Advertisement
ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದ ವಿಸ್ತರಣಾ ನಿರ್ದೇಶಕ ಡಾ| ಎಸ್.ಪಿ.ನಟರಾಜು, ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ನಮ್ಮ ಪೂರ್ವಿಕರ ಕಾಲದಿಂದಲೂ ಮಾಡುತ್ತಿದ್ದ ಕೃಷಿಯಾಗಿದ್ದು, ಕಾಲ ಕಳೆದಂತೆ ಜನಸಂಖ್ಯೆಗೆ ಅನುಗುಣವಾಗಿ ಕೃಷಿಯಲ್ಲಿ ತಳಿಯ ಆವಿಷ್ಕಾರ- ಸಂಶೋಧನೆಗಳು ನಡೆದು ಆಹಾರ, ಹಣ್ಣು ಹಾಗೂ ಹಾಲಿನ ಉತ್ಪಾದನೆ ಹೆಚ್ಚಾಗಿದೆ.
ರಸಗೊಬ್ಬರಗಳ ಬಳಕೆಯಿಂದ ಕೃತಕ ಕೃಷಿಯಾಗಿ ಮಾರ್ಪಟ್ಟಿದೆ. ಇದರ ಪರಿಣಾಮವಾಗಿ ವಾತಾವರಣದಲ್ಲಿ ವ್ಯತ್ಯಾಸ ಉಂಟಾಗಿ ಬೆಳೆಗಳ ಮೇಲೆ ಹವಾಮಾನ ಬದಲಾವಣೆಯ ದುಷ್ಪರಿಣಾಮಗಳುಂಟಾಗಿವೆ. ಬದಲಾದ ಪರಿಸ್ಥಿತಿಗೆ ಹೊಂದಿಕೊಂಡಂತೆ ಕೃಷಿಯಲ್ಲಿ ನೈಸರ್ಗಿಕ ಪರಿಕರಗಳನ್ನು ಉಪಯೋಗಿಸಿಕೊಂಡು ಕೃಷಿ ಮಾಡುವುದರಿಂದ ಕೃಷಿ ವೆಚ್ಚ
ಕಡಿಮೆಯಾಗಿ ನೈಸರ್ಗಿಕ ಆಹಾರ ಉತ್ಪನ್ನಗಳನ್ನು ಬೆಳೆಯಬಹುದಾಗಿದೆಯೆಂದು ಹೇಳಿದರು. ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ| ಯೋಗೀಶ್ ಎಚ್.
ಆರ್. ಮಾತನಾಡಿ, ತೋಟಗಾರಿಕಾ ಬೆಳೆಗಳಲ್ಲಿ ಅಂತರ ಬೆಳೆಗಳನ್ನು ಬೆಳೆಯುವುದರಿಂದ ಕಳೆ ನಿಯಂತ್ರಣ ಹಾಗೂ ತೋಟಗಾರಿಕಾ ಬೆಳೆಗಳಾದ ತೆಂಗು, ಅಡಕೆಯಲ್ಲಿ ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳುವುದರಿಂದ ಕೀಟ- ರೋಗಗಳ ಹತೋಟಿ ಮಾಡಬಹುದಾಗಿದೆ ಎಂದು ಹೇಳಿದರು. ರೈತರು ಸ್ವಯಂ ಪ್ರೇರಿತವಾಗಿ ತಯಾರಿಸಿಕೊಂಡ ಅಕ್ಕಿಯ ಗಂಜಿಯನ್ನು ಉಪಯೋಗಿಸಿ ತೆಂಗಿನಲ್ಲಿ ಕಂಡುಬರುವ ಕೀಟ ಬಾಧೆಯನ್ನು ಹತೋಟಿಗೆ ತರುತ್ತಾರೆ. ಅದೇ ರೀತಿ ಅಂತರ ಬೆಳೆಗಳನ್ನು ಬೆಳೆಯಲು ಸಲಹೆ ನೀಡಿದರು. ರೈತರ ಆದಾಯ ದ್ವಿಗುಣ ಮಾಡಬೇಕಾಗಿದ್ದು, ಜಮೀನಿನಲ್ಲೇ ಸಿಗುವ ಔಷ ಧೀಯ ಎಲೆಗಳು, ಸಗಣಿ ಹಾಗೂ ಗಂಜಲ ಉಪಯೋಗಿಸಿಕೊಂಡು ಖರ್ಚು ಕಡಿಮೆ ಮಾಡಿ ಪರಿಸರದಲ್ಲಿ ಸಮತೋಲನತೆ ಕಾಪಾಡಬೇಕಾಗಿದೆ ಎಂದು ಹೇಳಿದರು.
Related Articles
Advertisement
ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಯೋಜನೆಯ ವಲಯ-7 ಕ್ಕೆಒಳಪಡುವ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಹಾಸನ ಮತ್ತು ಮೈಸೂರು ಜಿಲ್ಲೆಗಳಿಂದ 14 ಸಮುದಾಯ ಸಹಾಯಕರು, 38 ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಹಾಗೂ ಕಾರ್ಯವಾಹಿ ಸಂಶೋಧನಾ ಯೋಜನಾ ತಂಡದ ವಿಜ್ಞಾನಿಗಳು ಭಾಗವಹಿಸಿದ್ದರು. ಸಭೆಯಲ್ಲಿ ಪಾಲ್ಗೊಂಡಿದ್ದವರನ್ನು ರ್ಯವಾಹಿ
ಸಂಶೋಧನಾ ಯೋಜನಾ ಸಭೆಯ ಮುಖ್ಯಸ್ಥರಾದ ಡಾ| ಎಚ್. ಕೆ.
ವೀರಣ್ಣ ಸ್ವಾಗತಿಸಿ, ಯೋಜನೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷಿ ತೋಟಗಾರಿಕಾ ವಿವಿ ಡೀನ್ (ಕೃಷಿ) ಡಾ| ಚಿದಾನಂದಪ್ಪ ಎಚ್. ಎಂ. ಅವರು ಮಣ್ಣಿನ ಆರೋಗ್ಯ, ಫಲವತ್ತತೆ ಮತ್ತು ಭೌತಿಕ ಹಾಗೂ ಜೈವಿಕ ಗುಣಧರ್ಮಗಳ ಮಹತ್ವವನ್ನು ಹೇಳಿ,
ಯೋಜನೆಯ ಯಶಸ್ಸಿಗೆ ದಿಧೀರ್ಘಾವಧಿಯ ಸಂಶೋಧನೆ ಅಗತ್ಯವೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಒಆರ್‌ಪಿ
ತಂಡದ ಸದಸ್ಯ ಕುಮಾರ್ ನಾಯು ಇತರರಿದ್ದರು. ಡಾ| ಶಿಲ್ಪ ಎಚ್.ಡಿ. ಕಾರ್ಯಕ್ರಮ ನಿರೂಪಿಸಿದರು. ಡಾ| ಪ್ರಶಾಂತ್ ಕೆ. ಎಂ. ವಂದಿಸಿದರು.