Advertisement

ಕೊರೊನಾದಿಂದ ಆರ್ಥಿಕ ವ್ಯವಸ್ಥೆಗೆ ಪೆಟ್ಟು: ಡಾ|ಕೆ.ಆರ್‌. ಶ್ರೀಧರ್

03:45 PM Feb 02, 2021 | Shreeraj Acharya |

ಶಿವಮೊಗ್ಗ: ಕೊರೊನಾ ಇಡೀ ಮನುಕುಲವನ್ನೇ ನಡುಗಿಸುವ ಜೊತೆಗೆ ವಿಶ್ವದ ಬಹುತೇಕ ರಾಷ್ಟ್ರಗಳನ್ನು ವ್ಯಾಪಿಸಿ ಸಂಕಷ್ಟಕ್ಕೆ ಸಿಲುಕಿಸಿತು.
ಆರ್ಥಿಕ ವ್ಯವಸ್ಥೆಗೆ ಪೆಟ್ಟು ನೀಡಿತು ಎಂದು ವೈದ್ಯ ಡಾ| ಕೆ.ಆರ್‌. ಶ್ರೀಧರ್‌ ಅಭಿಪ್ರಾಯಪಟ್ಟರು. ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ “ಕೊರೊನಾ ತಂದ ಆತಂಕಗಳು’ ವಿಷಯದ ಕುರಿತು ಮಾತನಾಡಿದ ಅವರು, ಕೊರೊನಾ ವೈರಸ್‌ ವ್ಯಾಪಿಸುವ ನಿಯಂತ್ರಣದ ಹಿನ್ನೆಲೆಯಲ್ಲಿ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಲಾಕ್‌ಡೌನ್‌ ಘೋಷಣೆಯಾಯಿತು. ಭಾರತದಲ್ಲಿಯೂ ಲಾಕ್‌ಡೌನ್‌ ಘೋಷಣೆಯಾಗಿ ಇಡೀಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿತು. ಎಲ್ಲ ಕ್ಷೇತ್ರದ ಜನರು ಕೆಲಸವಿಲ್ಲದೇ ಸಂಕಷ್ಟಕ್ಕೆ ಸಿಲುಕಿದರು. ಇದರಿಂದ ದೇಶದ ಆರ್ಥಿಕತೆ ಮೇಲೂ ಪರಿಣಾಮ ಬೀರಿತು ಎಂದರು.

Advertisement

ಕೊರೊನಾ ಆರಂಭದಲ್ಲಿ ಯಾವುದೇ ಔಷಧ ಇರಲಿಲ್ಲ. ರೋಗ ನಿರೋಧಕ ಶಕ್ತಿಯೇ ಎಲ್ಲರ ಜೀವ ಉಳಿಸುವ ಸಾಧನವಾಯಿತು. ಆದರೂ ಬಹುತೇಕರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಭಯ ಪಡಬೇಡಿ ಎಂದು ಎಷ್ಟೇ ಜಾಗೃತಿ ಮೂಡಿಸಿದರೂ ಆತಂಕಕ್ಕೆ ಒಳಗಾಗುತ್ತಿದ್ದರು. ಕೊರೊನಾ ಎಲ್ಲರ ಜೀವನಶೈಲಿ ಬದಲಿಸಿತ್ತು ಎಂದು ಹೇಳಿದರು.

