Advertisement

131 ಸಮುದಾಯ ಭವನಗಳಿಗೆ ಅನುದಾನ

06:44 PM Jan 29, 2021 | Shreeraj Acharya |

ಭದ್ರಾವತಿ; ತಾಲೂಕಿನಲ್ಲಿ ಜಾತ್ಯತೀತವಾಗಿ ಎಲ್ಲಾ ಜಾತಿ ಧರ್ಮಗಳ ಅಭಿವೃದ್ಧಿಗಾಗಿ 132 ಸಮುದಾಯ ಭವನಗಳಿಗೆ 31.65 ಕೋಟಿ ರೂ., ರಸ್ತೆ ಅಭಿವೃದ್ಧಿಗೆ 28.65 ಕೋಟಿ ರೂ.ಗಳನ್ನು ನೀರಾವರಿ ನಿಗಮ ಒಂದೇ ಇಲಾಖೆಯಿಂದ ಅನುದಾನ ನೀಡಲಾಗಿದೆ. ಅದರಂತೆ ವೀರಭದ್ರೇಶ್ವರಸ್ವಾಮಿ ಸಮುದಾಯ ಭವನಕ್ಕೂ 50 ಲಕ್ಷ ರೂ. ನೀಡಲಾಗಿದೆ. ಸಮಾಜದ ಅಧ್ಯಕ್ಷ ಮಹೇಶ್‌ಕುನಾರ್‌ ನೇತೃತ್ವದ ತಂಡ ಕೇವಲ ಐದಾರು ತಿಂಗಳಲ್ಲಿ ಕಟ್ಟಡ ನಿರ್ಮಿಸಿ ಉದ್ಘಾಟನೆ ಮಾಡಿರುವುದು ಸಂತಸ ತಂದಿದೆ ಎಂದು ಸಂಸದ ಬಿ.ವೈ. ರಾಘವೇದ್ರ ಹೇಳಿದರು.
ಗುರುವಾರ ವೀರಶೈವ ಸೇವಾ ಸಮಿತಿಯು ಶ್ರೀ ಬನಶಂಕರಿ ಜಾತ್ರಾ ಮಹೋತ್ಸವ ಮತ್ತು ಹಳೇನಗರದ ಶ್ರೀ ವೀರಭದ್ರೇಶ್ವರ ದೇವಾಲಯ ಆವರಣದಲ್ಲಿ ನೀರಾವರಿ ನಿಗಮದ 50 ಲಕ್ಷ ರೂ. ಅನುದಾನದಿಂದ ನಿರ್ಮಿಸಿದ ಶ್ರೀ ವೀರಭದ್ರೇಶ್ವರಸ್ವಾಮಿ ಸಮುದಾಯ ಭವನ ಉದ್ಘಾಟಿಸಿ ನಂತರ ವೀರಶೈವ ಸಭಾಭವನದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.

Advertisement

ಶಿವಮೊಗ್ಗದಿಂದ ಬೆಂಗಳೂರಿಗೆ 3.45 ಕ್ಕೆ ತಲುಪುವ ರೈಲನ್ನು ಬೆಳಗ್ಗೆ 5 ಗಂಟೆಗೆ ತಲುಪುವಂತೆ ಹಾಗೂ ಶಿವಮೊಗ್ಗದಿಂದ ಬೆಳಗ್ಗೆ ಹೊರಟು ಯಶವಂತಪುರದವರೆಗೆ ಹೋಗುತ್ತಿದ್ದ ಜನಶತಾಭಿª ರೈಲು ಇನ್ನು ಮುಂದೆ ಮೆಜಿಸ್ಟಿಕ್‌ವರೆಗೆ ಸಂಚರಿಸುವಂತೆ ರೈಲ್ವೆ ಜನರಲ್‌ ಮ್ಯಾನೇಜರ್‌ ರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಿದ್ದೇವೆ. ಆರ್‌ಎಎಫ್‌ ಬೆಟಾಲಿಯನ್‌ ನಿರ್ಮಾಣದಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ವಹಿವಾಟುಗಳು
ಹೆಚ್ಚುತ್ತವೆ ಎಂದರು.

