Advertisement

ಸೈಬರ್‌ ಸೆಕ್ಯುರಿಟಿ ಕಾರ್ಯಾಗಾರಕ್ಕೆ ಚಾಲನೆ

02:47 PM Feb 03, 2021 | Team Udayavani |

ಶಿವಮೊಗ್ಗ: ತಂತ್ರಜ್ಞಾನಗಳ ಭದ್ರತೆ ಕುರಿತು ಚರ್ಚೆಗಳಾಗುತ್ತಿರುವ ಈ ಸಂದರ್ಭದಲ್ಲಿ ಸೈಬರ್‌ಸೆಕ್ಯುರಿಟಿಯು ತಂತ್ರಜ್ಞಾನ ಬಳಕೆದಾರರಿಗೆ ಅನೇಕ ಭದ್ರತಾ ಸೌಲಭ್ಯ ನೀಡುವಲ್ಲಿ ಪೂರಕವೇದಿಕೆಯಾಗಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಎಸ್‌.ಎನ್‌. ನಾಗರಾಜಅಭಿಪ್ರಾಯಪಟ್ಟರು.

Advertisement

ನಗರದ ಜೆ.ಎನ್‌.ಎನ್‌.ಸಿ ಇಂಜಿನಿಯರಿಂಗ್‌ ಕಾಲೇಜಿನ ಎಂ.ಸಿ.ಎವಿಭಾಗ ಹಾಗೂ ಭಾರತ ಸರ್ಕಾರದ ಅಟಲ್‌ ಅಕಾಡೆಮಿ ವತಿಯಿಂದ ಉಪನ್ಯಾಸಕರಿಗಾಗಿಏರ್ಪಡಿಸಿದ್ದ ಐದು ದಿನಗಳ ಅಂತಾರಾಷ್ಟ್ರೀಯ ಸೈಬರ್‌ ಸೆಕ್ಯುರಿಟಿ ಕಾರ್ಯಾಗಾರ ಉದ್ಘಾಟಿಸಿಅವರು ಮಾತನಾಡಿದರು. ಇಂದು ಡಿಜಿಟಲ್‌ ವ್ಯವಹಾರಗಳು, ತಂತ್ರಜ್ಞಾನದ ಬೆಳವಣಿಗೆಹೆಚ್ಚಾಗುತ್ತಿದ್ದು ಇದರ ಜೊತೆಗೆ ಸೈಬರ್‌ ಅಪರಾಧಗಳು ಕೂಡ ಗಣನೀಯವಾಗಿ ಅಧಿಕವಾಗುತ್ತಿದೆ.ಈ ಹಿನ್ನೆಲೆಯಲ್ಲಿ ತಂತ್ರಜ್ಞಾನಗಳ ಭದ್ರತಾ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೈಬರ್‌ ಸೆಕ್ಯುರಿಟಿಪ್ರಮುಖ ಪಾತ್ರ ಪಡೆದುಕೊಂಡಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜೆ.ಎನ್‌.ಎನ್‌.ಸಿಕಾಲೇಜಿನ ಪ್ರಾಂಶುಪಾಲರಾದ ಡಾ|ಶಶೀಧರ ಕುದರಿ ಅಧ್ಯಕ್ಷತೆ ವಹಿಸಿದ್ದರು. ಶೈಕ್ಷಣಿಕ ಡೀನ್‌ಡಾ|ಪಿ.ಮಂಜುನಾಥ, ಎಂ.ಸಿ.ಎ ವಿಭಾಗದ ನಿರ್ದೇಶಕರಾದ ಡಾ|ಎಸ್‌.ಪ್ರಭುದೇವ ಸೇರಿದಂತೆಮತ್ತಿತರರು ಉಪಸ್ಥಿತರಿದ್ದರು.

ಸಹಪ್ರಾಧ್ಯಾಪಕರಾದ ಪಿ.ಅರುಣ್‌ ಕುಮಾರ್‌ ಸ್ವಾಗತಿಸಿದರು.ಡಾ|ಎಸ್‌.ಪಿ. ರಾಘವೇಂದ್ರ ವಂದಿಸಿದರು. ಅರುಣ್‌ ಕುಮಾರ್‌.ಕೆ.ಎಲ್‌ ನಿರೂಪಿಸಿದರು. ದೇಶದವಿವಿಧ ಕಾಲೇಜು ಹಾಗೂ ವಿಶ್ವವಿದ್ಯಾಲಯದ 200 ಕ್ಕೂ ಹೆಚ್ಚು ಉಪನ್ಯಾಸಕರು ಇದ್ದರು.

ಓದಿ :·ವಿಮ್ಸ್ ಮಾಜಿ ನಿರ್ದೇಶಕ ಶ್ರೀನಿವಾಸ್‌ಗೆ ಎಸಿಬಿ ದಾಳಿ ಬಿಸಿ

Advertisement

Udayavani is now on Telegram. Click here to join our channel and stay updated with the latest news.

Next