Advertisement

ಭದ್ರಾವತಿಯಲ್ಲಿ ಸಿಪಿಎಂ ಪ್ರತಿಭಟನೆ

06:53 PM Feb 25, 2021 | Shreeraj Acharya |

ಭದ್ರಾವತಿ: ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ಬೆಲೆ ಏರಿಕೆಯ ಖಂಡಿಸಿ ಸಿಪಿಐ(ಎಂ)ಕಾರ್ಯಕರ್ತರು ಬುಧವಾರ ಮಿನಿ ವಿಧಾನಸೌಧದ
ಮುಂದೆ ಕೆಲಕಾಲ ಪ್ರತಿಭಟನೆ ನಡೆಸಿದರು.

Advertisement

ಈ ವೇಳೆ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಎಂ.ನಾರಾಯಣ, ಕೇಂದ್ರ ಸರ್ಕಾರ ಪೆಟ್ರೋಲ್‌, ಡೀಸೆಲ್‌, ಅಡುಗೆ
ಅನಿಲದ ಬೆಲೆ ಸೇರಿದಂತೆ ಆಹಾರ ಧಾನ್ಯ, ಹಣ್ಣು, ತರಕಾರಿ ಎಲ್ಲದರ ಬೆಲೆ ಏರಿಕೆ ಮಾಡಿರುವುದರಿಂದ ಬಡ ಮತ್ತು ಮಧ್ಯಮ ವರ್ಗದ ಜನರ
ಬದುಕು ದುಸ್ತರವಾಗಿದೆ. ಮೋದಿ ಸರ್ಕಾರ ಬೆಲೆ ಏರಿಕೆ ಮಾಡುವ ಮೂಲಕ ಜನರ ಜೀವನದೊಂದಿಗೆ ಚಲ್ಲಾಟವಾಡುತ್ತಿದೆ ಎಂದು
ದೂರಿದರು.

ಬಿಸಿಯೂಟ ತಯಾರಕರ ಸಂಘದ ಮುಖಂಡರಾದ ಹನುಮಮ್ಮ ಮಾತನಾಡಿ, ಮೋದಿ ಸರ್ಕಾರ ಪುನಃ ಅಧಿಕಾರಕ್ಕೆ ಬಂದರೆ ಅಡುಗೆ ಅನಿಲದ
ಬೆಲೆ 2ಸಾವಿರವಾದರೂ ಆಗಬಹುದು ಎಂದರು.

ಕೇಂದ್ರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಉಪ ತಹಶೀಲ್ದಾರ್‌ ಮಲ್ಲಿಕಾರ್ಜುನ ಅವರ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಕೆ.ಮಂಜಣ್ಣ, ಸೊಮಣ್ಣ, ಕೃಷ್ಣೋಜಿರಾವ್‌, ಲಕ್ಷ್ಮಮ್ಮ, ಶಮೀಬಾನು, ರತ್ನಮ್ಮ ಇತರರು ಭಾಗವಹಿಸಿದ್ದರು.

ಓದಿ : ವಿಜಯಪುರ : ವಿಧವಾ ವೇತನ ನೀಡಲು ಲಂಚ ಪಡೆಯುತ್ತಿದ್ದ ಗ್ರಾಮಲೆಕ್ಕಿಗ ಎಸಿಬಿ ಬಲೆಗೆ

Advertisement
Advertisement

Udayavani is now on Telegram. Click here to join our channel and stay updated with the latest news.

Next