ಕೊರೊನಾದಿಂದ ಕಲಿತ ಪಾಠವೆಂದರೆ ಬಡವನಿರಲಿ, ಶ್ರೀಮಂತ ಇರಲಿ, ಸರಳ ಜೀವನ ಒಳ್ಳೆಯದು. ಆರೋಗ್ಯದ ಬಗ್ಗೆ ಸದಾ ಕಾಳಜಿ ವಹಿಸುತ್ತಿರಬೇಕು. ನಮ್ಮ ಪರಿಸರದಲ್ಲಿ ಸ್ವತ್ಛತೆ ಕಾಪಾಡಿಕೊಳ್ಳಬೇಕು. ಇನ್ನೂ ಅನೇಕ ಸಂಗತಿಗಳನ್ನು ಕೊರೊನಾ
ಕಲಿಸಿಕೊಟ್ಟಿತು ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯಾ ಧಿಕಾರಿ ಡಾ| ರಾಜೇಶ್‌ ಸುರಗಿಹಳ್ಳಿ ಮಾತನಾಡಿ, ಕೊರೊನಾ ಆರಂಭದಲ್ಲಿ ಎಲ್ಲೆಡೆ ಆತಂಕ ಮೂಡಿಸಿದ್ದರಿಂದ ಜನರು, ಕೊರೊನಾ ಬಂದರೆ ಸಾವು ಖಚಿತಎಂಬಂತೆ ಮಾತನಾಡುತ್ತಿದ್ದರು.= ಆದರೆ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಕೊರೊನಾ ನಿಯಂತ್ರಣದ
ಬಗ್ಗೆ ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲಾಯಿತು. ಶಿವಮೊಗ್ಗ ಜಿಲ್ಲೆಯಲ್ಲಿ 3 ಲಕ್ಷಕ್ಕೂ ಅ ಧಿಕ ಜನರಿಗೆ ಕರೊನಾ ತಪಾಸಣೆ ಮಾಡಲಾಗಿದ್ದು, 22 ಸಾವಿರ ಜನರಲ್ಲಿ ಕೊರೊನಾ ಪಾಸಿಟಿವ್‌ ಕಾಣಿಸಿಕೊಂಡಿದ್ದು, ಶೇ.97.8 ಜನರು ಗುಣಮುಖ ಹೊಂದಿದ್ದಾರೆ. ಪ್ರಸ್ತುತ 55 ಸಕ್ರಿಯ ಪ್ರಕರಣಗಳು ಮಾತ್ರ ಇವೆ ಎಂದರು.

ಭದ್ರಾವತಿಯ ಡಾ| ಕೃಷ್ಣಭಟ್ಟ ಮಾತನಾಡಿ, ಭಾರತದಲ್ಲಿ ಕೊರೊನಾ ವೈರಸ್‌ ಗೆ ಸ್ವದೇಶಿ ನಿರ್ಮಿತ ಲಸಿಕೆ ಸಿದ್ಧಪಡಿಸಿರುವುದು ಅತ್ಯಂತ ಹೆಮ್ಮೆಯ ಸಂಗತಿ. ಇದೀಗ ದೇಶಾದ್ಯಂತ ಕೊರೊನಾ ಲಸಿಕೆ ನೀಡುವ ಅಭಿಯಾನ ಮಾಡಲಾಗುತ್ತಿದೆ. ಭಾರತದಲ್ಲಿ ಸಿದ್ಧವಾಗಿರುವ ಕೊರೊನಾ ವ್ಯಾಕ್ಸಿನ್‌ಗೆ ವಿಶ್ವದ ಬಹುತೇಕ ರಾಷ್ಟ್ರಗಳಿಂದ ಬೇಡಿಕೆ ಬರುತ್ತಿದ್ದು, ಈಗಾಗಲೇ ಅನೇಕ ರಾಷ್ಟ್ರಗಳಿಗೆ ಕಳುಹಿಸಲಾಗುತ್ತಿದೆ ಎಂದರು.

Advertisement

ಸೊರಬದ ಡಾ| ಎಂ.ಕೆ. ಭಟ್‌, ಜಿಲ್ಲಾ ಮೆಗ್ಗಾನ್‌ ಬೋಧನಾ ಆಸ್ಪತ್ರೆಯ ಡಾ| ಎಸ್‌. ಶ್ರೀಧರ್‌, ಡಾ| ಸಿದ್ಧನಗೌಡ ಪಾಟೀಲ್‌, ಮಧು ಗಣಪತಿ ರಾವ್‌ ಮಡೆನೂರು, ಕೆ.ಸಿ. ಬಸವರಾಜ್‌ ಮತ್ತಿತರರಿದ್ದರು.

ಓದಿ : ಕನ್ನಡ ಆಡಳಿತ-ಸಂವಹನ ಭಾಷೆಯಾಗಲಿ: ಡಾ| ವಿಜಯಾದೇವಿ

Advertisement

Udayavani is now on Telegram. Click here to join our channel and stay updated with the latest news.

Next