Advertisement

ಸ್ಮಾರ್ಟ್ ಸಿಟಿ ಕಾಮಗಾರಿ ಅವಾಂತರ

07:11 PM Apr 01, 2021 | Shreeraj Acharya |

ಶಿವಮೊಗ್ಗ: ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತಿ ಸಿಇಒ ಸೇರಿ ಹಿರಿಯ ಅ ಧಿಕಾರಿಗಳ ಬಂಗಲೆಗಳಿರುವ ರಸ್ತೆಯಲ್ಲಿ ಸ್ಮಾರ್ಟ್‌ ಸಿಟಿ ಕಾಮಗಾರಿಯಲ್ಲೇ ಎಂಜಿನಿಯರ್‌ಗಳು ಅವಾಂತರ ಮಾಡಿದ್ದಾರೆ.

Advertisement

ಜಿಲ್ಲಾಧಿಕಾರಿ ಕಚೇರಿಯ ಮನೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ, ಚರಂಡಿ ಕಾಮಗಾರಿ ನಡೆಯುತ್ತಿದೆ. ಅಧಿಕಾರಿಗಳು ಈ ಕಾಮಗಾರಿ ನಡೆಸಿದ ಪರಿ, ಅದರ ಗುಣಮಟ್ಟಕ್ಕೆ ಕೈಗನ್ನಡಿಯಾಗಿದೆ.

ಜಿಲ್ಲಾಧಿಕಾರಿ ಅವರ ಮನೆಗೆ ಹೋಗುವ ರಸ್ತೆಯಲ್ಲೆ ಸೈನಿಕ ಪಾರ್ಕ್‌ ಇದೆ. ಅದರ ಪಕ್ಕದಲ್ಲೇ ನಾಲ್ಕು ವಿದ್ಯುತ್‌ ಕಂಬಗಳಿವೆ. ಇದೆ ಕಂಬಗಳ ಮೂಲಕ ಜಿಲ್ಲಾಧಿಕಾರಿ, ಸಿಇಒ, PWD ಎಂಜಿನಿಯರ್‌, ಕಮಿನಷರ್‌ ಅವರ ಬಂಗಲೆಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. ಈ ಕಂಬಗಳು ಈಗ ಚರಂಡಿ ನಡುವೆ ಬಂದಿವೆ.

ಈ ಮೊದಲು ಈ ರಸ್ತೆಯಲ್ಲಿ ಚರಂಡಿಯೇ ಇರಲಿಲ್ಲ. ಸ್ಮಾರ್ಟ್‌ ಸಿಟಿ ಯೋಜನೆಯಡಿ ಜಯನಗರ ಬ್ಲಾಕ್‌ನ ಚರಂಡಿ ಕಾಮಗಾರಿ ನಡೆಸಲಾಗುತ್ತಿದೆ. ಜಿಲ್ಲಾಧಿಕಾರಿ, ಸಿಇಒ ಅವರ ಬಂಗಲೆಗಳು ಇರುವ ಕಾರಣದಿಂದಲೋ ಏನೋ ಒಂದೇ ತಿಂಗಳಲ್ಲಿ ಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸಿ, ಅದರ ಮೇಲೆ ಸ್ಲಾಬ್‌ ಅಳವಡಿಸಲಾಗುತ್ತಿದೆ. ವಿಪರ್ಯಾಸ ಅಂದರೆ ಇಲ್ಲಿರುವ ನಾಲ್ಕು ವಿದ್ಯುತ್‌ ಕಂಬಗಳ ಪೈಕಿ ಮೂರು ಕಂಬಗಳು ಚರಂಡಿಯ ಮಧ್ಯದಲ್ಲಿವೆ. ಒಂದು ಕಂಬ ಚರಂಡಿಯಿಂದ ಹೊರಗಿದ್ದರು. ಅದಕ್ಕೆ ತಾಗಿಕೊಂಡೇ ಇದೆ. ವಿದ್ಯುತ್‌ ಕಂಬಗಳನ್ನು ಸ್ಥಳಾಂತರಿಸಿ ಚರಂಡಿ ನಿರ್ಮಿಸಬಹುದಿತ್ತು. ಆದರೆ ಅ ಧಿಕಾರಿಗಳು ಹಾಗೆ ಮಾಡದೆ, ಕಂಬ ಸೇರಿಸಿಕೊಂಡು ಚರಂಡಿ ನಿರ್ಮಿಸಿದ್ದಾರೆ.

ಜೋರು ಮಳೆಯಾದರೆ ನೀರು ಸರಾಗವಾಗಿ ಹರಿದು ಹೋಗಲು ಈ ಕಂಬಗಳೇ ಅಡ್ಡಿಯಾಗಲಿವೆ. ಒಂದು ವೇಳೆ ವಿದ್ಯುತ್‌ ಕಂಬಗಳ ಸ್ಥಳಾಂತರ ಅಥವಾ ತೆರವು ಮಾಡಬೇಕಿದ್ದರೆ ಈ ಚರಂಡಿ ಒಡೆಯಬೇಕಾಗುತ್ತದೆ. ಜನರ ಸಹಭಾಗಿತ್ವದಲ್ಲಿ ಸ್ಮಾಟ್‌ ಸಿಟಿ ಯೋಜನೆ ಕಾಮಗಾರಿ ನಡೆಯಬೇಕು ಎಂಬ ನಿಯಮವಿದೆ. ಆದರೆ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಾಮಗಾರಿ ನಡೆಸುತ್ತಿರುವುದರಿಂದ ಜನರು ಪ್ರತಿದಿನ ಹಲವು ಆರೋಪ ಮಾಡುತ್ತಿದ್ದಾರೆ. ಈಗ ಜಿಲ್ಲಾ ಧಿಕಾರಿ ಅವರ ಮನೆ ಮುಂದೆಯೇ ಸ್ಮಾರ್ಟ್‌ ಸಿಟಿ ಕಾಮಗಾರಿಯಲ್ಲಿ ಇಂತಹ ಯಡವಟ್ಟಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next