Advertisement

Shivamogga: ಮುಂದುವರಿದ ಕರಡಿಗಳ ಹಾವಳಿ; ಸ್ಥಳೀಯರಲ್ಲಿ ತೀವ್ರ ಆತಂಕ

12:55 PM Dec 28, 2024 | Kavyashree |

ಶಿವಮೊಗ್ಗ: ಭದ್ರಾವತಿಯಲ್ಲಿ ಕರಡಿಗಳ ಹಾವಳಿ ಮುಂದುವರಿದಿದೆ ಎಂಬುದಕ್ಕೆ ಸಾಕ್ಷಿ ಎಂಬಂತೆ ರಾತ್ರಿ ಮನೆಬಾಗಿಲಲ್ಲೆ ಕರಡಿಯೊಂದು ಹಾದು ಹೋದ ದೃಶ್ಯವೊಂದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಲ್ಲದೆ ಈ ಘಟನೆ ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ.

Advertisement

ಭದ್ರಾವತಿ ತಾಲೂಕು ಹನುಮಂತಾಪುರ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಭಗವತಿ ಕೆರೆ ಗ್ರಾಮದಲ್ಲಿ ನಿನ್ನೆ ದಿನ ಅಂದರೆ ಡಿಸೆಂಬರ್‌ 27 ರ ರಾತ್ರಿ 11.30 ರ ಸುಮಾರಿಗೆ ಜರ್ಬರ್‌ದಸ್ತ್‌ ಆಗಿದ್ದ ಕರಡಿಯೊಂದು ಮನೆ ಮುಂದೆಯೇ ಹಾದು ಹೋಗಿದೆ. ಇಲ್ಲಿನ ನಿವಾಸಿ ವಾಸುದೇವ ಎಂಬವರ ಮನೆ ಮುಂದೆ ಕರಡಿ ಹಾದು ದೃಶ್ಯ, ಸಿಸಿ ಕ್ಯಾಮರಾವೊಂದರಲ್ಲಿ ಸೆರೆಯಾಗಿದೆ.

30 ಸೆಕೆಂಡ್‌ಗಳ ಅಂತರದಲ್ಲಿ ಮನೆ ಮುಂದೆ ಹಾದು ಹೋಗುವ ಕರಡಿ ನಾಯಿಗಳಿಗೂ ಹೆದರದೇ ಸಾಗುತ್ತದೆ. ಅದರ ಆಕಾರ ನೋಡಿದರೇ ಭಯ ಹುಟ್ಟುತ್ತಿದೆ ಎನ್ನುವ ಸ್ಥಳೀಯರು, ಮನುಷ್ಯನನ್ನು ಜೀವ ಇರುವಾಗಲೇ ಕಿತ್ತು ತಿನ್ನುವ ಕರಡಿಗಳಿಂದ ರಕ್ಷಣೆ ಬೇಕಿದೆ.

ಕರಡಿ ರಾತ್ರಿ ಹೊತ್ತು ಇಲ್ಲಿ ಓಡಾಡುತ್ತಿದೆ ಎಂದು ತಿಳಿದು ಇವತ್ತು ಕತ್ತಲಾಗುವಷ್ಟರಲ್ಲಿ ಮನೆ ಸೇರಿಕೊಳ್ಳುವುದು ಒಳ್ಳೆಯದು ಎಂದೆನಿಸುತ್ತಿದೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ. ಕರಡಿ ಕಾಣಿಸಿಕೊಂಡಿದೆ ಎಂದು ಈಗಾಗಲೇ ವಲಯ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ಕೊಡಲಾಗಿದೆ. ಅರಣ್ಯ ಇಲಾಖೆಯವರು ಇನ್ನಷ್ಟೆ ಪರಿಶೀಲನೆ ನಡೆಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next