Advertisement

ಅಧಿಕಾರಿಗಳ ಎದುರು ಸಮಸ್ಯೆ ಬಿಚ್ಚಿಟ್ಟ ಜನ

05:28 PM Feb 21, 2021 | Team Udayavani |

ಸೊರಬ: ತಾಲೂಕಿನ ಚಂದ್ರಗುತ್ತಿ ಗ್ರಾಮ ಶ್ರೀ ರೇಣುಕಾಂಬಾ ದೇವಾಲಯದ ಸಭಾಭವನದಲ್ಲಿ ತಹಶೀಲ್ದಾರ್‌ ಪಿ. ಶಿವಾನಂದ ರಾಣೆ ಅವರ ಅಧ್ಯಕ್ಷತೆಯಲ್ಲಿ “ತಹಶೀಲ್ದಾರ್‌ ನಡೆ ಹಳ್ಳಿ ಕಡೆ’ ಎಂಬ ಜನ ಸಂಪರ್ಕ ಸಭೆ ಶನಿವಾರ ನಡೆಯಿತು.

Advertisement

ಚಂದ್ರಗುತ್ತಿ ಗ್ರಾಮಕ್ಕೆ ಸಮರ್ಪಕ ಕುಡಿಯುವ ನೀರು, ರಸ್ತೆ, ಗ್ರಾಮದ ಕೆರೆಗಳ ಜಲ ಸಂರಕ್ಷಣೆ ಮಾಡುವುದಲ್ಲದೆ ಗ್ರಾಮಕ್ಕೆ ಜಾಕ್‌ವೆಲ್‌ ಮೂಲಕ ನೀರನ್ನು ಒದಗಿಸುವ ಯೋಜನೆ ಮಾಡಬೇಕು. ಸಂಧ್ಯಾ ಸುರಕ್ಷಾ ಯೋಜನೆಯಡಿ ಮಂಜೂರಾದ ಫಲಾನುಭವಿಗಳಿಗೆ ಹಣ ದೊರೆಯುತ್ತಿಲ್ಲ. ಚಂದ್ರಗುತ್ತಿ ಗ್ರಾಮದಲ್ಲಿಯೇ ವಿದ್ಯುತ್‌ ಗ್ರಿಡ್‌ ಇದ್ದರೂ, ಸಮರ್ಪಕ ವಿದ್ಯುತ್‌ ಪೂರೈಕೆಯಾಗುತ್ತಿಲ್ಲ. ಪೌತಿ ಖಾತೆಗಳಲ್ಲಿ ಹಾಗೂ ಪಹಣಿಗಳಲ್ಲಿ ಲೋಪಗಳು ಸೇರಿದಂತೆ ಹಲವು ಸಮಸ್ಯೆಗಳನ್ನು ಜನತೆ ತಹಶೀಲ್ದಾರ್‌ರ ಗಮನಕ್ಕೆ ತರಲಾಯಿತು. ಸಂಧ್ಯಾ ಸುರಕ್ಷತೆಗಾಗಿ ಅರ್ಜಿ ಹಾಕಿ
ಯೋಜನೆಯಡಿ ಮಂಜೂರಾದರೂ ಹಣ ಬರುತ್ತಿಲ್ಲ ಎಂದು ವೃದ್ಧೆಯೊಬ್ಬರು ತಮ್ಮ ಅಳಲನ್ನು ತೋಡಿಕೊಂಡರು.

ಇದಕ್ಕೆ ತಕ್ಷಣವೇ ಸ್ಪಂದಿಸಿದ ತಹಶೀಲ್ದಾರ್‌, ಸ್ಥಳದಲ್ಲೇ ಇದ್ದ ಬ್ಯಾಂಕ್‌ ವ್ಯವಸ್ಥಾಪಕರಿಗೆ ಖಾತೆಯನ್ನು ಸರಿಪಡಿಸಿಕೊಡುವಂತೆ ಸೂಚನೆ
ನೀಡಿದರು. ನಂತರ ಇದೇ ವೇಳೆ 12 ಜನ ಅರ್ಹ ಫಲಾನುಭವಿಗಳಿಗೆ ಸಂಧ್ಯಾ ಸುರಕ್ಷಾ ಯೋಜನೆಯಡಿ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು. ಚಂದ್ರಗುತ್ತಿಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಸಾರಿಗೆ ಬಸ್‌ ವ್ಯವಸ್ಥೆ ಮತ್ತು ಖಾಸಗಿ ವಾಹನಗಳಲ್ಲಿ ಬರುವ ಭಕ್ತರಿಗೆ ಪಾರ್ಕಿಂಗ್‌ ವ್ಯವಸ್ಥೆ ಮಾಡಬೇಕು ಎಂದು ಗ್ರಾಮಸ್ಥರು ತಹಶೀಲ್ದಾರ್‌ರ ಗಮನಕ್ಕೆ ತಂದರು. ಭೂ ದಾಖಲೆಗಳ ಅಧಿಧೀಕ್ಷಕ ಎಂ.ಡಿ. ತಿಮ್ಮಪ್ಪ, ಅಜಿತ್‌, ಯು. ವೆಂಕಟೇಶ್‌, ಶಿವಪ್ರಸಾದ್‌, ಎಂ.ಪಿ. ರತ್ನಾಕರ, ಸದಸ್ಯ ರೇಣುಕಾಪ್ರಸಾದ, ರಾಜಪ್ಪ, ಸತೀಶ್‌, ಈಶ್ವರ, ಸರ್ವಜ್ಞ ಮೂರ್ತಿ ಮತ್ತಿತರರಿದ್ದರು.

ಓದಿ : ಕೃಷಿ ಪದವಿ ಕೋರ್ಸುಗಳ ಪ್ರವೇಶಾತಿಯಲ್ಲಿ ರೈತರ ಮಕ್ಕಳ ಮೀಸಲಾತಿ ಹೆಚ್ಚಳ: ಸಚಿವ ಬಿ.ಸಿ.ಪಾಟೀಲ್

Advertisement

Udayavani is now on Telegram. Click here to join our channel and stay updated with the latest news.

Next