Advertisement

ವಸ್ತುನಿಷ್ಠ ಇತಿಹಾಸ ಪಠ್ಯ ಇಂದಿನ ಅಗತ್ಯ: ಡಾ|ಪಾಂಡೆ

12:17 PM Jun 07, 2019 | Naveen |

ಶಿವಮೊಗ್ಗ: ಭಾರತದಲ್ಲಿ ಹಾಲಿ ಶಾಲಾ-ಕಾಲೇಜುಗಳಲ್ಲಿ ಪಠ್ಯದಲ್ಲಿರುವ ಇತಿಹಾಸ ವಿಷಯಗಳು ಸಂಪೂರ್ಣ ಯೂರೋ ಸೆಂಟ್ರಿಕ್‌ ಆಗಿದ್ದು ಅಂಥವುಗಳನ್ನು ತೆಗೆದುಹಾಕಿ ಭಾರತದ ವಸ್ತುನಿಷ್ಟ ಹಾಗೂ ಪರಿಪೂರ್ಣ ಇತಿಹಾಸದ ಬಗ್ಗೆ ಮಾಹಿತಿ ಒದಗಿಸುವುದು ಇಂದಿನ ಅಗತ್ಯವಾಗಿದೆ. ಯಾವುದೇ ಪೂರ್ವಾಗ್ರಹಕ್ಕೊಳಗಾಗದೆ ವಾಸ್ತವಿಕ ಇತಿಹಾಸ ನಮ್ಮ ಮುಂದೆ ಬರಬೇಕಾಗಿದೆ ಎಂದು ನವದೆಹಲಿಯ ಭಾರತೀಯ ಇತಿಹಾಸ ಸಂಕಲನ ಯೋಜನಾದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಡಾ| ಬಾಲಮುಕುಂದ ಪಾಂಡೆ ಅಭಿಪ್ರಾಯಪಟ್ಟರು.

Advertisement

ಸಮೀಪದ ಲಕ್ಕಿನಕೊಪ್ಪದ ಅಮೂಲ್ಯ ಶೋಧ ವಸ್ತು ಸಂಗ್ರಹಾಲಯ ಆವರಣದಲ್ಲಿ ಭಾರತೀಯ ಇತಿಹಾಸ ಸಂಕಲನ ಸಮಿತಿ, ಕರ್ನಾಟಕ ಪ್ರಾಂತದ ಪದಾಕಾರಿಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಭಾರತ ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ, ಅಧ್ಯಾತ್ಮಿಕವಾಗಿ ಸಂಪದ್ಭರಿತ ದೇಶವಾಗಿದೆ. ಆ ಕಾರಣಕ್ಕಾಗಿಯೇ ನಮ್ಮ ದೇಶದ ಮೇಲೆ ಕ್ರಿ.ಶ. 712ರಂದಲೇ ತುರ್ಕರು, ಮೊಘಲರು, ಬ್ರಿಟಿಷರು ಮೊದಲಾದ ವಿದೇಶಿಯರ ಆಕ್ರಮಗಳು ನಡೆದರೂ ಇಂದಿಗೂ ಬಲಶಾಲಿ ರಾಷ್ಟ್ರವಾಗಿಯೇ ತಲೆ ಎತ್ತಿ ನಿಂತಿದೆ. ಆದರೆ ನಮಗೆ ಇತಿಹಾಸವೇ ಗೊತ್ತಿಲ್ಲ ಎಂಬಂತೆ ಯುರೋಪಿನ ಇತಿಹಾಸಕಾರರು ತಮ್ಮ ಗ್ರಂಥದಲ್ಲಿ ಬಿಂಬಿಸಿದ್ದು ವಿಷಾದನೀಯ ಎಂದರು. ಗತಿಸಿ ಹೋದ ಭವ್ಯ ಭಾರತದ ನಿರ್ಮಾಣ ಇಂದಿನ ಯುವ ಇತಿಹಾಸಕಾರರ ಮೇಲಿದೆ ಎಂದ ಅವರು, ವಿವಿಧ ಸಂಪನ್ಮೂಲಗಳನ್ನು ಬಳಸಿಕೊಂಡು ಸ್ಥಳೀಯ ಇತಿಹಾಸ, ಸಂಸ್ಕೃತಿ, ಸ್ಥಳನಾಮ, ಪರಂಪರೆ ಕುರಿತು ವಿಸ್ತೃತ ಅಧ್ಯಯನ ಕೈಗೊಳ್ಳಬೇಕೆಂದು ಇದೇ ಸಂದರ್ಭದಲ್ಲಿ ಕರೆ ನೀಡಿದ ಅವರು, ಅದಕ್ಕಾಗಿ ಸಂಶೋಧನೆಗಳಿಗೆ ಸಹಾಯ ಮಾಡಲೆಂದೇ ಇರುವ ಭಾರತ ಸರ್ಕಾರದ ಅಧೀನದಲ್ಲಿರುವ ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ತು (ಐಸಿಎಚ್ಆರ್‌), ಐಸಿಎಸ್‌ಎಸ್‌ಆರ್‌., ಐಸಿಎಸ್‌ಎಸ್‌ಆರ್‌, ಮೊದಲಾದ ಅನುದಾನ ನೀಡುವ ಸಂಸ್ಥೆಗಳ ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಇತಿಹಾಸ ಸಂಕಲನ ಸಮಿತಿಯ ಶಿವಮೊಗ್ಗ ಜಿಲ್ಲಾ ಘಟಕ ಸ್ಥಳೀಯ ಇತಿಹಾಸ, ಸಂಸ್ಕೃತಿಗೆ ಸಂಬಂಧಿಸಿದಂತೆ ಒಂದು ಪೈಲೆಟ್ ಪ್ರಾಜೆಕ್ಟ್ ಸಿದ್ಧಪಡಿಸಿದೆ. ಅಲ್ಲದೆ ಕೆಳದಿ ರಾಜಮನೆತನದ ಆಳ್ವಿಕೆಯಲ್ಲಿ ರಾಜಧಾನಿಯಾಗಿದ್ದ ಇಕ್ಕೇರಿ ಕೋಟೆಯ ಉತVನನದ ಪ್ರಸ್ತಾವನೆಯನ್ನೂ ಸಿದ್ಧಗೊಳಿಸಿದ್ದಾರೆ. ಆ ಪ್ರಸ್ತಾವನೆ ಅನುದಾನಕ್ಕಾಗಿ ಐಸಿಎಚ್ಆರ್‌ ಮುಂದಿದೆ. ಈ ಘಟಕ ಇಡೀ ದೇಶದಲ್ಲಿಯೇ ಅತ್ಯುತ್ತಮ ಕಾರ್ಯ ನಿರ್ವಹಣೆ ಮಾಡುತ್ತಿದ್ದು ದೇಶಕ್ಕೇ ಮಾದರಿಯಾಗಿದೆ ಎಂದು ಅವರು ಶ್ಲಾಘಿಸಿದರು.

