Advertisement

ಕಲ್ಲು ಕ್ವಾರಿಗೆ ನಾಡಕಚೇರಿ ಸಿಬ್ದಂದಿ ಭೇಟಿ

03:51 PM Feb 02, 2021 | Shreeraj Acharya |

ಸೊರಬ: ತಾಲೂಕಿನ ಚಂದ್ರಗುತ್ತಿ ಗ್ರಾಪಂ·ವ್ಯಾಪ್ತಿಯ ಬಸ್ತಿಕೊಪ್ಪ ಗ್ರಾಮದ ಕಲ್ಲುಗಣಿಗಾರಿಕೆ ಪ್ರದೇಶಗಳಿಗೆ ಕಂದಾಯಇಲಾಖೆ ಸಿಬ್ಬಂದಿ ಸೋಮವಾರ ಭೇಟಿನೀಡಿ ಪರಿಶೀಲನೆ ನಡೆಸಿದರು.

Advertisement

ಆದರೆಗಣಿ ಮತ್ತು ಭೂ ವಿಜ್ಞಾನ ಇಲಾಖೆಹಾಗೂ ಕಂಚಾಯ ಇಲಾಖೆಯಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡದಿರುವುದು ಗ್ರಾಮಸ್ಥರ ಆಕ್ರೋಶಕ್ಕೆಕಾರಣವಾಗಿದೆ.

ಬಸ್ತಿಕೊಪ್ಪ ಗ್ರಾಮದ ಸ. ನಂ.24ರ ಎರಡು ಪ್ರದೇಶಗಳಲ್ಲಿ ಕಲ್ಲುಗಣಿಗಾರಿಕೆಯಲ್ಲಿ ಸೊ#ಧೀಟಕಗಳನ್ನುಬಳಸಲಾಗುತ್ತಿದ್ದು, ಇದರಿಂದ ಗ್ರಾಮಸ್ಥರುರೋಸಿ ಹೋಗಿದ್ದು ಇದನ್ನು ನಿಲ್ಲಿಸಲುಅನೇಕ ಬಾರಿ ಮನವಿ ಸಲ್ಲಿಸಿದ್ದರು. ಈಕುರಿತು “ಉದಯವಾಣಿ’ ಪತ್ರಿಕೆಯಲ್ಲಿ”ಕಲ್ಲು ಕ್ವಾರಿಯಲ್ಲಿ ನಿತ್ಯವೂ ಬ್ಲಾಸ್ಟ್‌!’ಶೀರ್ಷಿಕೆ ಅಡಿಯಲ್ಲಿ ಫೆ.1ರಂದು ವಿಸ್ತೃತವರದಿ ಪ್ರಕಟವಾಗಿತ್ತು. ವರದಿಯಿಂದಎಚ್ಚೆತ್ತ ಚಂದ್ರಗುತ್ತಿ ನಾಡಕಚೇರಿಯಸಿಬ್ಬಂದಿ ಮೇಲಧಿ ಕಾರಿಗಳಿಗೆ ಮಾಹಿತಿನೀಡುವ ನಿಟ್ಟಿನಲ್ಲಿ ಗಣಿಗಾರಿಕೆ ಪ್ರದೇಶಕ್ಕೆತೆರಳಿ ಪರಿಶೀಲನೆ ನಡೆಸಿದರು.

ಮೇಲಧಿಕಾರಿಗಳೇ ಇಲ್ಲ!: ಕಲ್ಲುಗಣಿಗಾರಿಕೆಗೆ ಪರವಾನಗಿ ಪಡೆದಪ್ರದೇಶವು ಸಕ್ರಮವಾಗಿದ್ದರೂಸಹ ಒತ್ತುವರಿಯಾಗಿದೆ ಎನ್ನುವಆರೋಪವಿದೆ. ಈ ಬಗ್ಗೆ ಸಮರ್ಪಕಮಾಹಿತಿ ನೀಡಬೇಕಾದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅ ಧಿಕಾರಿಗಳಾಗಲೀಹಾಗೂ ಸಂಬಂಧಪಟ್ಟ ಮೇಲಧಿ ಕಾರಿಗಳು ಸ್ಥಳಕ್ಕೆ ಭೇಟಿ ನೀಡಲಿಲ್ಲ. ಇನ್ನುಕಂದಾಯ ಇಲಾಖೆ ಅ ಧಿಕಾರಿಗಳುಸ್ಫೋಟಕ ಬಳಕೆ ಬಗ್ಗೆ ಸಮರ್ಪಕ ಮಾಹಿತಿನೀಡದೆ ನುಣುಚಿಕೊಳ್ಳುತ್ತಿದ್ದಾರೆ ಎಂದುಗ್ರಾಮಸ್ಥರು ಆರೋಪಿಸಿದರು.

ಈವರೆಗೂ ನಮ್ಮ ಅಳಲನ್ನುಕೇಳುವರೇ ಇಲ್ಲ. ಇನ್ನು ಸ್ಥಳೀಯ ನಾಡಕಚೇರಿ ಸಿಬ್ಬಂದಿಯಿಂದ ಸಮಸ್ಯೆಗಳುಇತ್ಯರ್ಥವಾಗಲ್ಲ ಇಲಾಖೆಯ ಹಿರಿಯಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಬಗಹರಿಸಬೇಕು ಎಂದು ಬಸ್ತಿಕೊಪ್ಪಗ್ರಾಮಸ್ಥರು ಒತ್ತಾಯಿಸಿದ್ದಾರೆ.

Advertisement

ಓದಿ :·ಹಳೆಯ ವಾಹನಕ್ಕೆ ಗುಜರಿಯ ಹಾದಿ

Advertisement

Udayavani is now on Telegram. Click here to join our channel and stay updated with the latest news.

Next