Advertisement

ಇಪ್ಪತ್ತು ತಿಂಗಳ ಸೇವಾವಧಿ ತೃಪ್ತಿ ತಂದಿದೆ

05:59 PM Apr 03, 2021 | Shreeraj Acharya |

ಶಿವಮೊಗ್ಗ: ಶಿವಮೊಗ್ಗದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಾನು ಕೈಗೊಂಡ ಕೆಲಸಗಳು ತೃಪ್ತಿತಂದಿವೆ ಹಾಗೂ ಇದಕ್ಕೆ ಇಲಾಖೆಯ ಎಲ್ಲಾ ಅಧಿ ಕಾರಿಗಳು ಸಂಪೂರ್ಣ ಸಹಕಾರ ನೀಡಿದ್ದು, ಒಂದು ಟೀಮ್‌ ವರ್ಕ್‌ ಮಾಡಿ ಅನೇಕ ಕಗ್ಗಂಟ್ಟಾಗಿರುವ ಪ್ರಕರಣಗಳನ್ನು ಭೇದಿಸಿದ್ದೇವೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ. ಶಾಂತರಾಜ್‌ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆ ಸವಾಲಿನ ಜಿಲ್ಲೆಯಾಗಿದೆ. ಶಿವಮೊಗ್ಗದ ಪ್ರತಿ ತಾಲೂಕು ಸಹ ವಿಭಿನ್ನವಾದ ಊರುಗಳನ್ನು ಹೊಂದಿವೆ ಇಂತಹ ಪರಿಸ್ಥಿತಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಸವಾಲಿನ ರೀತಿಯಲ್ಲಿಯೇ ಕಾಪಾಡಿಕೊಂಡು ಬಂದಿದ್ದೇವೆ ಎಂದು ತಿಳಿಸಿದರು.

ಮಾಧ್ಯಮಗಳ ಸಹಕಾರಕ್ಕೆ ಅಭಿನಂದನೆ ಸಲ್ಲಿಸಿದರು. ನಾನು ವರ್ಗಾವಣೆ ಕೋರಿಕೊಂಡ ಹಿನ್ನೆಲೆಯಲ್ಲಿಯೇ ಸರ್ಕಾರ ವರ್ಗಾವಣೆ ಮಾಡಿದೆ. ಯಾವುದೇ ಒತ್ತಡದ ಹಿನ್ನಲೆಯಲ್ಲಿ ವರ್ಗಾವಣೆಯಾಗಿಲ್ಲ. ನಾನು ಶಿವಮೊಗ್ಗ ಜಿಲ್ಲಾ ಎಸ್ಪಿಯಾಗಿ 20 ತಿಂಗಳು ಸೇವೆ ಸಲ್ಲಿಸಿದ್ದೇನೆ ಎಂದು ವಿವರಿಸಿದರು.

ಜನಪ್ರತಿನಿ ಧಿಗಳ ಸಲಹೆ- ಸೂಚನೆಗಳನ್ನು ನಾವು ಪಾಲಿಸುವುದು ಪ್ರಜಾಪ್ರಭುತ್ವದಲ್ಲಿ ನಮ್ಮ ಕರ್ತವ್ಯ. ಟೀಕೆ- ಟಿಪ್ಪಣಿಗಳು ಸಹ ಸ್ವಾಭಾವಿಕ, ನಮ್ಮ ಕರ್ತವ್ಯವನ್ನು ನಾವು ಕಾನೂನಿನ ಚೌಕಟ್ಟಿನಲ್ಲಿ ನಿರ್ವಹಿಸಿದ್ದೇವೆ ಎಂದರು. ಎನ್‌ಡಿಪಿಎಸ್‌ ಕಾಯ್ದೆಯಡಿ 3.8. 2019ರಿಂದ 31.12.2019ರವರೆಗೆ 28 ಪ್ರಕರಣಗಳನ್ನು ದಾಖಲಿಸಿ 56 ಆರೋಪಿಗಳನ್ನು ಬಂಧಿಸಿ , 14 ಕೆ.ಜಿ. ಒಣಗಾಂಜಾ ಹಾಗೂ 138 ಕೆ.ಜಿ. ಹಸಿ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದೇವೆ. 2020ರಲ್ಲಿ 89 ಪ್ರಕರಣ ದಾಖಲಿಸಿ 203 ಆರೋಪಿಗಳನ್ನು ಬಂಧಿಸಿ 41 ಕೆ.ಜಿ. ಮಾದಕವಸ್ತು ಒಣಗಾಂಜಾ, 186ಕೆಜಿ ಹಸಿ ಗಾಂಜಾಗಿಡವನ್ನು ವಶಪಡಿಸಿಕೊಂಡಿರುತ್ತೇವೆ. 2021ನೇ ಸಾಲಿನಲ್ಲಿ ಮಾರ್ಚ್‌ 31ರವರೆಗೆ ಒಟ್ಟು 11 ಪ್ರಕರಣಗಳನ್ನು ದಾಖಲಿಸಿ 25 ಆರೋಪಿಗಳನ್ನು ಬಂಧಿಸಿ 7 ಕೆ.ಜಿ. ಮಾದಕ ವಸ್ತು ಒಣಗಾಂಜಾವನ್ನು ವಶಪಡಿಸಿಕೊಂಡಿದ್ದೇವೆ ಎಂದರು.

