Advertisement

ಶ್ರೀ ಸಿದ್ಧ ವೃಷಭೇಂದ್ರ ಶಿವಯೋಗಿಗಳ ಜಾತ್ರಾ ಮಹೋತ್ಸವ ನಾಳೆ

06:18 PM Feb 25, 2021 | Shreeraj Acharya |

ಸೊರಬ: ತಾಲೂಕಿನ ಜಡೆ ಸಂಸ್ಥಾನ ಮಠದ ಆವರಣದಲ್ಲಿ ಶ್ರೀ ಸಿದ್ಧ ವೃಷಬೇಂದ್ರ ಶಿವಯೋಗಿಗಳ ಜಾತ್ರಾಮಹೋತ್ಸವ ಫೆ.26 ಮತ್ತು 27ರಂದು ನಡೆಯಲಿದೆ ಎಂದು ಜಡೆ ಸಂಸ್ಥಾನ ಮಠದ ಡಾ|ಮಹಾಂತ ಸ್ವಾಮೀಜಿ ಹೇಳಿದರು.

Advertisement

ಪಟ್ಟಣದ ಮುರುಘಾಮಠದ ಆವರಣದಲ್ಲಿ ಜಾತ್ರಾ ಮಹೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಫೆ. 26ರಂದು ಶ್ರೀಗಳ ಕತೃì ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಲಿದ್ದು, ಬೆಳಗ್ಗೆ 8.30ಕ್ಕೆ ದುಂಡಸಿ ವಿರಕ್ತಮಠದ ಶ್ರೀ ಕುಮಾರ ಸ್ವಾಮೀಜಿ ಷಟ್‌ ಸ್ಥಲಧ್ವಜಾರೋಹಣ ನೆರವೇರಿಸುವರು ಎಂದರು.

ಸಂಜೆ. 6.30ಕ್ಕೆ ಶ್ರೀ ಚೌಡೇಶ್ವರಿ ದೇವಿಗೆ ಉಂಡಿ ತುಂಬುವುದು ಹಾಗೂ ರಥದ ಪೂಜೆ, ರಾತ್ರಿ 9.30ಕ್ಕೆಶಿವಾನುಭ ಗೋಷ್ಠಿ ಮತ್ತು ಶ್ರೀ ಸಿದ್ಧವೃಷಭೇಂದ್ರ ಕಲಾ ಬಳಗದಿಂದ ನ್ಯಾಯ ಎಲ್ಲಿದೆ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ. ಹಿರೇಮಾಗಡಿ ವಿರಕ್ತಮಠದ ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮುಖ್ಯಥಿತಿಗಳಾಗಿ ಮಾಜಿ ಶಾಸಕ ಮಧು ಬಂಗಾರಪ್ಪ, ಉದ್ಯಮಿ ರಾಜು ಎಂ. ತಲ್ಲೂರು, ತಾಪಂ ಸದಸ್ಯರಾದ ವಿಜಯಕುಮಾರ, ಅಂಜಲಿ, ಕಮಲಮ್ಮ ಸೇರಿದಂತೆ ಸ್ಥಳೀಯ ಜನಪ್ರತಿನಿಗಳು ಪಾಲ್ಗೊಳ್ಳುವರು ಎಂದರು.

ಮಹಾರಥೋತ್ಸವ: ಫೆ. 27ರಂದು ಬೆಳಗ್ಗೆ ತೋಗರ್ಸಿ ಮಳೇಹಿರೇಮಠದ ಶ್ರೀ ಮಹಾಂತ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅವರಿಂದ ಶಿವದೀಕ್ಷೆ ಮತ್ತು ಅಯ್ನಾಚಾರ ನಡೆಯಲಿದ್ದು, ಬೆಳಗ್ಗೆ 9ಕ್ಕೆ ಶ್ರೀ ಸಿದ್ಧವೃಷಭೇಂದ್ರ ಶಿವಯೋಗಿಗಳ ಮಹಾರಥೋತ್ಸವ ನಡೆಯಲಿದೆ. 11.30ಕ್ಕೆ ಶ್ರೀ ಸ್ವಾಮಿಗೆ ತುಲಾಭಾರ ಕಾಣಿಕೆ ಮತ್ತು ಹರಕೆ ಸಮರ್ಪಣೆ ನಡೆಯಲಿದೆ ಎಂದರು.