ಸರ್‌ಎಂವಿ ರವರ ಕನಸಾಗಿದ್ದ ಕೈಗಾರಿಕಾ ನಗರದಲ್ಲಿ ಎಂಪಿಎಂ ಕಾರ್ಖಾನೆ ಮುಚ್ಚಲ್ಪಟ್ಟು ವಿಐಎಸ್‌ಎಲ್‌ ಕ್ಷೀಣಿಸಿದೆ. ಮುಂದಿನ ಮಾರ್ಚ್‌ ತಿಂಗಳೊಳಗೆ ಟೆಂಡರ್‌ ಆಗಿ ಕೆಲವೇ ದಿನಗಳಲ್ಲಿ ಪುನಶ್ಚೇತನಗೊಳ್ಳಲಿವೆ. ಮಹಿಳಾ ಉದ್ಯೋಗಿಗಳ ಸಬಲೀಕರಣಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮುಂದಾಲೋಚನೆ ಹೊತ್ತು ಶಾಹಿ ಗಾರ್ಮೆಂಟ್ಸ್‌ ಆರಂಭಿಸಿದ್ದರಿಂದ ಸುಮಾರು ಎಂಟತ್ತು ಸಾವಿರ ಮಂದಿಗೆ ಉದ್ಯೋಗ ದೊರೆತು ಜೀವನ ಕಟ್ಟಿಕೊಂಡಿದ್ದಾರೆ. ಸದ್ಯದಲ್ಲಿಯೇ ವಿಮಾನ ನಿಲ್ದಾಣ ಕಾರ್ಯ ಪೂರ್ಣಗೊಂಡು ದೇಶ- ವಿದೇಶಗಳ ವಿಮಾನಗಳು ಹಾರಾಡುವುದರಿಂದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಾಗಲಿದೆ. ಅಕ್ಕಮಹಾದೇವಿ ಜನ್ಮ ಸ್ಥಳ ಉಡತಡಿ ಅಭಿವೃದ್ಧಿ, ಜೋಗ ಜಲಪಾತ ಅಭಿವೃದ್ಧಿಗೆ 160 ಕೋಟಿ ರೂ. ನೀಡಲಾಗಿದೆ. ಒಟ್ಟಾರೆ ಭೂಪಟದಲ್ಲಿ ಶಿವಮೊಗ್ಗ ಜಿಲ್ಲೆ ಎದ್ದು ಕಾಣುವಂತಾಗುತ್ತದೆ ಎಂದರು.

ಶಾಸಕ ಬಿ.ಕೆ. ಸಂಗಮೇಶ್ವರ್‌ ಮಾತನಾಡಿ, ಸರಕಾರದಿಂದ ಬರುತ್ತಿರುವ ಯೋಜನೆಗಳೆಲ್ಲಾ ಸಂಸದರು ಶಿಕಾರಿಪುರಕ್ಕೆ ಸುರಿಯುತ್ತಿದ್ದಾರೆ.

ಭದ್ರಾವತಿಗೆ ಏನೂ ಕೊಡುತ್ತಿಲ್ಲ. ನಗರದ 35 ವಾಡ್‌ ಗಳಲ್ಲಿ ಚರಂಡಿ, ವಿದ್ಯುತ್‌, ನೀರು ಮುಂತಾದ ಮೂಲಭೂತ ಸೌಲಭ್ಯಗಳಿಲ್ಲವಾಗಿದೆ. ನಿಮ್ಮ ತಂದೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಕ್ಷೇತ್ರಕ್ಕೆ 200 ಕೋಟಿ ರೂ. ಮತ್ತು ಕ್ಷೇತ್ರದ 45 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಇನ್ನೂ ಹಣ ಬಿಡುಗಡೆ ಮಾಡಿಲ್ಲ. ಅನುದಾನ ಬಿಡುಗಡೆ ಮಾಡಿಸಿ ಎಂದರು.

Advertisement

ತರೀಕೆರೆ ಹಿರೇಮಠದ ಶ್ರೀ ಜಗದೀಶ್ವರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವೀರಶೈವ ಸೇವಾ ಸಮಿತಿ ಅಧ್ಯಕ್ಷ ಆರ್‌. ಮಹೇಶ್‌ಕುಮಾರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೂಡಾ ಅಧ್ಯಕ್ಷ ಜ್ಯೋತಿಪ್ರಕಾಶ್‌, ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ, ಕಾಡಾ ಮಾಜಿ ಅಧ್ಯಕ್ಷ ಗಿರೀಶ್‌ ಪಟೇಲ್‌, ಕರ್ನಾಟಕ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್‌, ವೀರಶೈವ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಆರ್‌. ಎಸ್‌. ಶೋಭಾ ಮಾತನಾಡಿದರು. ಹಟ್ಟಿ ಚಿನ್ನದ ಗಣಿ ಆಡಳಿತ ಮಂಡಳಿ ನಿರ್ದೇಶಕ ಕೂಡ್ಲಿಗೆರೆ ಎಸ್‌. ಹಾಲೇಶ್‌, ನಿರ್ಮಿತಿ ಕೇಂದ್ರದ ನಾಗರಾಜ್‌, ವೀರಶೈವ ಬ್ಯಾಂಕ್‌ ಅಧ್ಯಕ್ಷ ಅಡವೀಶಯ್ಯ, ಬಿ.ಎಸ್‌ .ನಾಗರಾಜ್‌, ವೀರಶೈವ ಸಮಿತಿ ಅಧ್ಯಕ್ಷ ಕೆ.ಸಿ. ವೀರಭದ್ರಪ್ಪ, ಬಿಜೆಪಿಯ ಮಾಧ್ಯಮ ಪ್ರತಿನಿಧಿ  ಜಿ.ಎಸ್‌.ಅವಿನಾಶ್‌ ಮುಂತಾದವರಿದ್ದರು.

ಮಹೇಶ ಶಾಸ್ತ್ರಿ ಮತ್ತು ರುದ್ರಸ್ವಾಮಿ ವೇದಘೋಷ ಹಾಡಿದರು. ಪ್ರಜ್ಞಾ ಕೀರ್ತಿ ಪ್ರಾರ್ಥಿಸಿದರು. ವಕೀಲರಾದ ಉದಯಕುಮಾರ್‌ ನಿರೂಪಿಸಿದರು.

ಓದಿ : ಅಂಬಾದೇವಿ ಜಾತ್ರೆ ರದ್ದಾದರೂ ಮುಕ್ತ ಪ್ರವೇಶ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next