Advertisement

ಭದ್ರಾ ಜಲಾಶಯ ಭರ್ತಿ: ನದಿ ಪಾತ್ರದ ಜನರಿಗೆ ಎಚ್ಚರಿಕೆ

06:41 PM Aug 09, 2021 | Shreeraj Acharya |

ಭದ್ರಾವತಿ: ಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದ ಕಾರಣ ಭದ್ರಾ ಜಲಾಶಯ ತುಂಬಿದೆ. ನದಿ ಪಾತ್ರದ ನಿವಾಸಿಗಳು ಎಚ್ಚರ ವಹಿಸಬೇಕು. ಅಲ್ಲದೆ ನದಿ ದಡದಲ್ಲಿ ಯಾರೂ ಸಂಚರಿಸಬಾರದು ಹಾಗೂ ಜಾನುವಾರುಗಳನ್ನು ನದಿ ತೀರಕ್ಕೆ ಬಿಡಬಾರದೆಂದು ತಹಶೀಲ್ದಾರ್‌ ಆರ್‌. ಪ್ರದೀಪ್‌ ಹೇಳಿದರು.

Advertisement

ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಜಲಾಶಯಕ್ಕೆ‌ ನೀರಿನ ಒಳಹರಿವು ಹೆಚ್ಚಿದ್ದರಿಂದ ಜಲಾಶಯದದಿಂದ 25 ಸಾವಿರ ಕ್ಯೂಸೆಕ್‌ ನೀರನ್ನು ಭದ್ರಾನದಿಗೆ ಬಿಡಲಾಗಿತ್ತು. ಈಗ ಮಳೆ ಪ್ರಮಾಣ ಕಡಿಮೆಯಾಗಿದೆ ಒಂದೊಮ್ಮೆ ಮಳೆ ಪ್ರಮಾಣ ಹೆಚ್ಚದರೆ ಭದ್ರಾ ನದಿಯು ತುಂಬಿ ಹರಿಯುವ ಪರಿಸ್ಥಿತಿ ನಿರ್ಮಾಣವಾದರೆ ಅದನ್ನು ಸಮರ್ಪಕವಾಗಿ ಎದುರಿಸಲು ತಂಡವನ್ನು ರಚಿಸಲಾಗಿದೆ.

ತಗ್ಗು ಪ್ರದೇಶವಾದ ಕವಲಗುಂದಿಯ 30 ಕುಟುಂಬಗಳ ಸುಮಾರು 250 ಜನರಿಗೆ ಹಿಂದುಳಿದ ವರ್ಗಗಳ ಬಾಲಕರ ಮತ್ತು ಬಾಲಕಿಯರ ಎರಡು ಹಾಸ್ಟೆಲ್‌ ಗಳಲ್ಲಿ ಪ್ರತ್ಯೇಕವಾಗಿ ಮಹಿಳೆಯರಿಗೆ ಮತ್ತು ಪುರುಷರಿಗೆ ಗಂಜಿಕೇಂದ್ರ ತೆರೆದು ಸ್ಥಳಾಂತರ ಮಾಡಲು ಸಕಲ ಸಿದ್ಧತೆ ಮಾಡಲಾಗಿತ್ತು. ಆದರೆ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಅದರ ಅಗತ್ಯ ಬಿದ್ದಿಲ್ಲ, ಒಂದೊಮ್ಮೆ ಪುನಃ ಮಳೆ ಹೆಚ್ಚಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾದರೆ ಅವರಿಗೆ ಈ ಸೌಲಭ್ಯ ನೀಡಲು ತಾಲೂಕು ಆಡಳಿತ ಮತ್ತು ನಗರಸಭೆ ಸರ್ವ ಸಿದ್ಧತೆ ಮಾಡಿಕೊಂಡಿದೆ.

ಪ್ರತಿವರ್ಷ ನದಿಯಲ್ಲಿ ನೀರು ಹೆಚ್ಚಾದಾಗಲೆಲ್ಲ ಕವಲುಗುಂದಿಯ ತಗ್ಗು ಪ್ರದೇಶದ 30 ಕುಟುಂಬಗಳಿಗೆ ತೊಂದರೆಯಾಗುತ್ತಿರುವುದರಿಂದ ಈ ಕುಟುಂಬಗಳನ್ನು ಸ್ಥಳಾಂರಿಸಲು ಜೇಡಿಕಟ್ಟೆಯ ಬಳಿ ವಾಸಕ್ಕೆ ನಿವೇಶನ ಗುರುತಿಸಿದ್ದು ಆ ಕಾರ್ಯವು ಪ್ರಗತಿಯಲ್ಲಿದೆ. ಅದು ಆದ ಕೂಡಲೇ ಈ ಜನರನ್ನು ಅಲ್ಲಿಗೆ ಸ್ಥಳಾಂತರಿಸುವ ಕಾರ್ಯಕ್ಕೆ ಮುಂದಿನ ದಿನಗಳಲ್ಲಿ ಚಾಲನೆ ದೊರಕಲಿದೆ ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next