Advertisement
ಸ್ಥಳದಲ್ಲಿ ಆರು ಪುಟಗಳ ಡೆತ್ ನೋಟ್ ಪತ್ತೆಯಾಗಿದ್ದು, ನಿಗಮದ ಇಬ್ಬರು ಅ ಧಿಕಾರಿಗಳ ವಿರುದ್ಧ 80ರಿಂದ 85 ಕೋಟಿ ರೂ. ಅವ್ಯವ ಹಾರದ ಆರೋಪ ಮಾಡಿದ್ದಾರೆ.ಚಂದ್ರಶೇಖರ್ ಆತ್ಮಹತ್ಯೆಯ ಬೆನ್ನಲ್ಲೇ ಪ್ರಕ ರಣವು ರಾಜಕೀಯ ತಿರುವು ಪಡೆದುಕೊಂಡಿದ್ದು, ರಾಜ್ಯ ಸರಕಾರದ ವಿರುದ್ಧ ವಿಪಕ್ಷಗಳು ಮುಗಿಬಿದ್ದಿವೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹೆಸರಿನಲ್ಲಿ ನಡೆಯುತ್ತಿರುವ ದುರಾಚಾರ ಹಾಗೂ ಭ್ರಷ್ಟಾಚಾರದ ನೇತೃತ್ವವನ್ನು ಇಲಾಖೆಯ ಸಚಿವರೇ ವಹಿಸಿರುವುದು ದುರಂತ. ಈ ಕೂಡಲೇ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವ ನಾಗೇಂದ್ರ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.
ಯೂನಿಯನ್ ಬ್ಯಾಂಕ್ ಬೆಂಗಳೂರಿನ ವಸಂತ ನಗರ ಬ್ರ್ಯಾಂಚ್ ನಲ್ಲಿದ್ದ ಹಾಲಿ ಖಾತೆಯಲ್ಲಿ ಒಂದು ಉಪಖಾತೆಯನ್ನು ಎಂ.ಜಿ. ರಸ್ತೆ ಶಾಖೆಗೆ ವರ್ಗಾಯಿಸಲು ಸಚಿವರಿಂದ ಮೌಖೀಕ ಆದೇಶ ಇತ್ತು. ಆದರೆ ಇದಕ್ಕೆ ಬ್ರಾಂಚ್ ಮ್ಯಾನೇಜರ್ ಒಪ್ಪಿರಲಿಲ್ಲ. ಆದರೆ ಒತ್ತಾಯಪೂರ್ವಕವಾಗಿ ಮಾ. 4ರಂದು ಎಂಜಿ ರಸ್ತೆಯ ಯೂನಿಯನ್ ಬ್ಯಾಂಕ್ ಶಾಖೆಗೆ ಜೀರೋ ಬ್ಯಾಲೆನ್ಸ್ ಉಪಖಾತೆ ಯನ್ನು ವರ್ಗಾಯಿಸಲಾಯಿತು.
Related Articles
Advertisement
ಸಂಶಯ ಬಂದು ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ನಿಗಮದ ವ್ಯವಸ್ಥಾಪಕರು, ಅಕೌಂಟ್ ಆಫೀಸರ್ ಜಂಟಿ ಸಹಿ ಮಾಡಿ ಹಣ ವರ್ಗಾವಣೆ ಮಾಡಿರುವ ಬಗ್ಗೆ ದಾಖಲೆಯಲ್ಲಿ ತೋರಿಸಲಾಗಿತ್ತು. ಮೇ 23ರಂದು ನಿಗಮದ ಪ್ರಾದೇಶಿಕ ಮುಖ್ಯಸ್ಥರಿಗೆ ದೂರು ನೀಡಿದಾಗ ಅವರು ಕೂಡ ಇಲಾಖೆ ಸಚಿವರ ಕಚೇರಿ ಸಿಬಂದಿಯಲ್ಲಿ ಮಾತನಾಡಿದ್ದು, ಎಲ್ಲ ಹಣ ವಾಪಸ್ ಬಂದೇ ಬರುತ್ತದೆ. ಅಲ್ಲಿಯ ವರೆಗೂ ಎಲ್ಲವನ್ನೂ ಗೌಪ್ಯವಾಗಿಡಿ ಎಂದು ತಾಕೀತು ಮಾಡಿದ್ದರು. ಅದೇ ದಿನ ಸಂಜೆ 5 ಕೋ.ರೂ. ವಾಪಸ್ ಬಂದಿದೆ ಎಂದರು.
