Advertisement

ಚರಕದಿಂದ ಗ್ರಾಮೀಣ ಭಾಗದಲ್ಲಿ ವಿಶೇಷ ಕೆಲಸ: ರಾವ್‌

06:19 PM Feb 07, 2021 | Shreeraj Acharya |

ಸಾಗರ: ರಂಗಕರ್ಮಿ ಪ್ರಸನ್ನ ಅವರ ಮಾರ್ಗದರ್ಶನದಲ್ಲಿ ಚರಕ ಸಂಸ್ಥೆ ಗ್ರಾಮೀಣ ಪರಿಸರದಲ್ಲಿ ವಿಶೇಷ ಕೆಲಸ ಮಾಡಿದೆ
ಎಂದು ಹಿರಿಯ ಸಹಕಾರಿ ಧುರೀಣ ಎಂ. ಹರನಾಥ ರಾವ್‌ ಮತ್ತಿಕೊಪ್ಪ ಹೇಳಿದರು.

Advertisement

ತಾಲೂಕಿನ ಹೊನ್ನೇಸರದ ಶ್ರಮಜೀವಿ ಆಶ್ರಮದಲ್ಲಿ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರಿ ಸಂಘ, ಭೀಮನಕೋಣೆಯ
ಕವಿಕಾವ್ಯ ಟ್ರಸ್ಟ್‌ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಚರಕ ಉತ್ಸವ
2021ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗ್ರಾಮಾಂತರದ ಯುವಕ- ಯುವತಿಯರಿಗೆ ಉದ್ಯೋಗ ಕಲ್ಪಿಸಿ, ನಿರುದ್ಯೋಗ ಸಮಸ್ಯೆ ಪರಿಹಾರಕ್ಕೆ ಚರಕ ಸಂಸ್ಥೆ ಕಾರಣವಾಗಿದೆ. ಲಾಕ್‌
ಡೌನ್‌ ಸಂದರ್ಭದಲ್ಲಿ ಎಲ್ಲ ಉದ್ಯೋಗ ಎದುರಿಸಿದ ಸಮಸ್ಯೆಗಳನ್ನು ಚರಕ ಸಂಸ್ಥೆ ಸಹ ಎದುರಿಸಿದೆ ಎಂದರು.

ತೆಲಂಗಾಣದ ನಾರಾಯಣ ಪೇಟೆಯ ನೇಕಾರರ ಸಹಕಾರಿ ಸಂಘಗಳ ಜತೆ ಕೆಲಸ ಮಾಡುವ ಸಾಮಾಜಿಕ ಕಾರ್ಯಕರ್ತೆ ನಿರ್ಮಲ
ಮಾತನಾಡಿದರು. ಶ್ರಮಜೀವಿ ಆಶ್ರಮದ ಗೋಡೆಗಳಲ್ಲಿ ಹಸೆ ಚಿತ್ರ ರಚಿಸಿದ ಕಲಾವಿದ ಮಧು ಅವರನ್ನು ಸನ್ಮಾನಿಸಲಾಯಿತು. ಮಣ್ಣಿನ ಚಿತ್ತಾರ
ಮತ್ತು ಚರಕ ಕುರಿತು ಕಿರುಚಿತ್ರ ನಿರ್ಮಿಸಿದ ಕಲಾವಿದ ಗಣೇಶ ಕೆಳಮನೆ ಅವರನ್ನು ಸನ್ಮಾನಿಸಲಾಯಿತು.

ಮೈಸೂರಿನ ಕೆ.ಸಚ್ಚಿದಾನಂದ ಅವರ ಡೌನ್‌ ಟು ಅರ್ಥ್ (ಮಣ್ಣಿನ ಬಣ್ಣದ ಚಿತ್ತಾರ) ಪ್ರದರ್ಶನದ ಉದ್ಘಾಟನೆ ನಡೆಯಿತು. ದೇಸಿ ಚಿಂತಕ ಪ್ರಸನ್ನ, ಸಂಘದ ಅಧ್ಯಕ್ಷೆ ಗೌರಮ್ಮ ಮುಂತಾದವರಿದ್ದರು. ಎಂ.ವಿ. ಪ್ರತಿಭಾ ರಾಘವೇಂದ್ರ ಸ್ವಾಗತಿಸಿದರು. ಪವಿತ್ರ ವಂದಿಸಿದರು. ಪದ್ಮಶ್ರೀ ನಿರೂಪಿಸಿದರು. ಸಂಜೆ ನಾಟ್ಯತರಂಗ ಸಂಸ್ಥೆಯಿಂದ ಭರತನಾಟ್ಯ, ಭೀಮನಕೋಣೆ ಚರಕ ಕಲಾವಿದರ ಬಳಗದಿಂದ ಪ್ರಸನ್ನ
ರಚಿಸಿ, ಎಂ.ವಿ.ಪ್ರತಿಭಾ ರಾಘವೇಂದ್ರ ನಿರ್ದೇಶನದಲ್ಲಿ “ಕೊಂದವರಾರು’ ನಾಟಕ ಪ್ರದರ್ಶನ ನಡೆಯಿತು.

Advertisement

ಓದಿ : ಕಾಯ್ದಿಟ್ಟ ಅರಣ್ಯದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ

Advertisement

Udayavani is now on Telegram. Click here to join our channel and stay updated with the latest news.

Next