Advertisement

ಪ್ರಿಯಕರ ಕೊಟ್ಟ ವಿಷಸೇವಿಸಿದ್ದ ಪೇದೆ ಸಾವು

05:56 PM Jun 18, 2022 | Adarsha |

ಭದ್ರಾವತಿ/ ಹೊಳೆಹೊನ್ನೂರು:ಪ್ರೇಮಿಯ ಮನೆಯವರು ಜಾತಕದಲ್ಲಿನಕುಜದೋಷದ ಕಾರಣ ನೀಡಿವಿವಾಹಕ್ಕೆ ನಿರಾಕರಿಸಿದ ಕಾರಣಮೇ 31ರಂದು ವಿಷ ಸೇವಿಸಿಆತ್ಮಹತ್ಯೆಗೆ ಪ್ರಯತ್ನಿಸಿ ಆಸ್ಪತ್ರೆಗೆದಾಖಲಾಗಿದ್ದ ತೀರ್ಥಹಳ್ಳಿಠಾಣೆ ಪೊಲೀಸ್‌ ಪೇದೆಸುಧಾ (29) ಶುಕ್ರವಾರ ಚಿಕಿತ್ಸೆ ಫಲಿಸದೆಮೃತಪಟ್ಟಿದ್ದಾರೆ.ಮೂಲತಃ ಭದ್ರಾವತಿ ತಾಲೂಕಿನಕಲ್ಲಾಪುರ ಗ್ರಾಮದ ನಿವಾಸಿಯಾಗಿದ್ದಸುಧಾ ತೀರ್ಥಹಳ್ಳಿಯಲ್ಲಿ ಪೊಲೀಸ್‌ಕಾನ್ಸ್‌ಟೇಬಲ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು.

Advertisement

ಅವರಿಗೆತೀರ್ಥಹಳ್ಳಿಯಲ್ಲಿಉಪವಲಯಾರಣ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಬೆಳಗಾವಿ ಮೂಲದ ಪ್ರವೀಣ್‌ ಮೊಕಾಶಿಪರಿಚಯವಾಗಿ ಅದು ಪರಸ್ಪರಪ್ರೀತಿಗೆ ತಿರುಗಿತು. ಆರಂಭದಲ್ಲಿಎರಡೂ ಕುಟುಂಬದವರು ಮದುವೆಗೆಒಪ್ಪಿಕೊಂಡಿದ್ದರಾದರೂ ಪ್ರವೀಣನಮನೆಯಲ್ಲಿ ಆತನ ತಾಯಿ ಲಕ್ಷಿ ¾àಅವರು ಸುಧಾ-ಪ್ರವೀಣ ಇಬ್ಬರಜಾತಕವನ್ನು ಜ್ಯೋತಿಷಿಯೊಬ್ಬರಿಗೆತೋರಿಸಿದಾಗ ಹುಡುಗಿ ಸುಧಾ ಅವರಜಾತಕದಲ್ಲಿ ಕುಜ ದೋಷವಿರುವ ಕಾರಣಆಕೆಯನ್ನು ಪ್ರವೀಣ ವಿವಾಹವಾದರೆಅವನಿಗೆ ಪ್ರಾಣಾಪಾಯವಾಗುತ್ತದೆಎಂದು ಹೇಳಿದ್ದು ಅದಕ್ಕಾಗಿ ಪ್ರವೀಣನತಾಯಿ ಅವರ ವಿವಾಹಕ್ಕೆ ಒಪ್ಪದೆನಿರಾಕರಿಸಿದ್ದರು ಎನ್ನಲಾಗಿದೆ.

