ಸಾಗರ: ತಾಲೂಕಿನ ಜಗತøಸಿದ್ಧ ಜೋಗ ಜಲಪಾತದ ವೀಕ್ಷಣೆಗೆ ಬರುವ ಪ್ರವಾಸಿಗರಿಂದ ವಾರ್ಷಿಕ ಜೋಗ ನಿರ್ವಹಣಾ ಪ್ರಾ ಧಿಕಾರ ಹತ್ತಿರ ಹತ್ತಿರ ಕೋಟಿ ರೂ.ಗಳ ಆದಾಯವನ್ನು ಪ್ರವೇಶ ಶುಲ್ಕದ ಹೆಸರಿನಲ್ಲಿ ಪಡೆಯುತ್ತಿದೆ. ಸ್ವತ್ಛ ಪರಿಸರ, ಜಲಪಾತದ ಜಲಧಾರೆಗಳ ಸುಂದರ ನೋಟಗಳನ್ನು ನೋಡಬಯಸುವ ಪ್ರವಾಸಿಗರಿಗೆ ಈ ದಿನಗಳಲ್ಲಿ ಎಲ್ಲೆಲ್ಲೂ ಕಸದ ರಾಶಿ, ಕುಡಿದು ಬಿಸಾಕಿದ ಬಾಟಲಿ, ಪ್ಲಾಸ್ಟಿಕ್ ಕೊಟ್ಟೆಗಳು ಕಾಣಿಸುತ್ತಿದ್ದು ಜೋಗ ಅಕ್ಷರಶಃ ಕಸದ ಗುಂಡಿ ಎನ್ನಿಸುವಂತಾಗಿದೆ.
ಇಲ್ಲಿ ಸ್ವತ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಕಾರ್ಮಿಕರನ್ನು ತಿಂಗಳ ಹಿಂದೆಯೇ ತೆಗೆದು ಹಾಕಲಾಗಿದ್ದರೂ ಈವರೆಗೆ ಬದಲಿ ವ್ಯವಸ್ಥೆ ಮಾಡದಿರುವುದರಿಂದ ವಾಹನ ಪಾರ್ಕಿಂಗ್ ಪ್ರದೇಶ ಹಾಗೂ ಜೋಗ ಜಲಪಾತದ ವೀಕ್ಷಣಾ ಡೆಕ್ ದುರ್ವಾಸನೆ ಬೀರುವ ಸ್ಥಿತಿ ನಿರ್ಮಾಣವಾಗಿದೆ. ಒಂದೆಡೆ ಜೋಗ ನಿರ್ವಹಣಾ ಪ್ರಾಧಿ ಕಾರ ಪ್ರವಾಸೋದ್ಯಮ ಚಟುವಟಿಕೆಯಿಂದ ಆಕರ್ಷಕ ಆದಾಯವನ್ನೇ ಪಡೆಯುತ್ತಿದ್ದರೂ, ಅದರ ಭ್ರಷ್ಟಾಚಾರ ಹಣದ ಲೂಟಿ ನಡೆಸಿದೆ ಎಂದು ಜೋಗದ ಪಪಂ ಮಾಜಿ ಅಧ್ಯಕ್ಷ ರಾಜಕುಮಾರ ದೂರುತ್ತಾರೆ.
ಪ್ರವಾಸಿಗರ ವಾಹನ ನಿಲುಗಡೆ, ಪೊಲೀಸರ ಊಟದ ವ್ಯವಸ್ಥೆ ಖರ್ಚು, ವಾಹನದ ಡೀಸೆಲ್ ಖರ್ಚು ಎಂದು ಲಕ್ಷಾಂತರ ರೂ.ಗಳ ಲೆಕ್ಕ ತೋರಿಸಿ ಭ್ರಷ್ಟಾಚಾರ ನಡೆಸಲಾಗುತ್ತಿದೆ. ಕೂಲಿ ಕಾರ್ಮಿಕರನ್ನು ನೇಮಿಸಿಕೊಳ್ಳದೆ ನಿರ್ವಹಣಾ ಪ್ರಾ ಧಿಕಾರ ಹಣ ಉಳಿಸಿಕೊಡುವ ಕೆಲಸ ಮಾಡುತ್ತಿದೆಯೇ ಎಂದು ಅವರು ವ್ಯಂಗ್ಯವಾಡುತ್ತಾರೆ.
