ಭದ್ರಾವತಿ: ಕನ್ನಡ ಸಾಹಿತ್ಯಕ್ಕೆ ತನ್ನದೇ ಆದ ಗಟ್ಟಿತನವಿದೆ. ಹಣದ ವ್ಯಾಮೋಹ ಬಿಟ್ಟು ಸಮಾಜದ ಕಲ್ಯಾಣ ಮುಖ್ಯ. ಕಲ್ಲು ದೇವರ ಹುಡುಕಿ ಹೋಗುವ ನಾವು ನಮ್ಮೊಳಗಿನ ದೇವರನ್ನು ಕಂಡಾಗ ಅಭಿವೃದ್ಧಿಯಾಗುತ್ತೇವೆ ಎಂದು ಕುವೆಂಪು ವಿವಿ ಕುಲಪತಿ ಡಾ| ಬಿ.ಪಿ.
ವೀರಭದ್ರಪ್ಪ ಹೇಳಿದರು.
ಸಿದ್ದಾರೂಢ ನಗರದ ಬಸವೇಶ್ವರ ಸಭಾಭವನದಲ್ಲಿ ಕಸಾಪ ಹಮ್ಮಿಕೊಂಡಿದ್ದ 9 ನೇ ತಾಲೂಕು ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
12 ನೇ ಶತಮಾನದ ವಚನಕಾರರ ಸಾಹಿತ್ಯಗಳು ಜೀವಂತವಾಗಿವೆ. ಕನಕದಾಸ, ಪುರಂದರ ದಾಸರು ಚೈತನ್ಯವಾಗಿದ್ದಾರೆ. ಕನ್ನಡಿಗರು ಸಹೃದಯಿಗಳು ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಬೆಂಗಳೂರು ಎನ್ನಡವಾಗಿದೆ. ಸಾಹಿತಿ ಬೇಂದ್ರೆಯವರ ಚಿಂತನೆಯಂತೆ ಮಂಗಳೂರು, ಬೆಳಗಾವಿ, ಹೈದರಾಬಾದ್ ಸೇರಿದಂತೆ 13 ಪ್ರಾಂತ್ಯಗಳಲ್ಲಿನ ಕನ್ನಡಿಗರು ಒಂದಾಗಬೇಕೆಂದು ಮಾಡಿದ ಪ್ರಯತ್ನಗಳು ಶ್ಲಾಘನೀಯ ಎಂದರು. ಬೆಂಗಳೂರಿನ ಜನಪದ ಪರಿಷತ್ತು ಅಧ್ಯಕ್ಷ ಡಾ| ಬಾಲಾಜಿ, ಸರ್ವಾಧ್ಯಕ್ಷ ಎ.ಪಿ.ಕುಮಾರ್ ಮಾತನಾಡಿದರು. ಕಸಾಪ ಅಧ್ಯಕ್ಷ ಅಪೇಕ್ಷ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಮೇಘರಾಜ್, ಸಿದ್ದಲಿಂಗಯ್ಯ, ಬೇಲಿಮಲ್ಲೂರ್ ನಾಗಪ್ಪ, ಡಾ| ನಾಸಿರ್ ಖಾನ್ ಮುಂತಾದವರಿದ್ದರು.
ಪ್ರಭಾಕರ ಬೀರಯ್ಯ, ಶಾಂತಿ ಸಾಮಿಲ್ ಮಾಲೀಕ ಜಿ. ಸುರೇಶ್, ಕಬಡ್ಡಿ ಕೃಷ್ಣೇಗೌಡ, ಕೆ.ಮಂಧರಕುಮಾರ್ ಹಿರಿಯೂರು ಕುಮಾರ್ ಮುಂತಾದವರನ್ನು ಸನ್ಮಾನಿಸಲಾಯಿತು. ಕತ್ತಲಗೆರೆ ತಿಮ್ಮಯ್ಯ ನಿರೂಪಿಸಿದರು. ಎಚ್.ತಿಮ್ಮಪ್ಪ ಸ್ವಾಗತಿಸಿದರು. ಕೆ. ಬಸವರಾಜಪ್ಪ ವಂದಿಸಿದರು.
ಓದಿ: ಯಾದಗಿರಿ: ಹಕ್ಕಿ ಜ್ವರ- ಮುಂಜಾಗ್ರತೆ ವಹಿಸಿ