ಶಿವಮೊಗ್ಗ: ಅಹಂಕಾರವನ್ನು ಬಿಟ್ಟಾಗ ಮಾತ್ರ·ಮನುಷ್ಯ ಪರಿಪೂರ್ಣನಾಗಲು ಸಾಧ್ಯಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ
ಅಧಿಕಾರಿ ಎಂ.ಎಲ್. ವೈಶಾಲಿ ಹೇಳಿದರು.
ಗುರುವಾರ ಬೆಕ್ಕಿನಕಲ್ಮಠದ ಗುರುಬಸವಭವನದಲ್ಲಿ ಆಯೋಜಿಸಿದ್ದ ಶ್ರೀ ಗುರುಬಸವಮಹಾಸ್ವಾಮಿಗಳ ಪುಣ್ಯ ಸ್ಮರಣೋತ್ಸವಕಾರ್ಯಕ್ರಮದ ಅಂಗವಾಗಿ ನಡೆದವಿವಿಧ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರುಮಾತನಾಡಿದರು.
ಕನ್ನಡ ಸಾಹಿತ್ಯಕ್ಕೆ ಶರಣರ ಕೊಡುಗೆಅಪಾರವಾಗಿದೆ. ಶರಣರಾದ ಬಸವೇಶ್ವರ,ಅಕ್ಕಮಹಾದೇವಿ ಸೇರಿದಂತೆ ಹಲವಾರುತಮ್ಮದೇ ಆದ ರೀತಿಯಲ್ಲಿವಚನ ಸಾಹಿತ್ಯ ರಚಿಸಿ ಸಮಾಜದಅಂಕುಡೊಂಕುಗಳನ್ನು ತಿದ್ದಿದ್ದಾರೆ.”ದಯೆಯೇ ಧರ್ಮದ ಮೂಲ’ ಎಂಬಸಂದೇಶವನ್ನು ಸಾರಿದ ಶರಣರು ನಿಜವಾದಅಂತರಂಗ ಮತ್ತು ಬಹಿರಂಗ ಶುದ್ಧಿಯಾವುದೆಂದು ಬಿಡಿಸಿ ತಿಳಿಸಿದವರು. ಅವರಸಂದೇಶಗಳು ಇಂದಿಗೂ ವರ್ತಮಾನವಾಗಿವೆಎಂದರು.
ಕಾಯಕವನ್ನೇ ತಮ್ಮ ಗುರಿಯನ್ನಾಗಿಮಾಡಿಕೊಂಡಿದ್ದ ಶರಣರು ಕಾಯಕದಮುಂದೆ ಗುರುವೇ ಎದುರಾದರೂಅದನ್ನು ವಿರೋ ಧಿಸುವುದು ತಪ್ಪಲ್ಲ.ವಿಶ್ವಮಾನವ ಸಂದೇಶವನ್ನು ಶರಣರುಅಂದೇ ಸಾರಿದ್ದರು. ಜಾತಿ ಧರ್ಮಗಳಗೋಡೆಯನ್ನ ಕಿತ್ತು ಎಸೆದಿದ್ದರು. ಸಾಹಿತ್ಯದಮೂಲಕ ಸಮ ಸಮಾಜದ ಸಂದೇಶವನ್ನುಸಾರಿದವರು ಶರಣರು. ಶರಣರಬದುಕೇ ಒಂದು ವಿಸ್ಮಯ. ಭಕ್ತಿ ಮತ್ತುಶಕ್ತಿಯನ್ನು ಜೊತೆಗೂಡಿಸಿದವರು. ಅವರತತ್ವಗಳನ್ನು ನಾವು ಎಂದಿಗೂ ಪಾಲಿಸಬೇಕುಎಂದು ಕರೆ ನೀಡಿದರು.
ಬೆಕ್ಕಿನಕಲ್ಮಠಶ್ರೀಗಳಾದ ಡಾ| ಶ್ರೀ ಮಲ್ಲಿಕಾರ್ಜುನಮುರುಘರಾಜೇಂದ್ರ ಮಹಾಸ್ವಾಮೀಜಿದಿವ್ಯ ಸಾನ್ನಿಧ್ಯ ವಹಿಸಿದ್ದರು. ಗುತ್ತಲ ಕಲ್ಮಠದಪ್ರಭು ಮಹಾಸ್ವಾಮಿ, ಕವಲೇದುರ್ಗದಡಾ| ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿ,ಮೂಲೆಗದ್ದೆಯ ಅಭಿನವ ಚನ್ನಬಸವಮಹಾಸ್ವಾಮಿ, ಚೌಕಿಮಠದ ನೀಲಕಂಠಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.ಸ್ಮರಣೋತ್ಸವ ಸಮಿತಿಯ ಅಧ್ಯಕ್ಷೆ ಬಿ.ವೈ.ಅರುಣಾದೇವಿ, ಕಾರ್ಯಾಧ್ಯಕ್ಷ ಎಚ್.ಎಂ.ಚಂದ್ರಶೇಖರಪ್ಪ, ವೀರಶೈವ ಸಮಾಜದಅಧ್ಯಕ್ಷ ಎನ್.ಜೆ. ರಾಜಶೇಖರ್, ಕ್ಷೇತ್ರಶಿಕ್ಷಣಾ ಧಿಕಾರಿ ಪಿ. ನಾಗರಾಜ್ ಇದ್ದರು.
ಓದಿ :
ಸರಳತೆ ಜಾತ್ರೆ-ಸಮಾಜಮುಖೀ ಸೇವೆ