ಶಿವಮೊಗ್ಗ: ರಾಜ್ಯದಲ್ಲಿ ಡ್ರಗ್ಸ್ ದಂಧೆ ನಡೆಸುತ್ತಿರುವ ದಂಧೆಕೋರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಬುಧವಾರ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸಲ್ಲಿಸಿದ ಮನವಿಯಲ್ಲಿ ಶಿವಮೊಗ್ಗ ನಗರ ಬಿಜೆಪಿ ಯುವ ಮೋರ್ಚಾ ಒತ್ತಾಯಿಸಿದೆ.
ಕಳೆದ ಹಲವಾರು ದಿನಗಳಿಂದ ರಾಜ್ಯದ ನೆಮ್ಮದಿ ಮತ್ತು ಹೆಸರನ್ನು ಕೆಡಿಸುತ್ತಿರುವ ಮಾದಕ ವಸ್ತು (ಡ್ರಗ್ಸ್) ಮಾರಾಟ ಜಾಲದ ವಿರುದ್ಧ ಮತ್ತು ಸೇವನೆ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.
ಯಾವುದೇ ಪ್ರಭಾವಿಗಳ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಈ ಮಾμಯದಲ್ಲಿ ಭಾಗಿಯಾಗಿರುವ ಯಾರೇ ಆಗಿದ್ದರೂ ಅವರನ್ನು ಬಂಧಿಸಿ ಕ್ರಮಗಳನ್ನು ಕೈಗೊಂಡು ಶಾಂತಿ ಮತ್ತು ನೆಮ್ಮದಿಗೆ ಹೆಸರಾದ ಕರ್ನಾಟಕದಿಂದ ಡ್ರಗ್ಸ್ ಎಂಬ ವಿಷಜಾಲದಿಂದ ಮುಕ್ತಗೊಳಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.
ಶಿವಮೊಗ್ಗ ನಗರ ವ್ಯಾಪ್ತಿಯ ಎಲ್ಲಾ ಪೊಲೀಸ್ ವಿಭಾಗಕ್ಕೆ ದೂರು ಕೊಡಲಾಗಿತ್ತು. ಇದರ ಬಗ್ಗೆ ಗಮನಿಸಬೇಕಾಗಿ ಹಾಗೂ ತಮ್ಮ ವ್ಯಾಪ್ತಿಗೆ ಒಳಪಟ್ಟ ಪ್ರದೇಶಗಳಲ್ಲಿಯೂ ಕೂಡ ದಂಧೆ ಮಟ್ಟಹಾಕಿ ಡ್ರಗ್ಸ್ ಮುಕ್ತ ಕರ್ನಾಟಕವನ್ನಾಗಿ ಮಾಡಬೇಕೆಂದು ಮನವಿಯಲ್ಲಿ ಕೋರಲಾಗಿದೆ.
ಶಿವಮೊಗ್ಗ ನಗರ ಯುವ ಮೋರ್ಚಾ ಅಧ್ಯಕ್ಷ ಆರ್.ವಿ.ದರ್ಶನ್, ಪ್ರಧಾನ ಕಾರ್ಯದರ್ಶಿ ಟಿ.ಆರ್.ಜಗನ್ನಾಥ್, ಸಂತೋಷ್ ಬಳ್ಳಕೆರೆ, ಬಿ.ಎನ್. ಅಭಿಷೇಕ್, ಎಸ್.ನಿತಿನ್, ಸುಹಾಸ್ ಶಾಸ್ತ್ರಿ ಮತ್ತಿತರರಿದ್ದರು.