ರಾಜ್ಯ ಮಾಜಿ ಶಾಸಕರ ವೇದಿಕೆ ಅಧ್ಯಕ್ಷ ಎಚ್. ಎಂ. ಚಂದ್ರಶೇಖರಪ್ಪ ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಡಾ| ವಿಜಯಾದೇವಿ ಅವರಂತಹ ವಿದ್ವಾಂಸರು ವಿಧಾನ ಪರಿಷತ್‌ನಲ್ಲಿ ಕೆಲಸ ಮಾಡುವಂತಾಗಬೇಕು. ವಿಧಾನ ಪರಿಷತ್ ಪರಿಣತರಿಂದ ಕೂಡಿದ
ಸಭೆಯಾಗಿ ಜನರ ಸಮಸ್ಯೆ ಪರಿಹರಿಸುವತ್ತ ಗಮನ ಹರಿಸಬೇಕು. ರಾಜ್ಯದ ಭಾಗವನ್ನು ಬೇರೆ ರಾಜ್ಯದವರು ತಮ್ಮದು ಎಂದು ಪ್ರತಿಪಾದಿಸುತ್ತಿದ್ದರೂ ಜನಪ್ರತಿನಿ ಧಿಗಳು ಧ್ವನಿ ಎತ್ತುತ್ತಿಲ್ಲ. ಆದರೆ ಕೆಲ ಸಮುದಾಯದ ಜನ ಜಾತಿ ಮೀಸಲಾತಿಗೆ ಹೋರಾಟ
ಮಾಡುತ್ತಿದ್ದಾರೆ. ಮೊದಲು ಕನ್ನಡಿಗರಾಗಿ ರಾಜ್ಯದ ಭೂಭಾಗದ ಬಗ್ಗೆ ಧ್ವನಿ ಎತ್ತುವ ಕೆಲಸ ಮಾಡಬೇಕಿದೆ. ಬೆಳಗಾವಿ ವಿಧಾನಸೌಧ
ಕಟ್ಟಡ ನಿರುಪಯುಕ್ತ ಆಗಿದ್ದು, ಅಲ್ಲಿಯೂ ನಿರಂತರವಾಗಿ ವಿಧಾನ ಮಂಡಲದ ಅ ಧಿವೇಶನ ನಡೆಸಬೇಕು ಹಾಗೂ ರಾಜ್ಯದ ಎಲ್ಲರೂ ಒಟ್ಟಾಗಿ
ಬೆಳಗಾವಿಯಲ್ಲಿ ಸೇರಿ ಬೆಳಗಾವಿ ನಮ್ಮದು, ಎಂದಿಗೂ ಬಿಟ್ಟುಕೊಡುವುದಿಲ್ಲ ಎಂಬ ಸಂದೇಶ ಸಾರಬೇಕು ಎಂದು ತಿಳಿಸಿದರು. ಸಾಹಿತಿ ವಿಜಯಾ ಶ್ರೀಧರ್, ಸಾಹಿತಿ ಜಯಪ್ರಕಾಶ ಮಾವಿನಕುಳಿ, ಸಮ್ಮೇಳನ ಸರ್ವಾಧ್ಯಕ್ಷೆ ಡಾ| ವಿಜಯಾದೇವಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಬಿ. ಶಂಕರಪ್ಪ ಮಾತನಾಡಿದರು.
Advertisement
ಪ್ರಮುಖರಾದ ಸುನೀತಾರಾವ್, ಬಿ.ಡಿ. ಭೂಕಾಂತ್, ರುದ್ರಮುನಿ ಸಜ್ಜನ್, ಜಿ.ಪಿ. ಸಂಪತ್‌ಕುಮಾರ್, ಎಂ.ಎನ್. ಸುಂದರ್‌ರಾಜ್, ಚನ್ನಬಸಪ್ಪ ನ್ಯಾಮತಿ, ಹಸನ್ ಬೆಳ್ಳಿಗನೂಡು, ಗೋಪಜ್ಜಿ ನಾಗಪ್ಪ, ಮಧುಗಣಪತಿ ರಾವ್ ಮಡೆನೂರು, ಕೆ.ಬಸವನಗೌಡರು, ತಿರುಮಲಮಾವಿನಕುಳಿ, ಹಿತಕರ ಜೈನ್, ಅಪೇಕ್ಷಾ ಮಂಜುನಾಥ್ ಮತ್ತಿತರರು ಇದ್ದರು.