Advertisement

ಶಿವಮೊಗ್ಗ: ಭಾರಿ ಮಳೆಗೆ ಮನೆಯ ಗೋಡೆ ಕುಸಿದು ಮಹಿಳೆ ಸ್ಥಳದಲ್ಲೇ ಸಾವು

07:40 AM Aug 09, 2022 | Team Udayavani |

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಭದ್ರಾವತಿ ತಾಲೂಕಿನಲ್ಲಿ ಸುರಿದ ಮಳೆ ಮನೆಯ ಗೋಡೆ ಕುಸಿದು ಮಹಿಳೆಯೊಬ್ಬರು ಸಾವನ್ನಪ್ಪಿ ಇನ್ನೊಬ್ಬರು ಗಾಯಗೊಂಡ ಘಟನೆ ನಡೆದಿದೆ.

Advertisement

ಕಾಚಿಗೊಂಡನಹಳ್ಳಿ ಗ್ರಾಮದ ಸುಜಾತ(55) ಎಂಬ ಮಹಿಳೆ ಮೃತದುರ್ದೈವಿ.

ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು ಹಲವು ಕಡೆ ಭಾರಿ ಅವಘಡಗಳು ಸಂಭವಿಸುತ್ತಿದೆ. ಸೋಮವಾರ ರಾತ್ರಿ ಸುರಿದ ಮಳೆಗೆ ಕಾಚಿಗೊಂಡನಹಳ್ಳಿ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಗಾಯಾಳು ಕೃಷ್ಣಮೂರ್ತಿ ಅವರನ್ನು ಶಿವಮೊಗ್ಗದ ಹಾಸ್ಪಿಟಲ್ ಗೆ ಸ್ಥಳಾಂತರಿಸಲಾಗಿದೆ.

ಭಾರಿ ಮಳೆ ಕಾರಣ ತೇವಗೊಂಡಿದ್ದ ಗೋಡೆ ಕುಸಿದು ದುರಂತ ಸಂಭವಿಸಿದೆ.

ಇದನ್ನೂ ಓದಿ : 2023ರಲ್ಲಿ ನಮ್ಮದೇ ಸರಕಾರ ಅಸ್ತಿತ್ವಕ್ಕೆ : ನಾನು ಸಿಎಂ ಆಕಾಂಕ್ಷಿ ಎಂದ ಸಚಿವ ಕತ್ತಿ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next