚೆಕ್ ನೀಡುತ್ತಿದ್ದೇವೆ. 2021 ರ ಫೆ.20 ರಂದು ನಡೆದ ಈ ಅಪಘಾತ ಪ್ರಕರಣಕ್ಕೆಲೋಕ್ ಅದಾಲತ್‌ನಲ್ಲಿ 1.4 ತಿಂಗಳೊಳಗೆರಾಜೀ ಸಂಧಾನದ ಮೂಲಕ ಪರಿಹಾರ ಸಿಕ್ಕಿದೆ.ಇದರಿಂದ ಕುಟುಂಬಕ್ಕೂ ಅನುಕೂಲವಾಗಿದೆ.ಇಲ್ಲಿ ಪರಿಹಾರ ಅವಾರ್ಡ್ ಆದ ಬಳಿಕ ಮೇಲಿನಕೋರ್ಟ್‌ನಲ್ಲಿ ಚಾಲೆಂಗ್‌ಗೆ ಅವಕಾಶವಿಲ್ಲ.
ಕಡಿಮೆ ಅವ ಧಿಯಲ್ಲಿ ತೀರ್ಮಾನವಾಗಿರುವುದುಲೋಕ್ ಅದಾಲತ್‌ನ ವಿಶೇಷತೆ ಎಂದರು.ಜಿಲ್ಲೆಯಲ್ಲಿ ಸುಮಾರು 6 ಸಾವಿರಕ್ಕೂ ಅ ಧಿಕಚೆಕ್ ಬೌನ್ಸ್ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿಇದ್ದು, ಇಂದಿನ ಲೋಕ್ ಅದಾಲತ್‌ನಲ್ಲಿ 175ಪ್ರಕರಣಗಳ ಇತ್ಯರ್ಥವಾಗಿದೆ. ಇದರಿಂದಎರಡೂ ಕಡೆಯವರಿಗೆ ಮಾನಸಿಕ, ಆರ್ಥಿಕಕಿರಿಕಿರಿ ಇಲ್ಲ. ಅಷ್ಟೇ ಅಲ್ಲದೆ ಕೌಟುಂಬಿಕನ್ಯಾಯಾಲಯದಲ್ಲಿ ಕೂಡ ಬಾಕಿ ಉಳಿದಿರುವಪ್ರಕಣಗಳನ್ನು ಲೋಕ್ ಅದಾಲತ್‌ನಲ್ಲಿ ರಾಜಿಮಾಡಿಸಿ ದಂಪತಿಗಳನ್ನು ಒಂದು ಮಾಡುವಪ್ರಕ್ರಿಯೆಗಳು ಕೂಡ ನಡೆದಿವೆ ಎಂದರು.