ರಾಜ್ಯದಲ್ಲಿ ಅನೇಕ ಪುರಾತನ ಸ್ಮಾರಕಗಳು, ಪಾರಂಪರಿಕ ಕಟ್ಟಡಗಳು ವಿವಿಧ ಅಭಿವೃದ್ಧಿ ಯೋಜನೆ ಹೆಸರಿನಲ್ಲಿ ನಾಶವಾಗುತ್ತಿರುವ ಬಗ್ಗೆ ಮಾಧ್ಯಮಗಳ ಮೂಲಕ ಮಾಹಿತಿ ಲಭ್ಯವಾಗಿದೆ. ಇಲಾಖೆಯ ಅಧಿಕಾರಿಗಳು ಭಾರತೀಯ ಇತಿಹಾಸ ಸಂಕಲನ ಸಮಿತಿಯ ಪದಾಧಿಕಾರಿಗಳ ಕೋರಿಕೆಗಳಿಗೆ ಸ್ಪಂದಿಸಬೇಕು ಎಂದು ತಿಳಿಸಿದ ಅವರು, ರಾಜ್ಯ ಹಾಗೂ ಕೇಂದ್ರ ಪುರಾತತ್ವ ಇಲಾಖೆಗಳು ಅವುಗಳ ರಕ್ಷಣೆಗೆ ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

Advertisement

ಸಂಕಲನ ಸಮಿತಿಯ ರಾಜ್ಯಾಧ್ಯಕ್ಷ ಪ್ರೊ| ಅ.ಸುಂದರ, ಉಪಾಧ್ಯಕ್ಷ ಎಚ್.ಖಂಡೋಬ ರಾವ್‌, ನವದೆಹಲಿಯ ಐಸಿಎಚ್ಆರ್‌ ಸದಸ್ಯ ಡಾ| ಎಂ.ಕೊಟ್ರೇಶ್‌, ಪ್ರಾಂತ ಸಂಘಟನಾ ಕಾರ್ಯದರ್ಶಿ ಡಾ| ಶ್ರೀನಿವಾಸ ರಾವ್‌, ಸಮಿತಿಯ ಜಿಲ್ಲಾಧ್ಯಕ್ಷ ಡಾ| ಬಾಲಕೃಷ್ಣ ಹೆಗಡೆ, ಕಾರ್ಯದರ್ಶಿ ನಿನ್‌ ಓಲಿಕಾರ್‌, ಖಜಾಂಚಿ ಅಜೇಯಕುಮಾರ ಶರ್ಮಾ, ಡಾ| ಜಗದೀಶ ಅಗಸಿಬಾಗಿಲವರ್‌, ಡಾ| ಎಸ್‌.ಜಿ. ಸಾಮಕ, ದಕ್ಷಿಣ ಭಾರತ ಉಸ್ತುವಾರಿ ವಹಿಸಿಕೊಂಡಿರುವ ಹೈದರಾಬಾದಿನ ಡಾ| ಅನುರಾಧಾ, ದಾವಣಗೆರೆಯ ಡಾ| ಜೆ.ಕೆ.ಮಲ್ಲಿಕಾರ್ಜುನ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next