Advertisement

ಸರಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ: ಸುಂದರೇಶ್‌

09:42 PM Jul 14, 2021 | Shreeraj Acharya |

ಶಿವಮೊಗ್ಗ: ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು, ಇದಕ್ಕೆ ಲಗಾಮು ಹಾಕುವವರೇ ಇಲ್ಲವಾಗಿದೆ. ಸರಕಾರದ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ ತೀವ್ರಗೊಳಿಸಲಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಎಸ್‌. ಸುಂದರೇಶ್‌ ಹೇಳಿದರು.

Advertisement

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಿಂದ ಆರಂಭಿಸಿ ಪಕ್ಷದ ಸಾಮಾನ್ಯ ಕಾರ್ಯಕರ್ತನವರೆಗೂ ಎಲ್ಲರೂ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ.

ಯಾವುದೇ ಹೊಸ ಯೋಜನೆ ಬಂದರೂ ಕಿಕ್‌ಬ್ಯಾಕ್‌ ಸಿದ್ಧವಾಗಿಯೇ ಇರುತ್ತದೆ. ಶೇ.20ರಷ್ಟೂ ಗುಣಮಟ್ಟದ ಕೆಲಸ ಮಾಡುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಬೇಕಾಬಿಟ್ಟಿ ಕೆಲಸಗಳು ನಡೆಯುತ್ತಿದೆ. ಕಳಪೆ ರಸ್ತೆಯಿಂದ ಹಿಡಿದು ವಿಮಾನ ನಿಲ್ದಾಣದವರೆಗೆ ಕಮಿಷನ್‌ ದಂಧೆ ನಡೆಯುತ್ತಲೇ ಇದೆ. ಇವರನ್ನು ಹೇಳುವವರು ಕೇಳುವವರಾರೂ ಇಲ್ಲವಾಗಿದ್ದು, ಅಧಿ ಕಾರದ ದರ್ಪದಲ್ಲಿ ಮನಸೋ ಇಚ್ಛೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸಚಿವ ಈಶ್ವರಪ್ಪನವರು, ಅಭಿವೃದ್ಧಿ ಹಾಗೂ ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುವುದು ಬಿಟ್ಟು ಚುನಾವಣೆಯಲ್ಲಿ ಹೇಗೆ ಗೆಲ್ಲಬೇಕು, ಗೆದ್ದ ಇತರೆ ಪಕ್ಷದವರನ್ನು ಹೇಗೆ ತಮ್ಮತ್ತ ಆಪರೇಷನ್‌ ಕಮಲದ ಮೂಲಕ ಸೆಳೆದುಕೊಳ್ಳಬೇಕು ಎಂದು ಚಿಂತಿಸುತ್ತಲೇ ಇರುತ್ತಾರೆ.

ಇದರ ಜತೆಗೆ ಈಗ ಪಕ್ಷದೊಳಗೇ ಉದ್ಭವಿಸಿರುವ ಭಿನ್ನಾಭಿಪ್ರಾಯಗಳಿಗೆ ತೇಪೆ ಹಚ್ಚುವುದರಲ್ಲೇ ಮಗ್ನರಾಗಿದ್ದು ಅಭಿವೃದ್ಧಿ ಕಡೆಗಣಿಸಿದ್ದಾರೆಂದು ಟೀಕಿಸಿದರು.

Advertisement

ಕೊರೊನಾ ತಡೆಯುವಲ್ಲಿ ವಿಫಲರಾದರೂ ಡೊನೇಷನ್‌ ಹಾವಳಿ ತಪ್ಪಿಸಲಿಲ್ಲ. ಶಿವಮೊಗ್ಗದಲ್ಲಿ ಸ್ಮಾಟ್‌ ìಸಿಟಿ ಕಾಮಗಾರಿಗಳು ಕಳಪೆಯಾಗಿವೆಯಲ್ಲದೆ ಅಲ್ಲೂ ಕೂಡಾ ಭಾರೀ ಭ್ರಷ್ಟಾಚಾರ ನಡೆದಿದ್ದು, ಸಚಿವರು ಚಕಾರವೆತ್ತುತ್ತಿಲ್ಲ. ವಿಮಾನ ನಿಲ್ದಾಣ ಕಾಮಗಾರಿಯಲ್ಲಂತೂ ಸ್ವಾರ್ಥ ರಾಜಕಾರಣವೇ ತುಂಬಿ ಹೋಗಿದೆ.

ಬಡವರು ಬದುಕುವುದೇ ಕಷ್ಟವಾಗಿದೆ. ನೆರೆ ಪರಿಹಾರ ಇನ್ನೂ ಅರ್ಹರಿಗೆ ದೊರಕಿಲ್ಲ. ಕಾರ್ಮಿಕರಿಗೆ ಕಿಟ್‌ ವ್ಯವಸ್ಥಿತವಾಗಿ ಹಂಚುತ್ತಿಲ್ಲ. ಕಾರ್ಮಿಕರ ಕಾರ್ಡ್‌ ಕೂಡಾ ನವೀಕರಣ ಮಾಡಿಕೊಟ್ಟಿಲ್ಲ ಎಂದು ಸರಕಾರ, ಉಸ್ತುವಾರಿ ಸಚಿವರ ವಿರುದ್ಧ ದೂರಿನ ಸುರಿಮಳೆಗೈದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್‌ ಸದಸ್ಯ ಆರ್‌.ಪ್ರಸನ್ನಕುಮಾರ್‌, ಪಾಲಿಕೆ ವಿಪಕ್ಷ ನಾಯಕಿ ಯಮುನಾ ರಂಗೇಗೌಡ, ಸದಸ್ಯರಾದ ಎಚ್‌.ಸಿ.ಯೋಗೇಶ್‌, ಮೇಹಕ್‌ ಷರೀಫ್‌, ಪ್ರಮುಖರಾದ ಸಿ.ಎಸ್‌.ಚಂದ್ರಭೂಪಾಲ, ವಿಶ್ವನಾಥ್‌ ಕಾಶಿ, ನಾಗರಾಜ್‌, ಚಂದನ್‌ ಎಂ. ಎನ್‌.ಡಿ.ಪ್ರವೀಣ್‌ ಸೇರಿದಂತೆ ಹಲವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next