ಆದರೆಪ್ರವೀಣನನ್ನು ಗಾಢವಾಗಿ ಪ್ರೀತಿಸುತ್ತಿದ್ದಸುಧಾ ಅನೇಕ ಬಾರಿ ಪ್ರವೀಣನನ್ನುಸಂಪರ್ಕಿಸಿ ಮದುವೆಯಾಗುವಂತೆಕೋರಿ, ನೀವಿಲ್ಲದೆ ನಾನು ಬದುಕಲುಸಾಧ್ಯವಿಲ್ಲ ಎಂದಿದ್ದರು. ಆದರೆ ಪ್ರವೀಣನತಾಯಿ ಇವರ ವಿವಾಹಕ್ಕೆ ನಿರಾಕರಿಸಿದ್ದರು.ಅಂತಿಮವಾಗಿ ಸುಧಾ ಮೇ31ರಂದು ಪ್ರವೀಣ ಕೆಲಸಮಾಡುತ್ತಿದ್ದ ಸ್ಥಳಕ್ಕೆ ಹೋಗಿಆತನನ್ನು ಭೇಟಿ ಮಾಡಿದ್ದಾಳೆ.ಆಗ ಪ್ರವೀಣ ಸುಧಾಳನ್ನುತನ್ನ ಬೈಕಿನಲ್ಲಿ ಕೂರಿಸಿಕೊಂಡುಭದ್ರಾವತಿಯ ಆರ್‌ಎಂಸಿ ಯಾರ್ಡಿನಬಳಿ ಕರೆತಂದು ಆಕೆಯೊಂದಿಗೆಮಾತನಾಡಿ ನಾನು ವಿಷ ಕುಡಿಯುತ್ತೇನೆ.ನೀನೂ ವಿಷ ಕುಡಿ. ಇಬ್ಬರೂ ಸಾಯೋಣಎಂದು ಹೇಳಿ ಆಕೆಗೆ ವಿಷ ನೀಡಿದ್ದಾನೆ.ಪ್ರಿಯಕರ ಪ್ರವೀಣನ ಮಾತನ್ನು ನಂಬಿದಸುಧಾ ಹಿಂದೆಮುಂದೆ ಯೋಚಿಸದೆಆತ ವಿಷ ಕುಡಿದನೋ ಬಿಟ್ಟನೋನೋಡದೆ ಅತ ಕೊಟ್ಟ ವಿಷವನ್ನು ಸೇವಿಸಿಅಸ್ವಸ್ಥಳಾಗಿದ್ದಾಳೆ.

ಅವಳನ್ನು ಚಿಕಿತ್ಸೆಗಾಗಿಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಈ ಕುರಿತಂತೆ ಆಕೆ ಪೊಲೀಸರಿಗೆ ನೀಡಿದಹೇಳಿಕೆ ಮತ್ತು ದೂರಿನ ಮೇರೆಗೆಹಳೇನಗರ ಪೊಲೀಸರು ಪ್ರವೀಣ ಹಾಗೂಆತನ ತಾಯಿ ಲಕ್ಷಿ ¾à ವಿರುದ್ಧ ಎಫ್‌ಐಆರ್‌ದಾಖಲಿಸಿದ್ದರು.ಚಿಕಿತ್ಸೆ ಫಲಿಸದೆ ಸುಧಾ ಶುಕ್ರವಾರಮಣಿಪಾಲ್‌ ಆಸ್ಪತ್ರೆಯಲ್ಲಿಮೃತಪಟ್ಟಿದ್ದಾರೆ. ಆರೋಪಿ ಪ್ರವೀಣನಾಪತ್ತೆಯಾಗಿದ್ದು, ಆತನ ಪತ್ತೆಕಾರ್ಯನಡೆಸಿದ್ದೇವೆ ಎಂದು ಹಳೇನಗರ ಠಾಣೆಪಿಎಸ್‌ಐ ತಿಳಿಸಿದ್ದಾರೆ. ಮೃತ ಸುಧಾಳದೇಹದ ಪೋಸ್ಟ್‌ಮಾರ್ಟಂ ನಂತರದೇಹವನ್ನು ಭದ್ರಾವತಿ ತಾಲೂಕಿನಕಲ್ಲಾಪುರ ಗ್ರಾಮಕ್ಕೆ ಶುಕ್ರವಾರ ಮಧ್ಯಾಹ್ನತರಲಾಯಿತು. ಮನೆಯಲ್ಲಿ ಆಕೆಯಪೋಷಕರಬಂಧುಗಳ ಶೋಕ ಗ್ರಾಮದಲ್ಲಿಸೂತಕದ ಛಾಯೆ ಮನೆಮಾಡಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next