ಈ ಕುರಿತು ಪ್ರತಿಕ್ರಿಯಿಸುವ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ರಾಮಕೃಷ್ಣ, ಜೋಗ ನಿರ್ವಹಣಾ ಪ್ರಾಧಿ ಕಾರದ ಅಡಿ ಕಸ ವಿಲೇವಾರಿ, ಸ್ವತ್ಛತೆಗೆ ಸಂಬಂ ಧಿಸಿದ ಟೆಂಡರ್ ಪಡೆದಿದ್ದ ಗುತ್ತಿಗೆದಾರರ ಅವಧಿ ಮುಕ್ತಾಯವಾಗಿದೆ. ಆದರೆ ಅಗತ್ಯ ಸ್ವತ್ಛತಾ ಕಾರ್ಯಕ್ಕೆ ಆದ್ಯತೆ ನೀಡಲು ಸೂಚಿಸಲಾಗಿದೆ. ಟೆಂಡರ್ ಮುಂದುವರಿಕೆ ಸಂಬಂಧ ಜಿಲ್ಲಾಧಿಕಾರಿಗಳಿಗೆ ಪತ್ರ ವ್ಯವಹಾರ ನಡೆದಿದೆ. ಜಿಲ್ಲಾ ಧಿಕಾರಿಗಳಿಂದ ಸೂಚನೆ ದೊರಕಿದ ತಕ್ಷಣ ಗುತ್ತಿಗೆದಾರರು ಸ್ವತ್ಛತೆ ಕಾರ್ಯ ಮುಂದುವರಿಸಲಿದ್ದಾರೆ ಎನ್ನುತ್ತಾರೆ.
ಜೋಗದ ಅಭಿವೃದ್ಧಿಗೆ ಸರ್ಕಾರ ವಿಶೇಷ ಗಮನ ಕೊಟ್ಟಿದೆ. ಹೊಸ ಹೊಸ ಯೋಜನೆಗಳ ಜಾರಿಗೆ ಈಗಾಗಲೇ 62 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗಿದೆ. ಪ್ರವಾಸೋದ್ಯಮ ಇಲಾಖೆ ಕೋವಿಡ್ ಕಾಲದಲ್ಲಿಯೂ ಜೋಗ ಪ್ರವಾಸಿಗರಿಂದ ಒಳ್ಳೆಯ ಆದಾಯ ಪಡೆದಿದೆ. ಆದರೆ ಜೋಗದಲ್ಲಿ ಬೇರೆ ಬೇರೆ ಸೌಲಭ್ಯ, ಪ್ರವಾಸಿಗೃಹ, ಹೊಟೇಲ್, ಪಾರ್ಕ್, ರೋಪ್‌ವೇ ಕನಸು ನನಸಾಗುವುದಕ್ಕಿಂತ ಮೊದಲು ಕಸದ ಗುಂಡಿಯಾಗುವ ಸಾಧ್ಯತೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನಿರ್ವಹಣಾ ಪ್ರಾಧಿಕಾರ ಪ್ರಯತ್ನಿಸಬೇಕು. ಗುತ್ತಿಗೆ ಅವ ಧಿ ಮುಕ್ತಾಯ, ನವೀಕರಣ, ಡಿಸಿ ಒಪ್ಪಿಗೆ ಮೊದಲಾದ ತಾಂತ್ರಿಕ ಕಾರಣಗಳು ಪ್ರವಾಸಿಗರಿಗೆ ಸಹ್ಯ ಆಗುವುದಿಲ್ಲ ಎಂದು ಸ್ಥಳೀಯರು ಪ್ರತಿಪಾದಿಸುತ್ತಿದ್ದಾರೆ.