ನಿಗಮದ ಅಕೌಂಟ್‌ನಿಂದ 80ರಿಂದ 85 ಕೋಟಿ ರೂ.ಗಳನ್ನು ನಿಯಮ ಬಾಹಿರವಾಗಿ ಲೂಟಿ ಮಾಡಿದ್ದಾರೆ. ನನ್ನ ಈ ಸ್ಥಿತಿಗೆ ಜೆ.ಜಿ. ಪದ್ಮನಾಭ, ಪರಶುರಾಮ ದುರುಗಣ್ಣನವರ್, ಬ್ಯಾಂಕ್ ಮ್ಯಾನೇಜರ್ ಸುಚಿಸ್ಮಿತಾ ಕಾರಣ. ನಾನು ಹೇಡಿಯಲ್ಲ, ಆದರೆ ಅವಮಾನ ಸಹಿಸಲಾರೆ’ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖೀಸಿದ್ದಾರೆ.
ಏನಿದು ಪ್ರಕರಣ, ಡೆತ್‌ನೋಟ್‌ನಲ್ಲೇನಿದೆ?
-ಬೆಂಗಳೂರಿನ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕೌಂಟೆಂಟ್ ಚಂದ್ರಶೇಖರ್ ಆತ್ಮಹತ್ಯೆ
-ಡೆತ್‌ನೋಟ್‌ನಲ್ಲಿ ನಿಗಮದ ಇಬ್ಬರು ಅಧಿ ಕಾರಿಗಳ ವಿರುದ್ಧ ಅವ್ಯವಹಾರದ ಆರೋಪ
-ಅಕ್ರಮ ಖಾತೆಗೆ ನಿಗಮದಿಂದ 187 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ
-ಹಂತ ಹಂತವಾಗಿ 85 ಕೋ.ರೂ. ಲೂಟಿ, ಇದಕ್ಕೆ ಯೂನಿಯನ್ ಬ್ಯಾಂಕ್ ಮ್ಯಾನೇಜರ್ ಸುಚಿಸ್ಮಿತಾ ಸಾಥ್
-ಈ ಹಗರಣಕ್ಕೆ ನಾನು ಕಾರಣನಲ್ಲ, ಇದರಲ್ಲಿ ನನ್ನ ಪಾತ್ರವಿಲ್ಲ ಎಂದು ಹೇಳಿಕೆ ರಾಜ್ಯ ಕಾಂಗ್ರೆಸ್ ಸರಕಾರದಎಲ್ಲೆ ಮೀರಿದ ಭ್ರಷ್ಟಾಚಾರದ ನೈಜ ಮುಖವನ್ನು ಈ ಘಟನೆ ಅನಾವರಣ ಮಾಡಿದೆ. ಕಮಿಷನ್ ದಂಧೆಗಾಗಿ ಮಾತ್ರ ಯೋಜನೆಗಳು ರೂಪಿತವಾಗುತ್ತಿದ್ದು, ಅಭಿವೃದ್ಧಿ ಕಾರ್ಯಗಳು ತುಕ್ಕು ಹಿಡಿದು ಕುಳಿತಿವೆ. ಈ ಕಮಿಷನ್ ವಿಷ ವರ್ತುಲದಲ್ಲಿ ಸಿಲುಕಿ ಇನ್ನೆಷ್ಟು ಜೀವಗಳು ಬಲಿ ಯಾಗಬೇಕು?
– ಬಿ.ವೈ. ವಿಜಯೇಂದ್ರ,
ಬಿಜೆಪಿ ರಾಜ್ಯಾಧ್ಯಕ್ಷ ಈ ಕೊಲೆಗಡುಕ ಸರಕಾರವು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ 187 ಕೋಟಿ ರೂ. ಮೊತ್ತದ ಬೃಹತ್ ಭ್ರಷ್ಟಾಚಾರವನ್ನು ಅಧಿಕಾರಿಯ ತಲೆಗೆ ಕಟ್ಟಲು ಹೋಗಿ ಕಿರುಕುಳ ನೀಡಿ, ಆತ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗುವಂತೆ ಮಾಡಿದೆ. ಸಿಎಂ ಸಿದ್ದರಾಮಯ್ಯನವರೇ, ಇದು ಆತ್ಮಹತ್ಯೆ ಅಲ್ಲ; ಕೊಲೆ. ಈ ಕೊಲೆಗೆ ಹೊಣೆ ಯಾರು?
-ಆರ್. ಅಶೋಕ್, ವಿಪಕ್ಷ ನಾಯಕ