ಕೃಷಿಗೋಷ್ಠಿ: ಮಧ್ಯಾಹ್ನ 3ಕ್ಕೆ ಕೃಷಿಗೋಷ್ಠಿಯನ್ನು ಸಂಸದ ಬಿ.ವೈ. ರಾಘವೇಂದ್ರ ಉದ್ಘಾಟಿಸುವರು. ರಾಯಚೂರಿನ ಕವಿತಾ ಮಿಶ್ರಾ ಅವರು ಸಮಗ್ರ ಕೃಷಿ ಕುರಿತು ಉಪನ್ಯಾಸ ನೀಡುವರು. ಆನಂದಪುರ ಮುರುಘಾಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಘೋಡಗೆರೆಯ ಶ್ರೀ ಕಾಶಿನಾಥ ಸ್ವಾಮೀಜಿ, ಅಕ್ಕಿಆಲೂರಿನ ಶ್ರೀ ಶಿವಬಸವ ಸ್ವಾಮೀಜಿ, ಮೂಲೆಗದ್ದೆಯ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಕವಲೇದುರ್ಗದ ಡಾ. ಸಿದ್ಧಲಿಂಗ ಸ್ವಾಮೀಜಿ ಸಮ್ಮುಖ ವಹಿಸುವರು. ಜಡೆ ಗ್ರಾಪಂ ಅಧ್ಯಕ್ಷ ಕೇಶವ ರಾಯ್ಕರ್‌
ಉಪಸ್ಥಿತರಿರುವರು. ಮುಖ್ಯಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ, ಕೃಷಿ ಸಚಿವ ಬಿ.ಸಿ. ಪಾಟೀಲ್‌, ಕಾರ್ಮಿಕ ಸಚಿವ ಶಿವರಾಮ ಹೆಬ್ಟಾರ್‌ ಶಾಸಕರಾದ ಎಸ್‌. ಕುಮಾರ್‌ ಬಂಗಾರಪ್ಪ, ರುದ್ರೇಗೌಡ, ಭಾರತೀಶೆಟ್ಟಿ, ತಾಪಂ ಅಧ್ಯಕ್ಷೆ ನಯನಾ
ಶ್ರೀಪಾದ ಹೆಗಡೆ, ಜಿಪಂ ಸದಸ್ಯ ಶಿವಲಿಂಗೇಗೌಡ, ಕೃಷಿಕ ಸಮಾಜದ ಅಧ್ಯಕ್ಷ ಮಂಜುನಾಥರಾವ್‌ ಪಾಟೀಲ್‌ ಸೇರಿದಂತೆ ಸ್ಥಳೀಯ ವಿವಿಧ
ಸಂಘ-ಸಂಸ್ಥೆಗಳ ಪದಾ ಧಿಕಾರಿಗಳು, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕ ಎಚ್‌. ಉಮೇಶ್‌ ಪಾಲ್ಗೊಳ್ಳುವರು ಎಂದರು.

Advertisement

ಈ ಸಂದರ್ಭದಲ್ಲಿ ಕಸಾಪ ನಿಕಟಪೂರ್ವ ಅಧ್ಯಕ್ಷ ಹಾಲೇಶ್‌ ನವುಲೆ, ಅಭಾಶಸಾಪ ತಾಲೂಕು ಅಧ್ಯಕ್ಷ ಎಸ್‌.ಕೃಷ್ಣಾನಂದ, ಅಕ್ಕನ ಬಳಗದ ರೇಣುಕಮ್ಮ ಗೌಳಿ, ರೋಟರಿ ಕ್ಲಬ್‌ ಸಂಸ್ಥಾಪಕ ಅಧ್ಯಕ್ಷ ಡಾ|ಎಚ್‌.ಇ. ಜ್ಞಾನೇಶ್‌, ಅಧ್ಯಕ್ಷ ಟಿ.ಆರ್‌.ಸಂತೋಷ್‌, ಸೊರಬ ಮುರುಘಾಮಠದ ಕಾರ್ಯದರ್ಶಿ ಡಿ. ಶಿವಯೋಗಿ ಇತರರಿದ್ದರು.

ಬೃಹತ್‌ ಆರೋಗ್ಯ ಶಿಬಿರ: ಶ್ರೀ ಕುಮಾರ ಪ್ರಭು ಸ್ವಾಮಿಗಳ ಸ್ಮಾರಕ ಸೇವಾ ಟ್ರಸ್ಟ್‌, ರೋಟರಿ ಕ್ಲಬ್‌ ಮತ್ತು ಶಿವಮೊಗ್ಗ ಸಹ್ಯಾದ್ರಿ ನಾರಾಯಣ ಸ್ಪೆಷಾಲಿಟಿ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಫೆ.26ರಂದು ಬೆಳಗ್ಗೆ 10.30ಕ್ಕೆ ಜಡೆ ಸಂಸ್ಥಾನ ಮಠದ ಶ್ರೀ ಕುಮಾರ ಪ್ರಭು ವೇದಿಕೆಯಲ್ಲಿ ಉಚಿತ ಬೃಹತ್‌ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಮೊ: 74111 97436, 95351 09610 ಅನ್ನು ಸಂಪರ್ಕಿಸಬಹುದೆಂದು ರೋಟರಿ ಕ್ಲಬ್‌ ಸಂಸ್ಥಾಪಕ ಅಧ್ಯಕ್ಷ ಡಾ|ಎಚ್‌.ಇ. ಜ್ಞಾನೇಶ್‌ ಹೇಳಿದರು.

ಓದಿ : ಫೆ.26ರಂದು ಕುಂದಾಪ್ರ ಭಾಷೆಯ “ಕುಂದಾಪುರ” ಸಿನಿಮಾ ಬಿಡುಗಡೆ

Advertisement

Udayavani is now on Telegram. Click here to join our channel and stay updated with the latest news.

Next