ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌ಪಿ ಕೆ.ಎಂ.ಶಾಂತರಾಜು ಅವರು, ಜಮೀನಿನ ಮಾಲೀಕರಾದ ಶಂಕರಗೌಡ ಟಿ. ಕುಲಕರ್ಣಿ, ಅವಿನಾಶ್ ಕುಲಕರ್ಣಿ ಹಾಗೂ ಆಂಧ್ರ ಪ್ರದೇಶದ ಅನಂತಪುರಂ ನಿವಾಸಿಗಳಾದ ಪಿ. ಶ್ರೀರಾಮುಲು ಮತ್ತು ಪಿ.ಮಂಜುನಾಥ್ ಸಾಯಿ ಎಂಬುವವರನ್ನು ಬಂ ಧಿಸಲಾಗಿದೆ ಎಂದರು.
Advertisement
ಈ ಪ್ರಕರಣ ಸಂಬಂಧ ಆರು ತನಿಖಾ ತಂಡಗಳನ್ನು ರಚಿಸಿದ್ದು, ತುಂಗಾನಗರ ಠಾಣೆ ಪಿಐ ದೀಪಕ್ ಮತ್ತು ಸೊರಬ ವೃತ್ತ ಸಿಪಿಐ ಮರುಳಸಿದ್ದಪ್ಪ ಅವರು ಆಂಧ್ರಪ್ರದೇಶದ ಅನಂತಪುರಂಗೆ ತೆರಳಿ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ತಿಳಿಸಿದರು.
ವಿಶಾಖಪಟ್ಟಣದ ಡೆಪ್ಯೂಟಿ ಕಂಟ್ರೋಲರ್ ಆಫ್ ಎಕ್ಸ್‌ಪ್ಲೋಸಿವ್ ಅವರಿಗೆ ಶ್ರೀರಾಮುಲು ಲೈಸೆನ್ಸ್ ನಿಯಮವನ್ನು ಉಲ್ಲಂಘಿಸಿರುವ ಬಗ್ಗೆ ಮಾಹಿತಿ ನೀಡಿದ್ದು, ಅವರ ಪರವಾನಗಿಯನ್ನು ರದ್ದುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
Related Articles
ಮಹಿಳಾ ಪೊಲೀಸ್ ಠಾಣೆ ಪಿಐ ಅಭಯ್ ಪ್ರಕಾಶ್, ಗ್ರಾಮಾಂತರ ಸಿಪಿಐ ಸಂಜೀವ್ ಕುಮಾರ್, ಎಎಸ್‌ಐ ವಿಜಯ್, ಸಿಬ್ಬಂದಿ
ಕಿರಣ್ ಮೋರೆ ಅವರನ್ನೊಳಗೊಂಡ ತಂಡವು ಅನಂತಪುರಂ, ರಾಯದುರ್ಗ ಮುಂತಾದ ಕಡೆಗಳಿಗೆ ಭೇಟಿ ನೀಡಿ ನಂತರ ಹೈದರಾಬಾದ್‌ಗೆ
ತೆರಳಿದ್ದಾರೆ. ಖಚಿತ ಮಾಹಿತಿ ಮೇರೆಗೆ ಮುಂಬೈಗೆ ತೆರಳಿ ಅಲ್ಲಿ ಶ್ರೀರಾಮುಲು ಮತ್ತು ಮಂಜುನಾಥ್ ಎಂಬುವವರನ್ನು ಬಂಧಿ ಸಿದ್ದಾರೆ ಎಂದು ತಿಳಿಸಿದರು.
Advertisement
ಹುಣಸೋಡಿನಲ್ಲಿ ಸಂಭವಿಸಿದ ಸ್ಫೋಟಕ್ಕೆ ಸಂಬಂಧಿಸಿದಂತೆ ಸ್ಫೋಟಕಗಳು ಪಿ. ಶ್ರೀರಾಮುಲು ಅವರ ಮಾಲೀಕತ್ವದಲ್ಲಿರುವ ಆಂಧ್ರಪ್ರದೇಶದಅನಂತಪುರಂನ ಗಣೇಶ್ ಟ್ರೇಡರ್‌ನಿಂದ ಪೂರೈಕೆಯಾಗಿರುವುದು ತನಿಖೆ ವೇಳೆ ತಿಳಿದುಬಂದಿದೆ. ಪ್ರಕರಣದಲ್ಲಿ ಈವರೆಗೆ ಎಂಟು
ಜನರನ್ನು ಬಂಧಿ ಸಲಾಗಿದೆ ಎಂದು ಎಸ್ಪಿ ಕೆ.ಎಂ. ಶಾಂತರಾಜು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಎಎಸ್ಪಿ ಎಚ್.ಟಿ. ಶೇಖರ್ ಇದ್ದರು. ಓದಿ : ದ್ವಿಪಥ ಹೆದ್ದಾರಿ ಉನ್ನತೀಕರಣಕ್ಕೆ 87 ಕೋಟಿ ರೂ. ಅನುಮೋದನೆ