Advertisement

ಧಾರ್ಮಿಕ ಆಚರಣೆ ಸಂಬಂಧ ಬೆಸೆಯುವ ಸಾಧನ

05:52 PM Jan 31, 2021 | Shreeraj Acharya |

ರಿಪ್ಪನ್‌ಪೇಟೆ: ಕುಟುಂಬಸ್ಥರು ಸೇರಿ ಅಚರಿಸುವ ಧಾರ್ಮಿಕ ಕಾರ್ಯಗಳಿಂದ ಸಂಬಂಧಗಳು ಗಟ್ಟಿಯಾಗಲು ಸಹಕಾರಿ ಯಾಗುವುದೆಂದು
ಕೋಣಂದೂರು ಬೃಹನ್ಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

Advertisement

ಸಮೀಪದ ಜಳಬೈಲು ಗ್ರಾಮದ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಏರ್ಪಡಿಸಲಾಗಿದ್ದ ದೇವಸ್ಥಾನದ ವಾರ್ಷಿಕೋತ್ಸವ ಸಮಾರಂಭದಲ್ಲಿ ಶ್ರೀ ಶೈಲ ಮಲ್ಲಿಕಾರ್ಜುನ ಸ್ವಾಮಿಗೆ ರುದ್ರಾಭಿಷೇಕ ಮತ್ತು ಧಾರ್ಮಿಕ ಧರ್ಮಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಧಾರ್ಮಿಕ ಅಚರಣೆಗಳಿಂದ ಹರಿದು ಹಂಚಿ ಹೋಗಿರುವ ಸಂಬಂಧವನ್ನು ಸಂಘಟಿಸುವ ಮೂಲಕ ಒಂದು ಕಡೆ ಸೇರಿಸಿ ಶ್ರದ್ದಾಭಕ್ತಿಯಿಂದ ಭಗವಂತನನ್ನು ಅರಾ ಧಿಸಿದಾಗ ಸಿಗುವ ತೃಪ್ತಿ ಮತ್ತೆ ಎಲ್ಲಿಯೂ ದೊರೆಯದು ಎಂದರು.

ಹುಂಚ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಶಾಂತಯ್ಯ ಹಾಗೂ ಬಿಲೇಶ್ವರ ಗ್ರಾಮದ ಹಿರಿಯ ಮುಖಂಡ ಧರ್ಮರಾಜ್‌ ಗೌಡ ಹಾಗೂ ಜಳಬೈಲು ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಭಕ್ತವೃಂದದವರು ಇದ್ದರು.

ಓದಿ : ರೈತ ಸಂಘ- ಹಸಿರು ಸೇನೆಯಿಂದ ಸತ್ಯಾಗ್ರಹ

Advertisement

Udayavani is now on Telegram. Click here to join our channel and stay updated with the latest news.

Next