ಭದ್ರಾವತಿ: ಉಕ್ಕಿನ ನಗರಿ ಭದ್ರಾವತಿಯಲ್ಲಿ ಈ ಬಾರಿ ಬದಲಾವಣೆಯ ಗಾಳಿ ಬೀಸುತ್ತಿದ್ದು, ನಗರಸಭೆಯಲ್ಲಿ ಬಿಜೆಪಿ ಅಧಿ ಕಾರ ಹಿಡಿಯುವುದು ನಿಶ್ಚಿತ ಎಂದು ಪಕÒದ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಹೇಳಿದರು.
ಬಸವೇಶ್ವರ ವೃತ್ತದ ಬಳಿ ಇರುವ ಬಿಜೆಪಿ ಚುನಾವಣಾ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ಅವರು, ನಗರದಲ್ಲಿ ಒಂದು ರೀತಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.ಬೇರೆ ಪಕÒದ ಮುಖಂಡರು ಬಿಜೆಪಿಯ ತತ್ವ- ಸಿದ್ಧಾಂತ ಹಾಗೂ ಅಭಿವೃದ್ಧಿ ಕಾರ್ಯವನ್ನು ಮೆಚ್ಚಿ ನಮ್ಮ ಪಕÒಕ್ಕೆ ಸೇರಿ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನದಿಂದ ನಗರದಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಇದನ್ನು ಗುರುತಿಸಿರುವ ಮತದಾರರು ಈ ಬಾರಿ ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಒಂದನೆಯ ವಾರ್ಡ್ ಅಭ್ಯರ್ಥಿ ಹೆಸರು ಘೋಷಣೆ ಬಾಕಿ: ಭದ್ರಾವತಿ ನಗರಸಭೆ ಚುನಾವಣೆಗೆ ಕಳೆದ ವಾರ 21 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿ ಇಂದು ಒಂದನೆಯ ವಾರ್ಡ್ ಅಭ್ಯರ್ಥಿ ಹೊರತಾಗಿ ಇನ್ನೊಂದು ವಾರ್ಡ್‌ಗಳಿಗೆ ಹೆಸರುಗಳನ್ನು ಘೋಷಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮೇಘರಾಜ…, ಒಂದನೆಯ ವಾರ್ಡ್‌ಗೆ ಅಚ್ಚರಿಯ ಅಭ್ಯರ್ಥಿಯೊಬ್ಬರನ್ನು 15ನೆಯ ತಾರೀಖು ಘೋಷಣೆ ಮಾಡುತ್ತೇವೆ. ಈ ಅಭ್ಯರ್ಥಿ ಯಾರು ಎಂಬುದನ್ನು ಕಾದು ನೋಡಿ ಎಂದರು.
ಬಿಜೆಪಿ ಹಿರಿಯ ಮುಖಂಡ ಆರ್. ಕೆ. ಸಿದ್ರಾಮಣ್ಣ ಮಾತನಾಡಿ, ಭದ್ರಾವತಿಗೆ ಹಿಡಿದಿದ್ದ ಅಮಾವಾಸ್ಯೆ ಮುಗಿದಿದೆ. ಹೊಸ ವರ್ಷ ಆರಂಭದ ಯುಗಾದಿ ಹೊಸ್ತಿಲಲ್ಲಿ ಹೊಸ ಶಾಖೆ ಆರಂಭವಾಗುತ್ತಿದ್ದು, ಭದ್ರಾವತಿಯಲ್ಲಿ ಬಿಜೆಪಿ ಅ ಧಿಕಾರ ಹಿಡಿಯುತ್ತದೆ ಎಂದರು. ಇದೇ ಸಂದರ್ಭದಲ್ಲಿ ಜೆಡಿಎಸ್ ಸ್ಥಳೀಯ ಮುಖಂಡ ಶ್ರೀಧರಗೌಡ ಅವರು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡರು.
ಪಕÒದ ಬಾವುಟ ನೀಡುವ ಮೂಲಕ ಅವರನ್ನು ಸ್ವಾಗತಿಸಲಾಯಿತು. ಹಾಗೂ ಬಿಜೆಪಿ ಚುನಾವಣಾ ಉಸ್ತುವಾರಿಗಳ ಪಟ್ಟಿ ಮತ್ತು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು.
ರಾಜ್ಯ ಆರ್ಯವೈಶ್ಯ ಮಂಡಳಿ ಅಧ್ಯಕÒ ಡಿ.ಎಸ್. ಅರುಣ್, ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಪ್ರಮುಖರಾದ ಎಸ್. ದತ್ತಾತ್ರಿ, ರಾಮಲಿಂಗಯ್ಯ, ಗಿರೀಶ್ ಪಟೇಲ…, ಸಿ. ಮಂಜುಳಾ, ಮಂಗೋಟೆ ರುದ್ರೇಶ್, ಶ್ರೀನಾಥ್, ಶಿವರಾಜ…, ಅರಳೀಹಳ್ಳಿ ಪ್ರಕಾಶ್, ಪ್ರವೀಣ…, ದತ್ತಾತ್ರಿ, ರಾಮಪ್ಪ, ಮರಿಸ್ವಾಮಿ, ವಿಶ್ವನಾಥ್, ಋಷಿಕೇಶ್ ಪೈ ಮತ್ತಿತರರು ಇದ್ದರು.