Advertisement

55 ಕೋಟಿ ವೆಚ್ಚದಲ್ಲಿ ಹಲವು ಅಭಿವೃದ್ಧಿ ಕಾರ್ಯ

06:26 PM Apr 20, 2021 | Shreeraj Acharya |

ಶಿವಮೊಗ್ಗ: ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾಗಿ 5 ವರ್ಷಗಳ ಅವ ಧಿಯಲ್ಲಿ ಸುಮಾರು 55.05 ಕೋಟಿ ರೂ.ಗಳ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಜಿ.ಪಂ. ಉಪಾಧ್ಯಕ್ಷೆ ವೇದಾ ವಿಜಯಕುಮಾರ್‌ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅನುದಾನದಲ್ಲಿ ಕ್ಷೇತ್ರದ ವಿವಿಧೆಡೆಗಳಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಸಂತೆಕಡೂರು ಗ್ರಾಮದಲ್ಲಿ 395.99 ಲಕ್ಷ ರೂ.ಗಳ ವೆಚ್ಚದಲ್ಲಿ ವಿದ್ಯುತ್‌ ಉಪಕೇಂದ್ರವನ್ನು ಸ್ಥಾಪಿಸಿದ್ದು ತಮಗೆ ಹೆಚ್ಚಿನ ಸಂತಸ ತಂದಿದೆ ಎಂದರು.

ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖಾ ವತಿಯಿಂದ 2016-17ನೇ ಸಾಲಿನಲ್ಲಿ 34.57 ಲಕ್ಷ, 17-18ನೇ ಸಾಲಿನಲ್ಲಿ 59.154, 18-19ನೇ ಸಾಲಿನಲ್ಲಿ 38.43, 19-20ನೇ ಸಾಲಿನಲ್ಲಿ 42.611, 20-21ನೇ ಸಾಲಿನಲ್ಲಿ 21.388 ಸೇರಿ ಒಟ್ಟಾರೆ 196.16 ಲಕ್ಷ ರೂ.ಗಳ ಅನುದಾನ ಬಂದಿದ್ದು, ಹಸೂಡಿ ಕ್ಷೇತ್ರ ದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯಿಂದ 82 ಲಕ್ಷ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ವೈಯಕ್ತಿಕ ಪ್ರಯತ್ನದಿಂದ ವಿಶೇಷ ಅನುದಾನ ಪಡೆದು ಕೆಲ ಕಾರ್ಯ ಮಾಡಿದ್ದು ವಸತಿ ಇಲಾಖೆಯಿಂದ ಹಸೂಡಿ ಕ್ಷೇತ್ರ ವ್ಯಾಪ್ತಿಯ ವಸತಿ ರಹಿತರಿಗೆ 200 ಮನೆ ಹಂಚಿಕೆ ಮಾಡಲಾಗಿದೆ. ಡಾ|ಬಿ. ಆರ್‌. ಅಂಬೇಡ್ಕರ್‌ ಮತ್ತು ಡಾ|ಬಾಬು ಜಗಜೀವನ್‌ ರಾಂ ಯೋಜನೆಯಡಿ 408 ಲಕ್ಷ ರೂ. ವೆಚ್ಚದಲ್ಲಿ 34 ಸಮುದಾಯ ಭವನ ನಿರ್ಮಿಸಲಾಗಿದೆ ಎಂದರು.

ಡಿ.ಕೆ.ಶಿವಕುಮಾರ್‌ ಅವರು ಜಲಸಂಪನ್ಮೂಲ ಸಚಿವರಾಗಿದ್ದ ಸಂದರ್ಭದಲ್ಲಿ ಎಸ್‌.ಸಿ.ಪಿ. ಟಿ.ಎಸ್‌ .ಪಿ. ಯೋಜನೆಯಡಿ 650 ಲಕ್ಷ ರೂ.ಗಳ ವೆಚ್ಚದಲ್ಲಿ ಕಾಂಕ್ರೀಟ್‌ ರಸ್ತೆ ಮತ್ತು ಬಾಕ್ಸ್‌ ಚರಂಡಿ ನಿರ್ಮಾಣ, ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಕೆಎನ್‌ ಎನ್‌ಎಲ್‌ ವತಿಯಿಂದ 255 ಲಕ್ಷ ರೂ.ಗಳ ವಿವಿಧ ಕಾಮಗಾರಿಗಳು, ಕಿಮ್ಮನೆ ರತ್ನಾಕರ್‌ ಸಚಿವರಾಗಿದ್ದಾಗ ಜಲಸಂಪನ್ಮೂಲ ಇಲಾಖೆ ವತಿಯಿಂದ 200 ಲಕ್ಷರೂ. ಗಳ ಅನುದಾನದಲ್ಲಿ ಕಾಂಕ್ರೀಟ್‌ ರಸ್ತೆ ಮತ್ತು ಬಾಕ್ಸ್‌ ಡ್ರೈನೇಜ್‌ ಕಾಮಗಾರಿ ಮಾಡಲಾಗಿದೆ ಎಂದು ತಿಳಿಸಿದರು.