3.08.2019ರಿಂದ 31.03. 2021 ರವರೆಗೆ ಒಟ್ಟು 477 ಪ್ರಕರಣಗಳನ್ನು ದಾಖಲಿಸಿ, 585 ಆರೋಪಿಗಳನ್ನು ಬಂಧಿಸಿ ಒಟ್ಟು 21 ಲಕ್ಷ 50 ಸಾವಿರಕ್ಕೂ ಹೆಚ್ಚು ಹಣವನ್ನು ವಶಪಡಿಸಿಕೊಂಡು ಕ್ರಮ ಕೈಗೊಳ್ಳಲಾಗಿದೆ. ಇಸ್ಪೀಟ್‌ ಜೂಜಾಟ ಪ್ರಕರಣದಲ್ಲಿ 3.8.2019ರಿಂದ 31.3.2021ರವರೆಗೆ 321 ಪ್ರಕರಣ ದಾಖಲಿಸಿ 1936 ಆರೋಪಿಗಳನ್ನು ಬಂಧಿಸಿ ಅವರಿಂದ 55 ಲಕ್ಷ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ 2019,20,21ನೇ ಸಾಲಿನಲ್ಲಿ ವಿವಿಧ ಪ್ರಕರಣಗಳಲ್ಲಿ 34 ವರ್ಷಗಳ ಹಳೆಯ ಪ್ರಕರಣಗಳು ಸೇರಿದಂತೆ ಈ ನ್ಯಾಯಾಲಯದ ವಿಚಾರಣೆಗೆ ಗೈರು ಹಾಜರಾಗಿ ತಲೆಮರೆಸಿಕೊಂಡಿದ್ದ 76 ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ದೊಡ್ಡ ಸಾಧನೆಯಾಗಿದೆ. ಕೋಟಾ³ ಕಾಯ್ದೆಯಡಿ ಒಟ್ಟು 20 ತಿಂಗಳಲ್ಲಿ ಒಟ್ಟು 16 ಸಾವಿರದ 99 ಪ್ರಕರಣಗಳನ್ನು ದಾಖಲಿಸಿ 14 ಲಕ್ಷದ 50 ಸಾವಿರಕ್ಕೂ ಹೆಚ್ಚು ದಂಡ ವಿಧಿಸಲಾಗಿದೆ ಎಂದರು.

Advertisement

ಅಬಕಾರಿ ಕಾಯ್ದೆ ಉಲ್ಲಂಘಿಸಿದ 326 ಪ್ರಕರಣಗಳನ್ನು ದಾಖಲಿಸಿ 388 ಆರೋಪಿಗಳನ್ನು ಬಂಧಿ ಸಿ ಅವರಿಂದ 1572 ಲೀಟರ್‌ ಮಧ್ಯ ವಶಪಡಿಸಿಕೊಳ್ಳಲಾಗಿದೆ. ಸ್ವತ್ತು ಕಳವು ಪ್ರಕರಣಗಳಲ್ಲಿ ಒಟ್ಟು ಸ್ವತ್ತು ಕಳವು ಪ್ರಕರಣಗಳಲ್ಲಿ 554 ಪ್ರಕರಣಗಳನ್ನು ಪತ್ತೆ ಹಚ್ಚಿ 2 ಕೋಟಿಗೂ ಅಧಿ ಕ ಮೌಲ್ಯದ ಸ್ವತ್ತನ್ನು ವಶಪಡಿಸಕೊಳ್ಳಲಾಗಿದೆ ಎಂದರು.

ಕ್ರಿಕೆಟ್‌ ಬೆಟ್ಟಿಂಗ್‌ ಜೂಜಾಟ ಪ್ರಕರಣಗಳಲ್ಲಿ ಕೂಡ 19 ಜನರನ್ನು ಬಂಧಿ ಸಿ 3,58,200 ರೂ.ಗಳನ್ನು ವಶಪಡಿಸಿಕೊಂಡಿದ್ದೇವೆ. ಫೇಸ್‌ ಮಾಸ್ಕ್ ಧರಿಸದವರ ವಿರುದ್ಧ ಕೂಡಪೊಲೀಸ್‌ ಇಲಾಖೆಯಿಂದ ಕಾರ್ಯಾಚರಣೆ ನಡೆಸಿ, ಒಟ್ಟು 14,900 ಪ್ರಕರಣ ದಾಖಲಿಸಲಾಗಿದೆ ಎಂದರು. ಹೆಚ್ಚುವರಿ ಜಿಲ್ಲಾ ರಕ್ಷಣಾಧಿ ಕಾರಿ ಡಾ| ಶೇಖರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next