Advertisement

ಹನಿ ನೀರಾವರಿ ಯೋಜನೆಯಲ್ಲಿನ ಗೊಂದಲ ಪರಿಹರಿಸಿ

06:04 PM Jan 31, 2021 | Shreeraj Acharya |

ಸೊರಬ: ತೋಟಗಾರಿಕ ಇಲಾಖೆಯಲ್ಲಿ ವಿವಿಧ ತೋಟಗಾರಿಕಾ ಬೆಳೆಗಳಿಗೆ ಹನಿ ನೀರಾವರಿ ಯೋಜನೆಯಲ್ಲಿ ಇರುವ ಹಲವು ಗೊಂದಲಗಳನ್ನು ಪರಿಹರಿಸುವಂತೆ ರೈತರು ಹಾಗೂ ವಿವಿಧ ಸಂಘಟನೆಗಳ ಮುಖ್ಯಸ್ಥರು ಶನಿವಾರ ತಹಶೀಲ್ದಾರ್‌ರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

Advertisement

ತೋಟಗಾರಿಕಾ ಬೆಳೆಗಳಿಗೆ ಸರ್ಕಾರದಿಂದ ಹನಿ ನೀರಾವರಿ ಸೌಲಭ್ಯವನ್ನು ಬೆಳೆಗಳಿಗೆ ನೀಡಲು ಶೇ. 90 ಸಬ್ಸಿಡಿ ನೀಡುತ್ತದೆ. ಒಂದು ಎಕರೆಗೆ ಎಷ್ಟು ಹನಿ ನೀರಾವರಿಗಳ ಪರಿಕರಗಳು ಬೇಕು ಎಂಬುದನ್ನು ನಿಗದಿ ಪಡಿಸಿ ನಂತರ ಅದಕ್ಕೆ ಸರ್ಕಾರದಿಂದ ಬರುವ ಶೇ.90 ಸಬ್ಸಿಡಿಯನ್ನು
ರೈತರಿಗೆ ನೀಡಬೇಕು. ಆದರೆ ಸಂಬಂಧ ಪಟ್ಟ ಕಂಪನಿಯ ವಿತರಕರು ಸ್ಥಳ ಪರಿಸಿಲನೆ ಮಾಡಿ ನಕ್ಷೆ ತಯಾರಿಸಿ ಎರಡು ಎಕರೆ ಹನಿ ನೀರಾವರಿ
ಮಾಡಲು 70 ಸಾವಿರಕ್ಕೂ ಹೆಚ್ಚಿನ ಖರ್ಚು ಬರುತ್ತದೆ ಎಂದು ತಿಳಿಸುತ್ತಾರೆ.

2 ಎಕರೆ ಡ್ರಿಪ್‌ ಮಾಡಲು 34 ಸಾವಿರ ಮಾತ್ರ ಸರ್ಕಾರದಿಂದ ಫಲಾನುಭವಿಗಳಿಗೆ ಬರುತ್ತದೆ. ಉಳಿದ ಹೆಚ್ಚುವರಿ ಹಣವನ್ನು ಅ ಧಿಕೃತ
ಮಾರಾಟಗಾರರಿಗೆ ನೀಡುವ ಪರಸ್ಥಿತಿ ಬಂದಿದೆ. ಹಾಗಾದರೆ ಸರ್ಕಾರದಿಂದ ಶೇ. 90 ಸಬ್ಸಿಡಿ ಹೇಗೆ ನೀಡಿದಂತಾಗುತ್ತದೆ. ಪ್ರಸ್ತುತ ಈ ರೀತಿಯ
ವ್ಯವಸ್ಥೆಯಿಂದ ರೈತರು ಹೆಚ್ಚುವರಿಯಾಗಿ ಹಣ ನೀಡುವಂತಾಗಿದೆ. ಇಲಾಖೆಯಲ್ಲಿ ನಡೆಯುತ್ತಿರುವ ಲೋಪದೋಷಗಳನ್ನು ಸರಿಪಡಿಸಿ ಒಂದು ಎಕರೆಗೆ ವೈಜ್ಞಾನಿಕವಾಗಿ ಎಷ್ಟು ಸಾಮಗ್ರಿಗಳು ಹಾಗೂ ವೆಚ್ಚ ಬೇಕು ಎಂಬುದನ್ನು ಪರಿಷ್ಕರಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು
ಎಂದು ಒತ್ತಾಯಿಸಿದ್ದಾರೆ.

ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್‌. ಚಿದಾನಂದ ಗೌಡ, ವಕೀಲರಾದ ಎಂ.ಕೆ. ಯೋಗೇಶ್‌, ಜಿ. ರಾಜಕುಮಾರ್‌, ರೈತರಾದ ಷಣ್ಮುಖಪ್ಪ, ಶ್ರೀನಿವಾಸ, ಕೆರಿಯಪ್ಪ, ಶ್ರೀಕಾಂತ ಇತರರಿದ್ದರು.

ಓದಿ : ಜಿಲ್ಲಾಡಳಿತದಿಂದ ಹುತಾತ್ಮರ ಸ್ಮರಣೆ

Advertisement
Advertisement

Udayavani is now on Telegram. Click here to join our channel and stay updated with the latest news.

Next