Advertisement

ಕೆ.ಎನ್‌.ಎನ್‌.ಎಲ್‌. ವತಿಯಿಂದ ಭದ್ರಾ ಎಡದಂಡೆ ನಾಲೆಯ ದುಮ್ಮಳ್ಳಿ, ಹಾರಕಟ್ಟೆ, ರೆಡ್ಡಿ ಕ್ಯಾಂಪ್‌, ಸಂತೆಕಡೂರು ವಿತರಣಾ ನಾಲೆಯಲ್ಲಿ ಶಿಥಿಲಗೊಂಡ ಸೇತುವೆಗಳನ್ನು 78 ಲಕ್ಷ ರೂ.ಗಳಲ್ಲಿ ಮರು ನಿರ್ಮಾಣ ಮಾಡಲಾಗಿದೆ. ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದಿಂದ 15 ಲಕ್ಷ ರೂ., ಅತಿವೃಷ್ಟಿ ಪರಿಹಾರ ಯೋಜನೆಯಡಿ 100 ಲಕ್ಷ ರೂ. ಅನುದಾನ, ಎಚ್‌.ಡಿ.ರೇವಣ್ಣ ಅವರು ಲೋಕೋಪಯೋಗಿ ಇಲಾಖೆ ಸಚಿವರಾಗಿದ್ದ ಸಂದರ್ಭದಲ್ಲಿ 150 ಲಕ್ಷ, ಕಾಗೋಡು ತಿಮ್ಮಪ್ಪ ಅವರು ಸಚಿವರಾಗಿದ್ದಾಗ 400 ಲಕ್ಷ ರೂ.ಗಳ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ, ಹಸೂಡಿ ಶೆಟ್ಟಿಹಳ್ಳಿ ರಸ್ತೆಯಲ್ಲಿ 200 ಲಕ್ಷ ರೂ. ವೆಚ್ಚದಲ್ಲಿ ಕೆರೆ ಏರಿ ಅಗಲೀಕರಣ ಮತ್ತು ಅಭಿವೃದ್ಧಿ ಮಾಡಲಾಗಿದೆ. ವಿವಿಧ ಗ್ರಾಮಗಳಲ್ಲಿ ಸರ್ಕಾರಿ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳ ಕಟ್ಟಡಗಳನ್ನು 60 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿಪಡಿಸಲಾಗಿದೆ ಎಂದು ವಿವರಿಸಿದರು.

ಕೆರೆ ಸಂಜೀವಿನಿ ಯೋಜನೆಯಡಿ ಸಣ್ಣ ನೀರಾವರಿ ಇಲಾಖೆಗೆ ಸೇರಿದ 12 ಕೆರೆಗಳನ್ನು 60 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಸಂತೆಕಡೂರು ಮತ್ತು ಇತರೆ 16 ಗ್ರಾಮಗಳಿಗೆ 1465 ಲಕ್ಷ ರೂ.ಗಳ ವೆಚ್ಚದಲ್ಲಿ ಕುಡಿಯುವ ನೀರು ಸರಬರಾಜು ಮಾಡಲಾಗಿದೆ. ಮಲೆನಾಡು ಅಭಿವೃದ್ಧಿ ಮಂಡಳಿಯಿಂದ ಸಂತೆಕಡೂರು ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಮಾಡಲಾಗಿದ್ದು, 94 ಸಿಸಿ ಯೋಜನೆ ಯಡಿ 650 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿದ್ದು, ಜಿ.ಪಂ. ಉಪಾಧ್ಯಕ್ಷರಾಗಿ 5 ವರ್ಷಗಳ ಕಾಲ ಸಲ್ಲಿಸಿದ ಸೇವೆ ತಮಗೆ ಸಂತೋಷ ಉಂಟು ಮಾಡಿದೆ ಎಂದು ತಿಳಿಸಿದರು.

ಕಾಂಗ್ರೆಸ್‌ ಮುಖಂಡ ವಿಜಯಕುಮಾರ್‌ ಮಾತನಾಡಿ, ಎಪಿಎಂಸಿ ಅಧ್ಯಕ್ಷ ದುಗ್ಗಪ್ಪಗೌಡರು ಇತ್ತೀಚೆಗೆ ಬಿಜೆಪಿ ಸರ್ಕಾರ ಒಕ್ಕಲಿಗರನ್ನು ತುಳಿಯುತ್ತಿದೆ ಎಂದು ಹೇಳಿ¨ªಾರೆ. ಆದರೆ ಈಗೇಕೆ ಅವರು ಈ ವಿಚಾರ ಎತ್ತಿದರು ಎಂಬುದು ತಿಳಿಯುತ್ತಿಲ್ಲ. ಎಂದರು. ಗೋಷ್ಠಿಯಲ್ಲಿ ಪ್ರಮುಖರಾದ ಶ್ರೀನಿವಾಸ…, ವಾಣಿ ಗಿರೀಶ…, ಅನಿಲ…, ದೇವಿ ಕುಮಾರ್‌, ಪ್ರಭಾಕರ ಗೌಡ, ಗಿರೀಶ…, ಕೃಷ್ಣಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next