ಕಾರ್ಯಕ್ರಮ ಫೆ.28 ರಂದು ಸಂಜೆ 6 ಗಂಟೆಗೆ ಹಳೇ ಜೈಲು ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಅಭಿನಂದನಾ ಸಮಿತಿ ಅಧ್ಯಕ್ಷ ಎಸ್.ರುದ್ರೇಗೌಡ ಹೇಳಿದರು.
Advertisement
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಸಮಸ್ತ ನಾಗರಿಕರ ಪರವಾಗಿ ನಾಡಿನ ಮತ್ತು ಜಿಲ್ಲೆಯ ಹೆಮ್ಮೆಯ ಅಭಿವೃದ್ಧಿಯ ಹರಿಕಾರ, ಸರ್ವಜನ ಹಿತಚಿಂತಕ, ಸಾರ್ಥಕ ಸಾಧನೆಗಳ ಸಮಷ್ಠಿ ಪ್ರಜ್ಞೆಯ ಜನನಾಯಕ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪನವರಿಗೆ ಅಭಿನಂದನೆ ಸಮಾರಂಭ ಆಯೋಜಿಸಲಾಗಿದೆ. ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಸ್.ಶಂಕರಮೂರ್ತಿ ಅಭಿನಂದನಾನುಡಿಗಳನ್ನಾಡುವರು ಎಂದು ತಿಳಿಸಿದರು.
Related Articles
ಪವಿತ್ರರಾಮಯ್ಯ, ದತ್ತಾತ್ರಿ, ಕೆ.ಪಿ.ಪುರುಷೋತ್ತಮ್ ಮತ್ತು ಜಿಲ್ಲಾಧಿ ಕಾರಿ, ಜಿಲ್ಲಾ ರಕ್ಷಣಾಧಿ ಕಾರಿ, ಜಿಪಂ ಸಿಇಒ, ಪಾಲಿಕೆ ಆಯುಕ್ತರು ಉಪಸ್ಥಿತರಿರುವರು ಎಂದರು.
Advertisement
ಕಾರ್ಯಕ್ರಮದಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆಯಿದ್ದು, ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲಾಗುವುದು ಎಂದರು.
ಜ್ಞಾನೇಶ್ವರ್, ಎಸ್.ಎಸ್.ಜ್ಯೋತಿಪ್ರಕಾಶ್, ವಕೀಲ ಬಸಪ್ಪಗೌಡರು, ಟಿ.ಆರ್.ಅಶ್ವಥ್‌ನಾರಾಯಣ ಶೆಟ್ಟಿ, ಬಳ್ಳೆಕೆರೆ ಸಂತೋಷ್, ಲಕ್ಷ್ಮೀನಾರಾಯಣ ಕಾಶಿ, ರಮೇಶ್ ಹೆಗ್ಡೆ, ಮಾಲತೇಶ್, ಹಿರಣ್ಣಯ್ಯ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಲಾಡು-ಮಾಸ್ಕ್ ವಿತರಣೆ: ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಸಮಿತಿ ವತಿಯಿಂದ ಲಾಡು ಮತ್ತು ಮಾಸ್ಕ್ ವಿತರಿಸಲಾಗುವುದು. ಸದ್ಯಕ್ಕೆ ಸುಮಾರು 40 ಸಾವಿರ ಲಾಡು ತಯಾರಿಸಲಾಗಿದೆ ಮತ್ತು ಅಷ್ಟೇ ಪ್ರಮಾಣದಲ್ಲಿ ಮಾಸ್ಕ್ ಕೂಡ ವಿತರಿಸಲಾಗುತ್ತದೆ. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ರುದ್ರೇಗೌಡರು ತಿಳಿಸಿದರು.
ಈಗಾಗಲೇ ವೇದಿಕೆ ಸಿದ್ಧವಾಗುತ್ತಿದೆ. ಸುಮಾರು 40 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ. ಸುಮಾರು 6 ಸಾವಿರಕ್ಕೂ ಹೆಚ್ಚು ಆಸನಗಳನ್ನು ಗಣ್ಯರಿಗೆ ಮೀಸಲಿರಿಸಲಾಗಿದೆ. ಕಾರ್ಯಕ್ರಮದಲ್ಲಿ ಯಾವುದೇ ಕಾರಣಕ್ಕೂ ಪ್ರತ್ಯೇಕವಾಗಿ ಮುಖ್ಯಮಂತ್ರಿಗಳನ್ನು ಸನ್ಮಾನಿಸುವಂತಿಲ್ಲ ಎಂದರು.
ಯಡಿಯೂರಪ್ಪನವರ 78ನೇ ವರ್ಷದ ಜನ್ಮದಿನ ಇದು. ಫೆ.27ರಂದೇ ಜನ್ಮದಿನ ಇದೆ. ಆದರೆ, ಅಂದು ಬೆಂಗಳೂರಿನಲ್ಲಿ ಅವರ ಕಾರ್ಯಕ್ರಮನಿಗದಿ ಯಾಗಿರುವುದರಿಂದ ಫೆ.28ಕ್ಕೆ ಶಿವಮೊಗ್ಗದಲ್ಲಿ ಆಯೋಜಿಸಲಾಗಿದೆ. ಮುಖ್ಯಮಂತ್ರಿಗಳ ಜನ್ಮದಿನ ಅಂಗವಾಗಿ 27ರಂದು ಬೆಳಿಗ್ಗೆ ರವೀಂದ್ರ ನಗರದ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ ಎಂದರು. ಓದಿ : ಬಹಿರಂಗ ಟೀಕೆ ಸಲ್ಲದು, ಪಕ್ಷದ ವೇದಿಕೆಯಲ್ಲಿ ಚರ್ಚಿಸಲಿ : ಯತ್ನಾಳಗೆ ಈಶ್ವರಪ್ಪ ಕಿವಿಮಾತು