Advertisement

ಗ್ರಾಮಭೇಟಿಯಲ್ಲಿ ಅಹವಾಲುಗಳ ಮಹಾಪೂರ

05:22 PM Feb 21, 2021 | Team Udayavani |

ಹೊಸನಗರ: ತಾಲೂಕಿನ ನಕ್ಸಲ್‌ ಪೀಡಿತ ಪ್ರದೇಶ ಕೊರನಕೋಟೆ ಗ್ರಾಮದಲ್ಲಿ ತಹಶೀಲ್ದಾರ್‌ ವಿ.ಎಸ್‌. ರಾಜೀವ್‌ ನೇತೃತ್ವದಲ್ಲಿ ಗ್ರಾಮ ವಾಸ್ತವ್ಯ ನಡೆಸಿದ್ದು, ಸಮಸ್ಯೆಗಳ ಮಹಾಪೂರವೇ ಹರಿದು ಬಂದಿದೆ.

Advertisement

ನಗರ ಹೋಬಳಿಯಲ್ಲಿ ಅತೀ ಹಿಂದುಳಿದ ಪ್ರದೇಶ ಎಂಬಂತಾಗಿರುವ ಕೊರನಕೋಟೆ ಗ್ರಾಮದಲ್ಲಿ ಶನಿವಾರ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ತಹಶೀಲ್ದಾರ್‌ ವಿ.ಎಸ್‌. ರಾಜೀವ್‌ ಉದ್ಘಾಟಿಸಿದರು.

ಸಮಸ್ಯೆಗಳ ಅಹವಾಲು: ಕೊರನಕೋಟೆಯಿಂದ ವಿವಿಧ ಗ್ರಾಮಗಳಿಗೆ ಸಂಪರ್ಕಿಸುವ ಮೂರು ಕಚ್ಚಾ ರಸ್ತೆಯನ್ನು ಡಾಂಬರೀಕರಣ ಮಾಡಬೇಕು. ಬೆಳಿಗ್ಗೆ 7.45ಕ್ಕೆ ಹೊರಡುವ ಕೆಎಸ್‌ಆರ್‌ಟಸ ಬಸ್ಸನ್ನು ವಿದ್ಯಾರ್ಥಿಗಳಿಗೆ ಅನುಗುಣವಾಗಿ ಬೆಳಿಗ್ಗೆ 8.30ಕ್ಕೆ ಹೊರಡುವ ವ್ಯವಸ್ಥೆ
ಮಾಡಬೇಕು. ಮಜರೆ ಹಳ್ಳಿ ಸುಳ್ಳಕ್ಕಿಯಲ್ಲಿ ಒಂದು ಹೆಚ್ಚುವರಿ ಟಿಸಿ ಅಳವಡಿಸಬೇಕು. ಅಲ್ಲದೆ ಶಿಥಿಲಾವಸ್ಥೆಯಲ್ಲಿರುವ ವಿದ್ಯುತ್‌ ಕಂಬವನ್ನು ಬದಲಿಸಬೇಕು. ರೈತರ ಜಮೀನಿನ ಮೇಲೆ ಹಾದುಹೋಗುವ ವಿದ್ಯುತ್‌ ತಂತಿಯನ್ನು ಸ್ಥಳಾಂತರಿಸಬೇಕು.

ಕೊರನಕೋಟೆ ಗ್ರಾಮದಲ್ಲಿ ಕಳೆದ ಮೂರು ವರ್ಷದಿಂದ ನೀರಿನ ಸಮರ್ಪಕ ಸರಬರಾಜು ಇಲ್ಲದ ಕಾರಣ ನೀರುಗಂಟಿಯನ್ನು ಬದಲಿಸಬೇಕು. ಸಾಕಷ್ಟು ಕಡೆ ಬೋರ್‌ವೆಲ್‌ ಇದ್ದು ನೀರಿನ ಪಂಪ್‌ಸೆಟ್‌ ಅಳವಡಿಸಿದ್ದರೂ ಕೂಡ ಸಂಪರ್ಕ ನೀಡಿಲ್ಲ. ಕೊರನಕೋಟೆ ಗ್ರಾಮಕ್ಕೆ ಪ್ರತಿತಿಂಗಳು ಪಿಡಿಒ, ವಿಎ, ಆರ್‌ಐ ಜನಪ್ರತಿನಿ ಗಳು ಭೇಟಿ ನೀಡಿ ಜನರ ಅಹವಾಲನ್ನು ಕೇಳಬೇಕು. ಹೀಗೆ ನೂರಾರು ಅಹವಾಲುಗಳು ಗ್ರಾಮ ವಾಸ್ತವ್ಯದಲ್ಲಿ ಹರಿದು ಬಂದಿತು.

ಈ ಬಗ್ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್‌ ವಿ.ಎಸ್‌. ರಾಜೀವ್‌, ನಮ್ಮ ವ್ಯಾಪ್ತಿಯಲ್ಲಿ ಬರುವ ಸಮಸ್ಯೆಗಳಿಗೆ ತ್ವರಿತ ಕ್ರಮ ಕೈಗೊಳ್ಳಲಾಗುವುದು. ಉಳಿದ ಅರ್ಜಿಗಳನ್ನು ಜಿಲ್ಲಾ ಧಿಕಾರಿಗಳಿಗೆ ಕಳುಹಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

Advertisement

ಓದಿ : ಗ್ರಾಮ ವಾಸ್ತವ್ಯದಿಂದ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ

Advertisement

Udayavani is now on Telegram. Click here to join our channel and stay updated with the latest news.

Next