Advertisement

ಯೋಗದಿಂದ ಪ್ರಪಂಚವೇ ಒಂದು

07:07 PM Jun 22, 2022 | Adarsha |

ಶಿವಮೊಗ್ಗ: ಜಾತಿ, ವರ್ಗ, ಧರ್ಮ, ದೇಶಗಳಾಚೆ ಬೆಳೆದಿರುವನಮ್ಮ ಪ್ರಾಚೀನ ವಿದ್ಯೆಯಾದ ಯೋಗವು ಇಂದು ಇಡೀವಿಶ್ವವನ್ನು ಒಂದು ಮಾಡುತ್ತಿದೆ ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ನುಡಿದರು.ಜಿಲ್ಲಾಡಳಿತ, ಜಿಪಂ, ಆಯುಷ್‌ ಇಲಾಖೆ, ಸರ್ಕಾರಿಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯಮತ್ತು ಬೋಧನಾ ಆಸ್ಪತ್ರೆ ಶಿವಮೊಗ್ಗ, ಮಹಾನಗರಪಾಲಿಕೆ ಶಿವಮೊಗ್ಗ, ಕೆಜಿಎಎಂಒಎ, ಎನ್‌ಐಎಂಎಮತ್ತು ಎಎಫ್‌ಐ ಆಶ್ರಯದಲ್ಲಿ ಮಂಗಳವಾರ ಸರ್ಕಾರಿಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯಆವರಣದಲ್ಲಿ ಆಯೋಜಿಸಲಾಗಿದ್ದ 8ನೇ ಅಂತಾರಾಷ್ಟ್ರೀಯಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರುಮಾತನಾಡಿದರು.

Advertisement

ಯೋಗಾಭ್ಯಾಸದಿಂದ ಶಾರೀರಿಕ ಮತ್ತು ಮಾನಸಿಕನೆಮ್ಮದಿ ಲಭಿಸುತ್ತದೆ. ಇದು ಯಾವುದೇ ಜಾತಿ, ಧರ್ಮಕ್ಕೆಸೀಮಿತವಾಗಿಲ್ಲದ ಕಾರಣ ಎಲ್ಲರನ್ನು ಒಂದುಗೂಡಿಸುತ್ತಿದೆ.ಯೋಗಾಭ್ಯಾಸದಿಂದ ಎಲ್ಲರೂ ಸದೃಢರಾಗಬೇಕೆಂದುವಿಶ್ವ ಸಂಸ್ಥೆಯಲ್ಲಿ ವಿಶ್ವ ಯೋಗ ದಿನಾಚರಣೆ ನಿರ್ಣಯಕೈಗೊಳ್ಳಲು ಕಾರಣಕರ್ತರಾದವರು ನಮ್ಮ ದೇಶದ ಪ್ರಧಾನಿನರೇಂದ್ರ ಮೋದಿ ಅವರು. ಇಂದು 190 ರಾಷ್ಟ್ರಗಳುಯೋಗ ದಿನಾಚರಣೆ ಆಚರಿಸುತ್ತಿವೆ ಎಂದ ಅವರು, ನಾವುಪ್ರತಿ ದಿನ ಯೋಗಾಭ್ಯಾಸವನ್ನು ಮಾಡುವ ಮೂಲಕಸದೃಢರಾಗಿರಬೇಕೆಂದು ಆಶಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next